ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಯಾ ಪೋಸ್ಟರಿಗೆ ಹೋಳಿ ಬಣ್ಣ; ವಿದ್ಯಾರ್ಥಿಗಳು ಜೈಲಿಗೆ..! (student | UP Sainik School | juvenile home | Mayawati's posters)
Bookmark and Share Feedback Print
 
ಹೋಳಿ ಸಂಭ್ರಮಾಚರಣೆ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರ ಚಿತ್ರಗಳನ್ನೊಳಗೊಂಡಿದ್ದ ಭಿತ್ತಿಪತ್ರಗಳಿಗೆ ಬಣ್ಣ ಹಚ್ಚಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿ, ಬಾಲಾಪರಾಧಿಗಳ ಕೇಂದ್ರಕ್ಕೆ ಕಳುಹಿಸಲಾಗಿದೆ!

ಉತ್ತರ ಪ್ರದೇಶದ ಸೈನಿಕ ಶಾಲೆಯ ನಾಲ್ವರು 12ನೇ ತರಗತಿ ವಿದ್ಯಾರ್ಥಿಗಳು ಹೋಳಿ ಹಬ್ಬದ ದಿನ ರಾತ್ರಿ ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರ ಮೇಲೆ ಸಾರ್ವಜನಿಕ ಸೊತ್ತು ಹಾನಿ ತಡೆ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರನ್ನು ಬಾಲಾಪರಾಧಿಗಳ ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಸಾರ್ವಜನಿಕ ಸೊತ್ತುಗಳನ್ನು ಧ್ವಂಸಗೊಳಿಸುತ್ತಿರುವಾಗಲೇ ನಾವು ಬಂದಿಸಿದ್ದೇವೆ ಎಂದು ಪೊಲೀಸರು ಹೇಳುತ್ತಿದ್ದರೆ, ಶಾಲೆಯ ಪ್ರಕಾರ ಇದು ಪೊಲೀಸರ ಸೃಷ್ಟಿ.

ನಮ್ಮ ವಿದ್ಯಾರ್ಥಿಗಳು ಆ ರೀತಿಯ ದುರ್ವರ್ತನೆ ತೋರಿಸುತ್ತಾರೆ ಎಂಬುದನ್ನು ನಾವು ನಂಬುವುದಿಲ್ಲ ಎಂದು ಶಾಲೆಯ ವಕ್ತಾರ ಕೆ.ಕೆ. ತಿವಾರಿ ಹೇಳಿದ್ದಾರೆ.

ಹೋಳಿ ಹಬ್ಬದ ದಿನ ರಾತ್ರಿ ವಿದ್ಯಾರ್ಥಿಗಳು ಔಷಧಿ ತರಲು ಮೆಡಿಕಲ್ ಕಡೆ ಹೋಗಿದ್ದರು. ಅವರು ವಾಪಸ್ ಬರುತ್ತಿರುವಾಗ ಪೊಲೀಸರು ತಡೆದು, ನೀವು ಮುಖ್ಯಮಂತ್ರಿಯವರ ಭಿತ್ತಿ ಪತ್ರಗಳಿಗೆ ಹಾನಿ ಮಾಡಿದ್ದೀರಿ ಎಂದು ಆರೋಪಿಸಿ ವಶಕ್ಕೆ ತೆಗೆದುಕೊಂಡು ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡಿದ ಪ್ರಕರಣ ದಾಖಲಿಸಿದ್ದಾರೆ ಎಂದು ಶಾಲೆ ವಿವರಣೆ ನೀಡಿದೆ.

ತಮ್ಮ ಪ್ರೌಢಶಾಲಾ ಪರೀಕ್ಷೆಗಳಲ್ಲಿ ಶೇ.85ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆ ಹೊಂದಿ ಪ್ರಶಂಸೆ ಪಡೆದ ವಿದ್ಯಾರ್ಥಿಗಳು ಇಂತಹ ಕುಕೃತ್ಯಗಳಲ್ಲಿ ಯಾಕೆ ಪಾಲ್ಗೊಳ್ಳುತ್ತಾರೆ? ಮಕ್ಕಳ ಮೇಲೆ ಪೊಲೀಸರು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ವಿದ್ಯಾರ್ಥಿಯೊಬ್ಬನ ತಂದೆ ರಾಜಕುಮಾರ್ ಆರೋಪಿಸಿದ್ದಾರೆ.

ಮಕ್ಕಳ ಪರೀಕ್ಷೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಯಾರನ್ನೋ ಕೊಲೆ ಮಾಡಿದವರಂತೆ ಅವರನ್ನು ಬಾಲಾಪರಾಧ ಕೇಂದ್ರದಿಂದ ಪರೀಕ್ಷಾ ಕೇಂದ್ರಕ್ಕೆ ತರಲಾಗುತ್ತಿದೆ ಎಂದು ಅವರು ತನ್ನ ಅಸಮಾಧಾನ ತೋಡಿಕೊಂಡಿದ್ದಾರೆ.

ನಾಲ್ವರು ವಿದ್ಯಾರ್ಥಿಗಳ ಜಾಮೀನು ಅರ್ಜಿಯ ವಿಚಾರಣೆ ಇಂದು ನ್ಯಾಯಾಲಯದಲ್ಲಿ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ