ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪತ್ನಿಯ ಖಾಸಗಿ ಅಂಗವನ್ನು ತಂತಿಯಲ್ಲಿ ಹೊಲಿದ ಗಂಡ! (Jharkhand | Extra-marital relationship | Domestic Violance | Marriage)
ಈ ಕಥೆ ಕೇಳಿದರೆ ಖಂಡಿತವಾಗಿಯೂ ಇಂಥ ಕಟುಕ ಗಂಡನೂ ಇದ್ದಾನಾ ಎಂದು ಆಶ್ಚರ್ಯವಾಗದಿರದು. ತನ್ನ ಹೆಂಡತಿ ತಂದೆತಾಯಿಯನ್ನು ನೋಡಲೆಂದು ಅಮ್ಮನ ಮನೆಗೆ ಹೋಗುತ್ತೇನೆಂದು ಹೇಳಿದ್ದೇ ಆತನ ಪಾಲಿಗೆ ದೊಡ್ಡ ತಪ್ಪಾಗಿ ಕಂಡಿತು. ಅದಕ್ಕೆ ಆತನ ನೀಡಿದ ಶಿಕ್ಷೆ ಆಕೆಯ ಖಾಸಗಿ ಅಂಗಾಂಗವನ್ನು ಕಬ್ಬಿಣದ ತಂತಿಯಲ್ಲಿ ಚುಚ್ಚಿ ಹೊಲಿದು ಕೋಣೆಯಲ್ಲಿ ಕೂಡಿ ಹಾಕಿದ್ದು!
ಹೌದು. ಹೀಗೊಂದು ಘಟನೆ ಜಾರ್ಖಂಡ್‌ನ ಧಾಂಬಾದ್ ನಗರದಲ್ಲಿ ನಡೆದಿದೆ. ಸಾವಿತ್ರಿ ಎಂಬ ಮಹಿಳೆ ತನ್ನ ಗಂಡನ ಬಳಿಯಲ್ಲಿ ತಾನು ತನ್ನ ಅಪ್ಪನ ಮನೆಗೆ ಹೋಗುತ್ತೇನೆ ಎಂದು ಅನುಮತಿ ಕೇಳಿದ್ದಳು. ಹೀಗೆ ಹೇಳಿದ್ದಕ್ಕೆ ಆತ ತನ್ನ ಹೆಂಡತಿಗೆ ಬೇರೆಯವನ ಜೊತೆ ಸಂಬಂಧವಿದೆ ಎಂದು ಆರೋಪಿಸಿ ಆಕೆಯ ಕೈಕಾಲುಗಳನ್ನು ಕಟ್ಟಿ ಹಾಕಿ ಆಕೆಯ ಖಾಸಗಿ ಅಂಗವನ್ನು ಕಬ್ಬಿಣದ ತಂತಿಯಲ್ಲಿ ಹೊಲಿದುಹಾಕಿದ್ದಾನೆ. ಆಕೆಯ ನೋವಿನ ಚೀತ್ಕಾರದ ನಡುವೆಯೂ ಯಾವುದೇ ಕರುಣೆಯೂ ಇಲ್ಲದೆ ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾನೆ.
ಗಂಡನ ಈ ಕ್ರೂರ ಕೃತ್ಯದಿಂದ ಹೇಗೋ ಬೇರೆಯವರ ಸಹಾಯದಿಂದ ಗಂಡನಿಂದ ತಪ್ಪಿಸಿ ಮನೆಯಿಂದ ಹೊರಬಂದು ತನ್ನ ತವರು ಮನೆ ತಲುಪಿದ್ದಾಳೆ. ತವರು ಮನೆಯವರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವುದರೊಂದಿಗೆ ಗಂಡನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆದರೆ ಸಾವಿತ್ರಿ ದೇಹ ತೀವ್ರ ನಿತ್ರಾಣ ಹೊಂದಿದ್ದು. ಆಕೆಯ ಖಾಸಗಿ ಅಂಗಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದ ತಂತಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಲಾಗಿದ್ದು, ಆಕೆಯೀಗ ತೀವ್ರ ನಿಗಾ ಘಟಕದಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಆದರೆ ಆಕೆಯ ಪರಿಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಯ ವೈದ್ಯರು ಹೇಳುವಂತೆ, ಈವರೆಗೆ 30 ವರ್ಷಗಳ ನಮ್ಮ ಅನುಭವದಲ್ಲಿ ಇಂಥ ಬರ್ಬರ ಕೃತ್ಯವನ್ನು ಈವರೆಗೆ ಕಂಡಿಲ್ಲ. ಗಂಡನಾದವ ತನ್ನ ಹೆಂಡತಿಗೆ ಈ ಮಟ್ಟದ ಕ್ರೂರತೆಯನ್ನೂ ಪ್ರದರ್ಶಿಸಿದ್ದನ್ನು ಕಂಡಿದ್ದು ಇದೇ ಮೊದಲು ಎಂದಿದ್ದಾರೆ.