ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಪ್ಪ, ಅಜ್ಜಿಯನ್ನು ಗುಂಡಿಕ್ಕಿ ಕೊಂದ 17ರ ಮಗರಾಯ! (Lucknow | Extra martial affair | Murder)
Bookmark and Share Feedback Print
 
ಇದೊಂದು ವಿಚಿತ್ರ ಘಟನೆ. ತನ್ನ ತಾಯಿಯನ್ನು ತನ್ನ ತಂದೆಯೇ ವಿಪರೀತವಾಗಿ ಹಿಂಸಿಸುತ್ತಿದ್ದ ಎಂಬ ಕಾರಣಕ್ಕೆ ಕೋಪೋದ್ರಿಕ್ತನಾದ ಮಗ ತಂದೆ ಹಾಗೂ ಅಜ್ಜಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ದಾರುಣ ಘಟನೆ ವರದಿಯಾಗಿದೆ.

ಉತ್ಕರ್ಷ್ ಸಾಹು (17) ಎಂಬಾತನೇ ಈ ಕೃತ್ಯ ನಡೆಸಿದ್ದು, ಈತ 12ನೇ ತರಗತಿಯಲ್ಲಿ ಓದುತ್ತಿದ್ದ. ಹೆಡ್ ಕಾನ್ಸ್‌ಟೇಬಲ್ ಆಗಿದ್ದ ತನ್ನ ತಂದೆ ರಾಮಶಂಕರ್ ತನ್ನ ತಾಯಿಗೆ ದಿನವೂ ದೈಹಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಅಪ್ಪ ವಿವಾಹ ಬಾಹಿರ ಸಂಬಂಧಗಳನ್ನೂ ಹೊಂದಿದ್ದರು. ಅಪ್ಪ ಈ ರೀತಿ ಅಮ್ಮನಿಗೆ ಅನ್ಯಾಯ ಮಾಡುವುದನ್ನು ನೋಡಿಕೊಂಡು ಸುಮ್ಮನಿರಲು ನನ್ನಿಂದ ಸಾಧ್ಯವಾಗಲಿಲ್ಲ. ವಿಪರೀತ ಸಿಟ್ಟು ಬರುತ್ತಿತ್ತು. ಅಪ್ಪ ಅಮ್ಮನಿಗೆ ನೀಡುವ ಹಿಂಸೆಗೆ ಅಜ್ಜಿಯೂ ಪ್ರೇರಣೆ ನೀಡುತ್ತಿದ್ದಳು. ಹಾಗಾಗಿ ಅಪ್ಪ ಹಾಗೂ ಅಜ್ಜಿ ಇಬ್ಬರನ್ನೂ ಕೊಂದೆ ಎಂದು ಮಗ ಉತ್ಕರ್ಷ್ ತಪ್ಪೊಪ್ಪಿಕೊಂಡಿದ್ದಾನೆ.

ಆದರೆ ತಪ್ಪೊಪ್ಪಿಕೊಳ್ಳುವುದಕ್ಕೂ ಮೊದಲು ಪೊಲೀಸರು ತನ್ನನ್ನು ಬಂಧಿಸಬಹುದೆಂಬ ಹೆದರಿಕೆಯಿಂದ ಈತ ತನ್ನ ತಂದೆ ಹಾಗೂ ಅಜ್ಜಿಗೆ ಗುಂಡಿಕ್ಕಿ ಕೊಂದ ನಂತರ ತನ್ನ ಕೈಗೂ ಗುಂಡಿಕ್ಕಿ ಗಾಯ ಮಾಡಿಕೊಂಡಿದ್ದಾನೆ. ಆ ಮೂಲಕ ಪೊಲೀಸರನ್ನು ಹಾದಿ ತಪ್ಪಿಸುವ ಪ್ರಯತ್ನ ಆತನದು.

ಸದ್ಯ ಉತ್ಕರ್ಷ್ ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋ ಆಸ್ಪತ್ರೆಗೆ ದಾಖಲಾಗಿದ್ದಾನೆ. ಉತ್ಕರ್ಷನ ಸ್ನೇಹಿತರು, ಆತ ಶಾಲೆಯಲ್ಲಿ ಉತ್ತಮ ಹುಡುಗನಾಗಿದ್ದು, ಹೀಗೆ ಮಾಡಿರುವುದು ನಮಗೆ ಆಶ್ಚರ್ಯವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ