ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಾಲೆ ಖರ್ಚಿಗೆ ಹಣ ನೀಡ್ತಿಲ್ಲ; ಅಪ್ಪನ ವಿರುದ್ಧ ಮಗ ದೂರು! (Pune | educational expense | divorced father | Domestic Violence Act)
Bookmark and Share Feedback Print
 
ತಾಯಿಗೆ ವಿಚ್ಛೇದನ ನೀಡಿರುವ ತಂದೆ ನನ್ನ ಶೈಕ್ಷಣಿಕ ವೆಚ್ಚವನ್ನು ಭರಿಸುತ್ತಿಲ್ಲ ಎಂದು ಆರೋಪಿಸಿರುವ 10ರ ಹರೆಯದ ಬಾಲಕನೊಬ್ಬ ಪುಣೆಯ ನ್ಯಾಯಾಲಯದ ಕದ ತಟ್ಟಿರುವ ವಿರಳ ಪ್ರಸಂಗವೊಂದು ವರದಿಯಾಗಿದೆ.

ಮಹಿಳೆಯರ ರಕ್ಷಣೆಗೆಂದು 2005ರಲ್ಲಿ ಜಾರಿಗೆ ಬಂದಿದ್ದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಬಳಸುತ್ತಿರುವ ಮೊದಲ ಪುರುಷ ಎಂಬ ದಾಖಲೆ ಈ ಪ್ರಕರಣದೊಂದಿಗೆ ನಿರ್ಮಾಣವಾಗಿದೆ.

ಮನೆಯ ವಿಚಾರಗಳಿಗೆ ಸಂಬಂಧಿಸಿದಂತೆ ನ್ಯಾಯ ಒದಗಿಸುವ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಮಹಿಳೆಯರು ಮಾತ್ರ ಬಳಸಬಹುದು ಎಂಬ ಸಂಪ್ರದಾಯವನ್ನು ಕೂಡ ಈ ಪ್ರಕರಣ ಮುರಿದಂತಾಗಿದೆ.

ಈ ಬಗ್ಗೆ ವಿವರಣೆ ನೀಡಿರುವ ವಕೀಲ ಹಾಗೂ ಮಾನವ ಹಕ್ಕುಗಳ ಸಂಘಟನೆ ಕಾರ್ಯಕರ್ತ ಅಸ್ಸೇಂ ಸಾರೋಡ್, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ ಎರಡರಲ್ಲಿ ಮಗು ಎಂಬ ವಿಶೇಷ ಉಲ್ಲೇಖವಿದ್ದು, ಇದನ್ನೇ ಈ ಪ್ರಕರಣದಲ್ಲಿ ಬಳಸಲಾಗಿದೆ ಎಂದು ತಿಳಿಸಿದ್ದಾರೆ.

10ರ ಹರೆಯದ ಬಾಲಕನನ್ನು ಪ್ರತಿನಿಧಿಸುತ್ತಿರುವ ಈ ವಕೀಲರ ಪ್ರಕಾರ 18 ವರ್ಷದೊಳಗಿನ ಯಾರು ಬೇಕಾದರೂ ಈ ಕಾನೂನಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಮಲ ಮಕ್ಕಳು, ಪೋಷಣೆಗೊಳಗಾದವರು ಅಥವಾ ದತ್ತು ಪಡೆದುಕೊಂಡ ಹೆಣ್ಣು ಅಥವಾ ಗಂಡು ಮಕ್ಕಳು ಕೂಡ ಇದೇ ವ್ಯಾಪ್ತಿಯಲ್ಲಿ ಬರುತ್ತಾರೆ ಎಂದಿದ್ದಾರೆ.

ಈ ಪ್ರಕರಣದ ಬಾಲಕನ ಹೆತ್ತವರ 1999ರ ಜುಲೈ ತಿಂಗಳಲ್ಲಿ ಮದುವೆಯಾಗಿದ್ದರು. ಈತ 2000ನೇ ಇಸವಿಯಲ್ಲಿ ಹುಟ್ಟಿದ್ದ. 2005ರ ಮೇ ತಿಂಗಳಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿತ್ತು.

ಆ ಬಳಿಕ ತನ್ನ ತಂದೆಯಿಂದ ಬಾಲಕನಿಗೆ ಸಾಕಷ್ಟು ಆರ್ಥಿಕ ಸಹಕಾರ ಸಿಗುತ್ತಿಲ್ಲವಾದ್ದರಿಂದ ಕಠಿಣ ಪರಿಸ್ಥಿತಿಯನ್ನು ಆತ ಎದುರಿಸುತ್ತಿದ್ದಾನೆ. ನ್ಯಾಯಾಲಯವು ಪ್ರತೀ ತಿಂಗಳು ಬಾಲಕನ ಶಿಕ್ಷಣ ವೆಚ್ಚಕ್ಕಾಗಿ 500 ರೂಪಾಯಿಗಳನ್ನು ತಂದೆ ನೀಡಬೇಕೆಂದು ಆದೇಶ ನೀಡಿತ್ತು. ಆದರೆ ತಂದೆ ಈ ಮಾತನ್ನು ಉಳಿಸಿಕೊಂಡಿಲ್ಲ ಎಂದು ಆರೋಪಿಸಿ ಬಾಲಕ ಕೋರ್ಟ್ ಮೊರೆ ಹೋಗಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ