ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್ ದೃಷ್ಟಿಯಲ್ಲಿ ಭಗತ್ ಸಿಂಗ್ ಭಯೋತ್ಪಾದಕನಂತೆ! (Bhagat Singh | Abhay Singh Sandhu | Congress | Nehru-Gandhi family)
Bookmark and Share Feedback Print
 
ಸ್ವಾತಂತ್ರ್ಯ ಹೋರಾಟದ ನೇತಾಜಿ ಸುಭಾಶ್ಚಂದ್ರ ಬೋಸ್ ಹಾಗೂ ಭಗತ್ ಬಗ್ಗೆ ಕಾಂಗ್ರೆಸ್‌ಗೆ ಮೊದಲಿನಿಂದಲೂ ಅಸಡ್ಡೆ, ಅದಕ್ಕೆ ಪೂರಕ ಎಂಬಂತೆ ಸ್ವಾತಂತ್ರ್ಯ ಸೇನಾನಿ ವೀರ ಭಗತ್ ಸಿಂಗ್ ಅವರಿಗೆ ಕಾಂಗ್ರೆಸ್ ಪಕ್ಷ ಭಯೋತ್ಪಾದಕ ಹಣೆಪಟ್ಟಿ ಕಟ್ಟಿದೆ ಎಂಬುದಾಗಿ ಭಗತ್ ಸಿಂಗ್ ಅವರ ಕೊನೆಯ ಸಹೋದರ ಕುಲ್ಬೀರ್ ಪುತ್ರ ಅಭಯ್ ಸಿಂಗ್ ಸಂಧು ಗಂಭೀರವಾಗಿ ಆರೋಪಿಸಿದ್ದಾರೆ.

ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಭಗತ್ ಸಿಂಗ್, ಸುಖ್‌ದೇವ್ ಹಾಗೂ ರಾಜಗುರು ಅವರನ್ನು 1931, ಮಾರ್ಚ್ 23ರಂದು ಗಲ್ಲಿಗೇರಿಸಲಾಗಿತ್ತು. ಆದರೆ ಭಗತ್, ಸುಖ್ ಹಾಗೂ ರಾಜಗುರು ಭಾರತೀಯರ ಜನಮಾನಸದಲ್ಲಿ ಇಂದಿಗೂ ವೀರ ಪುತ್ರರಾಗಿಯೇ ಉಳಿದಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಅವರು ಭಯೋತ್ಪಾದಕರಂತಾಗಿದ್ದಾರೆ ಎಂದು 52ರ ಹರೆಯದ ಸಂಧು ದೂರಿದ್ದಾರೆ.

ಗಾಂಧಿ, ನೆಹರು ಕುಟುಂಬವನ್ನು ವೈಭವೀಕರಿಸುವ ಸಲುವಾಗಿಯೇ ಕಾಂಗ್ರೆಸ್ ಮೊದಲಿನಿಂದಲು ಭಗತ್ ಒಬ್ಬ ಭಯೋತ್ಪಾದಕ ಎಂದೇ ಬಿಂಬಿಸುತ್ತಿದೆ ಎಂದು ಮಿಡ್ ಡೇ ಜೊತೆ ಮಾತನಾಡುತ್ತ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಗತ್ ಸಿಂಗ್ ಬಾಂಬ್ ಎಸೆದಿದ್ದ, ಗುಂಡು ಹೊಡೆಯುತ್ತಿದ್ದ ಎಂಬುದಾಗಿ ಕಾಂಗ್ರೆಸ್ ಸಾರುತ್ತಲೇ ಬಂದಿದೆ. ಆದರೆ ಇದು ಸತ್ಯಾಂಶವಲ್ಲ, ಯಾಕೆಂದರೆ ನೆಹರು ಮತ್ತು ಗಾಂಧಿ ಕುಟುಂಬಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಗಲು ಕಾಂಗ್ರೆಸ್ ಹೂಡಿರುವ ಷಡ್ಯಂತ್ರ ಇದು ಎಂದು ಅವರು ಕಿಡಿಕಾರಿದ್ದಾರೆ.

ಸುಭಾಶ್ಚಂದ್ರ ಬೋಸ್ ಹಾಗೂ ಭಗತ್ ಸಿಂಗ್ ಅವರು ಕಾಂಗ್ರೆಸ್ ಸಿದ್ಧಾಂತದ ವಿರುದ್ಧವಾಗಿದ್ದಿರುವುದೇ ಈ ರೀತಿಯ ಅಪಪ್ರಚಾರಕ್ಕೆ ಕಾರಣ ಎಂದು ಹೇಳಿದ್ದಾರೆ.

ಭಗತ್ ಸಿಂಗ್ ಅವರ ಜನಪ್ರಿಯತೆಯನ್ನು ಸಹಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ. ಆದರೂ ಇತ್ತೀಚೆಗೆ ಅವರ ಜನಪ್ರಿಯತೆ ಹೆಚ್ಚಿರುವುದನ್ನು ಮ್ಯಾಗಜೀನ್ ಒಂದರಿಂದ ಬಹಿರಂಗವಾದ ನಂತರ ಕಾಂಗ್ರೆಸ್ ತಡವಾಗಿ ಭಗತ್ ಅವರನ್ನು ಗಣನೆಗೆ ತೆಗೆದುಕೊಂಡಿದೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ