ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರುಣಾನಿಧಿ ಚಿತ್ರಕಥೆ ಬರೆದ ತಮಿಳು ಚಿತ್ರ ತೆರೆಗೆ (Karunanidhi | Tamil Movie | Cinema | Meera Jasmine | Women Empowerment)
Bookmark and Share Feedback Print
 
PR
87ನೇ ಹುಟ್ಟು ಹಬ್ಬ ಆಚರಿಸಿಕೊಂಡ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ಬರೆದಿರುವ ಚಿತ್ರ ಕಥೆಯುಳ್ಳ ಮತ್ತೊಂದು ಚಿತ್ರವು ಗುರುವಾರ ತೆರೆ ಕಾಣುತ್ತಿದೆ. ಮೀರಾ ಜಾಸ್ಮಿನ್ ಮತ್ತು ತೆಲುಗು ನಟ ಉದಯ್ ಕಿರಣ್ ಪ್ರಧಾನ ಭೂಮಿಕೆಯಲ್ಲಿರುವ 'ಪೆಣ್ ಸಿಂಗಮ್' ಎಂಬ ಈ ಚಿತ್ರವು ಕೌಟುಂಬಿಕ ಮನರಂಜನೆಯ ಚಿತ್ರ ಎಂದಿದ್ದಾರೆ ಅದರ ನಿರ್ದೇಶಕ ಬಾಲಿ ಶ್ರೀರಂಗಮ್.

ಕರುಣಾನಿಧಿ ಅವರೇ ಬರೆದಿರುವ ಸುರುಳಿಮಲೈ ಎಂಬ ಕಾದಂಬರಿ ಆಧಾರಿತವಾಗಿರುವ ಈ ಚಿತ್ರವು, ಮಹಿಳೆಯರಲ್ಲಿ ಸ್ವಾಭಿಮಾನ ಮೂಡಿಸುವ ಸಂದೇಶ ಹೊಂದಿದೆ. ದೊಡ್ಡ ದೊಡ್ಡ ಕನಸು ಕಾಣುತ್ತಿರುವ ಮಹಿಳೆಯರ ಜೀವನದ ಹಾದಿಯನ್ನು ಮತ್ತು ಅವರು ಸ್ತ್ರೀತ್ವವನ್ನು ಆನಂದಿಸುವ ಕುರಿತಾದ ಕಥಾಹಂದರವನ್ನು ಹೊಂದಿದೆ.

ಎರಡು ವರ್ಷದ ಹಿಂದೆ ಕರುಣಾನಿಧಿ ಬರೆದ ಚಿತ್ರಕಥೆಯುಳ್ಳ ಉಳಿಯಿನ್ ಒಸೈ ಎಂಬ ಮತ್ತೊಂದು ಚಿತ್ರ ತೆರೆಕಂಡಿತ್ತು. ಅದು ಹಳೆ ಕಾಲದ ಕಥೆ ಹೊಂದಿದ್ದರೆ, ಪೆಣ್ ಸಿಂಗಮ್ ಸಮಕಾಲೀನ ವಿದ್ಯಮಾನದ ಮೇಲೆ ಬೆಳಕು ಚೆಲ್ಲುವ ಚಿತ್ರ. ಕರುಣಾನಿಧಿ ಬರೆದ ಸಂಭಾಷಣೆಗಳು ಸರಳವಾಗಿದೆ ಮತ್ತು ಮನ ಮುಟ್ಟುವಂತಿದೆ. ಇದು ಚಿತ್ರಕ್ಕೆ ವೇಗ ತಂದುಕೊಡುತ್ತದೆ ಎಂದಿದ್ದಾರೆ ಶ್ರೀರಂಗಮ್.

ವಿಶೇಷವೆಂದರೆ, ನಟ-ನಿರ್ದೇಶಕ ಪಾರ್ತಿಬನ್ (ಪಾರ್ಥಿವನ್) ಅವರ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಶ್ರೀರಂಗಮ್, ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಮಹಿಳಾ ಸಬಲೀಕರಣದ ಸಂದೇಶವನ್ನೂ ಈ ಚಿತ್ರ ಹೊಂದಿದೆ ಎನ್ನುತ್ತಾರವರು.

ಪೆಣ್ ಸಿಂಗಮ್ ಚಿತ್ರದಲ್ಲಿ ಮೀರಾ ಜಾಸ್ಮಿನ್‌ಗೆ ಐಪಿಎಸ್ ಅಧಿಕಾರಿಣಿಯ ಪಾತ್ರ. ಚಿತ್ರದಲ್ಲಿ ರಂಭಾ, ಕಾರ್ತಿಕಾ, ರೋಹಿಣಿ, ರಿಚರ್ಡ್, ಮನೋರಮಾ ಮತ್ತು ವಿವೇಕ್ ಮೊದಲಾದವರಿದ್ದಾರೆ. ರಾಜ್ಯದ ಸುಮಾರು 150 ಸಿನಿಮಾ ಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ