ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚುಡಾವಣೆ ಹೆಚ್ಚಳಕ್ಕೆ ಕಾರಣವಾಗಲಿರುವ ಮಹಿಳಾ ಮೀಸಲಾತಿ! (Eve Teasing | Womens Reservation Bill | Parliament | Mulayam Singh | SP)
Bookmark and Share Feedback Print
 
PTI
ಮಹಿಳಾ ಮೀಸಲಾತಿ ವಿರೋಧಿಸುತ್ತಿದ್ದ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಒಂದು ಹೆಜ್ಜೆ ಮುಂದೆ ಹೋಗಿ, ಮಹಿಳೆಯರಿಗೆ ಮೀಸಲಾತಿ ನೀಡಿದರೆ, ಸಂಸತ್ತಿನಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿಯಾಗಿ ರೋಡ್ ರೋಮಿಯೋಗಳು ಸಂಸತ್ ಸುತ್ತ ಸೀಟಿ ಬಜಾಯಿಸುವಂತಾಗುತ್ತದೆ ಎಂಬರ್ಥದ ಹೇಳಿಕೆ ನೀಡಿ, ಸ್ತ್ರೀ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಟಿವಿ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮುಲಾಯಂ ಅವರು ಮಹಿಳಾ ಮೀಸಲಾತಿ ಮಸೂದೆ ಕುರಿತು ಪ್ರತಿಕ್ರಿಯೆ ಕೇಳಿದಾಗ ಈ ರೀತಿ ಉತ್ತರಿಸಿದ್ದರು. 'ಮಹಿಳಾ ಮೀಸಲಾತಿ ಮಸೂದೆ ಈಗಿರುವ ಸ್ಥಿತಿಯಲ್ಲೇ ಸಂಸತ್ತಿನಲ್ಲಿ ಅಂಗೀಕಾರವಾದರೆ, ಸರಕಾರಿ ಅಧಿಕಾರಿಗಳು, ದೊಡ್ಡ ದೊಡ್ಡ ಉದ್ಯಮಿಗಳ ಪತ್ನಿಯರಿಂದಲೇ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು ತುಂಬಿಬಿಡುತ್ತವೆ. ಇದರಿಂದ ಪುಂಡುಪೋಕರಿಗಳು ಚುಡಾಯಿಸಲು ಪ್ರೇರಣೆ ನೀಡಿದಂತಾಗುತ್ತದೆ' ಎಂದು ನುಡಿದರು.

ಈ ರೀತಿಯ ಹೇಳಿಕೆಯಿಂದ ಆಘಾತ ವ್ಯಕ್ತಪಡಿಸಿರುವ ಆಡಳಿತಾರೂಢ ಪಕ್ಷ ಬಿಎಸ್ಪಿ ರಾಜ್ಯ ಮುಖ್ಸಸ್ಥ, ಸಹಕಾರ ಸಚಿವ ಸ್ವಾಮಿ ಪ್ರಸಾದ್ ಮೌರ್ಯ, ಇಂಥ ಹೇಳಿಕೆಗಳು ಮಹಿಳೆಯರ ಬಗ್ಗೆ ಎಸ್ಪಿ ಮುಖ್ಯಸ್ಥರಿಗಿರುವ ಅಗೌರವವನ್ನು ಸೂಚಿಸುತ್ತದೆ. ಇದು ನಿಜಕ್ಕೂ ಆಘಾತಕಾರಿ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ