ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೆಕ್ಸ್ ಸ್ವಾಮಿ ನಿತ್ಯಾನಂದ ವಿರುದ್ಧ 'ಎಕ್ಸ್' ಸ್ವಾಮಿ ದೂರು! (Sex Swami | Douglas McKellor | Swami Nityananda | Swami Nityaprabha)
Bookmark and Share Feedback Print
 
ತಮಿಳು ನಟಿ ರಂಜಿತಾ ಜತೆಗಿನ ಕಾಮಕಾಂಡದ ನಂತರ ತೀವ್ರ ವಿವಾದಕ್ಕೆ ತುತ್ತಾಗಿದ್ದ ಪರಮಹಂಸ ನಿತ್ಯಾನಂದ ಸ್ವಾಮಿಯವರ ಅಮೆರಿಕಾದ ಮಾಜಿ ಶಿಷ್ಯ ಇದೀಗ ಪೊಲೀಸರಿಗೆ ದೂರು ನೀಡಿದ್ದು, ಭಾರತದ ನಕಲಿ ಸ್ವಾಮಿ ಹೆಣ್ಣು ಬಾಕ ಮತ್ತು ಅತ್ಯಾಚಾರಿಯಾಗಿದ್ದರು ಎಂದು ತಿಳಿಸಿದ್ದಾನೆ.

ಕ್ಯಾಲಿಫೋರ್ನಿಯಾದ ಡಗ್ಲಾಸ್ ಮೆಕ್‌ಕೆಲ್ಲರ್ ಎಂಬಾತನೇ ದೂರು ನೀಡಿರುವ ವ್ಯಕ್ತಿ. ಈತ ನಿತ್ಯಾನಂದ ಸ್ವಾಮಿಯ ಸಂಪರ್ಕಕ್ಕೆ ಬಂದ ನಂತರ ತನ್ನ ಹೆಸರನ್ನು 'ಸ್ವಾಮಿ ನಿತ್ಯಪ್ರಭ' ಎಂದು ಬದಲಾಯಿಸಿಕೊಂಡಿದ್ದ. ಬಳಿಕ ಕ್ಯಾಲಿಫೋರ್ನಿಯಾದಲ್ಲಿನ ನಿತ್ಯಾನಂದ ಧ್ಯಾನಪೀಠದ ಮುಖ್ಯಸ್ಥನಾಗಿಯೂ ಕಾರ್ಯನಿರ್ವಹಿಸಿದ್ದ.

ಆದರೆ ಇದೀಗ ನಿತ್ಯಾನಂದ ಸ್ವಾಮಿ ವಿರುದ್ಧ ತಿರುಗಿ ಬಿದ್ದಿರುವ ಮಾಜಿ ಸ್ವಾಮಿ, ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಅವರಲ್ಲಿ ದೂರು ಸಲ್ಲಿಸಿದ್ದು, ಅತ್ಯಾಚಾರ, ದೈಹಿಕ ಕಿರುಕುಳ ಮತ್ತು ವಂಚನೆ ಆರೋಪಗಳನ್ನು ಹೊರಿಸಿದ್ದಾನೆ.

ತಾನು ಹೇಗೆ ನಿತ್ಯಾನಂದ ಸ್ವಾಮಿಯ ಬಲೆಗೆ ಬಿದ್ದೆ ಎಂಬುದನ್ನು ತನ್ನ ಬ್ಲಾಗಿನಲ್ಲಿ ವಿವರಿಸಿರುವ ಡಗ್ಲಾಸ್, ಅಮೆರಿಕಾದಲ್ಲಿ ನಡೆದಿದ್ದ ಸ್ವಾಮಿಯ ಜ್ಞಾನೋದಯ ಕಾರ್ಯಕ್ರಮದ ಮೊದಲ ಬ್ಯಾಚಿನಲ್ಲಿ ಪಾಲ್ಗೊಂಡಿರುವುದನ್ನು ತಿಳಿಸಿದ್ದಾನೆ.

2007ರ ಜೂನ್ ತಿಂಗಳಲ್ಲಿ ಲಾಸ್ ಎಂಜಲೀಸ್‌ನಲ್ಲಿ ನಡೆದಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಜ್ಞಾನೋದಯ ಪ್ರಮಾಣ ಪತ್ರ ಪಡೆದುಕೊಳ್ಳಲು ನಾನು 4,00,000 ಅಮೆರಿಕನ್ ಡಾಲರ್ (ಸುಮಾರು ಎರಡು ಕೋಟಿ ರೂಪಾಯಿ) ಹಣವನ್ನು ಸ್ವಾಮಿಗೆ ನೀಡಿದ್ದೆ. ಈ ಕಾರ್ಯಕ್ರಮದ ಸಂದರ್ಭದಲ್ಲಿ ನಾನು ತೀರಾ ಹಗುರಗೊಂಡಂತೆ ಭಾಸವಾಗಿತ್ತು ಎಂದು ಡಗ್ಲಾಸ್ ವಿವರಣೆ ನೀಡಿದ್ದಾನೆ.

ನನಗೆ ಯಾವುದೋ ಮಾದಕ ದ್ರವ್ಯವನ್ನು ಯಾವುದೋ ರೀತಿಯಲ್ಲಿ ಸೇವಿಸುವಂತೆ ಮಾಡಿರುವುದು ಅರಿವಿಗೆ ಬಂದಿತ್ತು. ನಮ್ಮ ಕೂದಲಿನ ತುದಿಯನ್ನು ತುಂಡರಿಸಿ ಕೊಡುವಂತೆ ಕೇಳಿದ ನಿತ್ಯಾನಂದ ಸ್ವಾಮಿ, ಬಳಿಕ ಮರಿಜುವಾನಾ (ಅಮಲು ಪದಾರ್ಥ) ಬೀಜದಂತಹ ವಸ್ತುವಿನ ಜತೆಗೆ ಕೂದಲನ್ನು ಅಗ್ನಿಗೆ ಅರ್ಪಿಸಿದ್ದರು. ಆ ಬಳಿಕ ತೇಲಾಡುತ್ತಿರುವ ಅನುಭವ ನನಗಾಗಿತ್ತು ಎಂದಿದ್ದಾನೆ.

ನೀವೆಲ್ಲರೂ ಜ್ಞಾನವನ್ನು ಪಡೆದುಕೊಂಡಿದ್ದೀರಿ ಎಂದು ತಿಳಿಸಿದ ನಿತ್ಯಾನಂದ ಸ್ವಾಮಿ, ಎಲ್ಲರಿಗೂ ಕಾರ್ಯಕ್ರಮದ ಬಳಿಕ ಪ್ರಮಾಣಪತ್ರಗಳನ್ನು ವಿತರಿಸಿದ್ದಾರೆ.

ನಿತ್ಯಾನಂತ ಹೆಣ್ಣು ಬಾಕ...
ಅಮೆರಿಕಾದ ಮಹಿಳಾ ಭಕ್ತರಿಗೆ ನಿತ್ಯಾನಂದ ಸ್ವಾಮಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದೂ ಡಗ್ಲಾಸ್ ಆರೋಪಿಸಿದ್ದಾನೆ.

ಕ್ಯಾಲಿಫೋರ್ನಿಯಾದ ನಾರ್ವಾಕ್‌ನಲ್ಲಿನ ಸನಾತನ ಧರ್ಮ ದೇವಸ್ಥಾನದಲ್ಲಿ ಎರಡು ದಿನಗಳ ಧಾರ್ಮಿಕ ಕಮ್ಮಟ ನಡೆಯುತ್ತಿದ್ದ ಸಂದರ್ಭದಲ್ಲಿ ತಾನು ಸ್ವಾಮಿ ತಂಗಿದ್ದ ಕೊಠಡಿಗೆ ಕಾವಲುಗಾರನಾಗಿ ಕಾರ್ಯನಿರ್ವಹಿಸಿದ್ದೆ. ಮಹಿಳಾ ಅತಿಥಿಗಳೊಂದಿಗೆ ಸ್ವಾಮಿ ಒಳಗಿರುವ ಸಂದರ್ಭದಲ್ಲಿ ಅವರಿಗೆ ಹೊರಗಿನಿಂದ ಯಾರಿಂದಲೂ ತೊಂದರೆಯಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿತ್ತು ಎಂದು ಡಗ್ಲಾಸ್ ತನ್ನ ದೂರಿನಲ್ಲಿ ತಿಳಿಸಿದ್ದಾನೆ.

ನಿತ್ಯಾನಂದ ಸ್ವಾಮಿಗೆ ಹುಡುಗಿಯರ ಬಗ್ಗೆ ಅತೀವ ಮೋಹವಿತ್ತು. ಅವರು ತನ್ನ ಊಟ ಮತ್ತಿತರ ಕಾರ್ಯಗಳನ್ನು ಹದಿಹರೆಯದ ಹುಡುಗಿಯರ ಜತೆಗೆ ತನ್ನ ಖಾಸಗಿ ಕೊಠಡಿಗಳಲ್ಲಿ ಮಾಡುತ್ತಿದ್ದರು. ನಾರ್ವಾಕ್ ಮತ್ತು ಮಾಂಟ್‌ಕ್ಲೈರ್ ಆಶ್ರಮಗಳಲ್ಲಿ ಇಂತಹ ವ್ಯವಸ್ಥೆಗಳಿದ್ದವು ಎಂದು ಅಮೆರಿಕಾದ ಮಾಜಿ ಸ್ವಾಮಿ ದೂರಿದ್ದಾನೆ.

ಆಕರ್ಷಕ ಹುಡುಗಿಯರನ್ನು ಸ್ವಾಮಿ 'ಪುಷ್ಪಗಳು' ಅಥವಾ 'ಹೂವುಗಳು' ಎಂದೇ ಕರೆಯುತ್ತಿದ್ದರು. ಅಲ್ಲದೆ ಅವರನ್ನು ತನ್ನ ಪೂಜೆಗಾಗಿ ಬಳಸುವ ಅಗತ್ಯ ವಸ್ತುಗಳೆಂದು ಅವರು ಪರಿಗಣಿಸಿದ್ದರು ಎಂದೂ ಡಗ್ಲಾಸ್ ತಿಳಿಸಿದ್ದಾನೆ.

ಡಗ್ಲಾಸ್ ದೂರು ನೀಡಿರುವುದನ್ನು ನಿತ್ಯಾನಂದ ಸ್ವಾಮಿಯ ವಕೀಲ ಎಚ್.ಎಸ್. ಚಂದ್ರಮೌಳಿ ಖಚಿತಪಡಿಸಿದ್ದಾರೆ.

ಸಂಬಂಧಪಟ್ಟ ಸುದ್ದಿಯಿದು: ಧ್ಯಾನಪೀಠದ ಎಲ್ಲಾ ಹುದ್ದೆಗೆ ನಿತ್ಯಾನಂದ ಗುಡ್‌ಬೈ
ಸಂಬಂಧಿತ ಮಾಹಿತಿ ಹುಡುಕಿ