ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಪೃಥ್ವಿ- II ಮತ್ತು ಧನುಷ್ ಎಂಬ ಎರಡು ಕ್ಷಿಪಣಿಗಳನ್ನು ಭಾರತ ಯಶಸ್ವಿಯಾಗಿ ಒರಿಸ್ಸಾ ಕರಾವಳಿಯ ಪ್ರತ್ಯೇಕ ಸ್ಥಳಗಳಲ್ಲಿ ಯಶಸ್ವಿಯಾಗಿ ಉಡ್ಡಯನ ಮಾಡಿದೆ.
ಪೃಥ್ವಿ-II ಹಾಗೂ ಧನುಷ್ ಕ್ಷಿಪಣಿಯನ್ನು ಶನಿವಾರ ಮುಂಜಾನೆ 5.30ಕ್ಕೆ ಏಕಕಾಲದಲ್ಲಿ ಹಾರಿಸಲಾಯಿತು ಚಾಂಡಿಪುರ್ ಬಾಲ್‌ಸೋರ್ ಜಿಲ್ಲೆಯ ರಕ್ಷಣಾ ಇಲಾಖೆ ನಿರ್ದೇಶಕ ಎಸ್.ಪಿ.ಡಾಶ್ ತಿಳಿಸಿದ್ದು, ಇದರಿಂದಾಗಿ ಭಾರತೀಯ ಸೇನೆಗೆ ಇನ್ನಷ್ಟು ಬಲ ಬಂದಂತಾಗಿದೆ. ಈ ಕ್ಷಿಪಣಿಗೆ ದೇಶೀಯ ತಂತ್ರಜ್ಞಾನ ಬಳಸಲಾಗಿದೆ ಹೇಳಿದರು.
ಪೃಥ್ವಿ-II ಕ್ಷಿಪಣಿ ಹಾಗೂ ಧನುಷ್ ಕ್ಷಿಪಣಿಯನ್ನು ಇಲ್ಲಿನ ಚಂಡಿಪುರದಲ್ಲಿ ಮುಂಜಾವಿನ 5.30ಕ್ಕೆ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಭಾರತೀಯ ಮಿಲಿಟರಿ ಪಡೆ ನೇತೃತ್ವದಲ್ಲಿ ಪೃಥ್ವಿII ಮತ್ತು ಧನುಷ್ ಕ್ಷಿಪಣಿಯನ್ನು ಉಡ್ಡಯನ ಮಾಡುವ ಮೂಲಕ ಪರೀಕ್ಷಿಸಲಾಯಿತು. ಈ ಸಂದರ್ಭದಲ್ಲಿ ರಕ್ಷಣಾ ಇಲಾಖೆಯ ಅಧಿಕಾರಿಗಳು, ವಿಜ್ಞಾನಿಗಳು ಹಾಜರಿದ್ದರು.