ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿವಾದ: ಜೈರಾಮ್ ರಾಜೀನಾಮೆ ಆಫರ್, ತಪ್ಪಿದ ತಲೆದಂಡ? (China | Jairam Ramesh | Manmohan Singh | Beijing)
Bookmark and Share Feedback Print
 
PTI
ಚೀನಾ ಪ್ರವಾಸದ ಸಂದರ್ಭದಲ್ಲಿ ಭಾರತದ ಗೃಹ ಇಲಾಖೆಯ ಕಾರ್ಯವೈಖರಿಯನ್ನು ಟೀಕಿಸಿ ವಿವಾದಕ್ಕೆ ಸಿಲುಕಿರುವ ಕೇಂದ್ರ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ಸೋಮವಾರ ರಾತ್ರಿ ನನ್ನ ರಾಜೀನಾಮೆ ತಗೊಳ್ಳಿ ಎಂಬುದಾಗಿ ಆಫರ್ ನೀಡಿದ್ದಾರೆ. ಆದರೆ ರಮೇಶ್ ಅವರ ರಾಜೀನಾಮೆಯನ್ನು ಸ್ವೀಕರಿಸಿಲ್ಲ ಎಂದು ಪ್ರಧಾನಿ ಕಚೇರಿಯ ಮೂಲಗಳು ಗುರುವಾರ ಸ್ಪಷ್ಟಪಡಿಸಿದೆ.

ಚೀನಾ ಕಂಪನಿಗಳು ಭಾರತ ಪ್ರವೇಶಿಸುವುದಕ್ಕೆ ಗೃಹ ಇಲಾಖೆ ಅನಗತ್ಯ ನಿರ್ಬಂಧಗಳನ್ನು ಹೇರುತ್ತಿದೆ ಎಂದು ಜೈರಾಮ್ ರಮೇಶ್ ಚೀನಾ ಪ್ರವಾಸದ ಸಂದರ್ಭದಲ್ಲಿ ಗಂಭೀರವಾಗಿ ಆರೋಪಿಸಿದ್ದರು. ರಮೇಶ್ ಅವರ ಈ ಹೇಳಿಕೆಗೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ವರಿಷ್ಠರು ಛೀಮಾರಿ ಹಾಕಿದ್ದರು. ಅಲ್ಲದೇ ಗೃಹ ಸಚಿವ ಪಿ.ಚಿದಂಬರಂ ಕೂಡ ಜೈರಾಮ್ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪ್ರಧಾನಿಗೆ ಪತ್ರ ಬರೆದಿದ್ದರು.

ಒಟ್ಟಾರೆ ತಮ್ಮ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ ಎಂಬುದನ್ನು ಗಮನಿಸಿದ ರಮೇಶ್, ಬೀಜಿಂಗ್‌ನಿಂದ ವಾಪಸಾದ ಬಳಿಕ ತಮ್ಮ ಹೇಳಿಕೆ ಕುರಿತು ವಿವರಣೆ ನೀಡಿ ಪಕ್ಷದ ವರಿಷ್ಠೆ ಸೋನಿಯಾಗಾಂಧಿ ಮತ್ತು ಪ್ರಧಾನಿಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಆದರೆ ಏತನ್ಮಧ್ಯೆ ಚೀನಾ ಪರವಾಗಿ, ಭಾರತ ವಿರೋಧಿಯಾಗಿ ಹೇಳಿಕೆ ನೀಡಿರುವ ಸಚಿವ ಜೈರಾಮ್ ರಮೇಶ್ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ಜನತಾ ಪಕ್ಷ ಆಗ್ರಹಿಸಿತ್ತು.

ರಾಜೀನಾಮೆ ತಗೊಳ್ಳಿ-ರಮೇಶ್: ವಿವಾದದ ಕಿಡಿ ಹೆಚ್ಚುತ್ತಿರುವ ಬೆನ್ನಲ್ಲೇ ಜೈರಾಮ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸೋಮವಾರ ರಾತ್ರಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಪ್ರಧಾನಿ ಮನಮೋಹನ್ ಸಿಂಗ್ ರಾಜೀನಾಮೆಯನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿರುವುದಾಗಿ ಪ್ರಧಾನಿ ಕಚೇರಿಯ ಮೂಲಗಳು ಹೇಳಿವೆ.

ಇವೆಲ್ಲಾ ಊಹಾಪೋಹಗಳ ನಡುವೆ ಜೈರಾಮ್, ತಾನು ರಾಜೀನಾಮೆಯ ಆಫರ್ ಕೊಟ್ಟೇ ಇಲ್ಲಾ ಎಂದು ಸಿಎನ್ಎನ್-ಐಬಿಎನ್‌ಗೆ ತಿಳಿಸಿದ್ದಾರೆ. ಕಾಂಗ್ರೆಸ್ ಕೂಡ ರಾಜೀನಾಮೆಯ ಒತ್ತಡ ಹೇರಿಲ್ಲ ಎಂದು ಹೇಳಲಾಗಿದೆ. ತಾನು ಸಂಪುಟದ ಸಚಿವ ಸಹೋದ್ಯೋಗಿಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಲ್ಲ, ನೆರೆ ಚೀನಾದೊಂದಿಗೆ ನಮ್ಮ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಲಹೆ ನೀಡಿದ್ದೆ ಅಷ್ಟೇ ಎಂದು ಜೈರಾಮ್ ಸ್ಪಷ್ಟನೆ ನೀಡಿದ್ದಾರೆ.

ನಮ್ಮ ನೀತಿಯಲ್ಲಾಗಲಿ,ಬೀಜಿಂಗ್ ಜೊತೆಗಿನ ಸೌಹಾರ್ದ ಸಂಬಂಧ ಗಟ್ಟಿಗೊಳಿಸಲು ಭಾರತ ಎಂದಿನಂತೆ ಮುಂದುವರಿಯಲಿದೆ ಎಂದು ಪ್ರಧಾನಿ ಕೂಡ ರಮೇಶ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಜೈರಾಮ್ ಕೂಡ ಗೃಹ ಸಚಿವ ಚಿದಂಬರಂ ಅವರನ್ನು ಭೇಟಿಯಾಗಿ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ