ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಿವಾಲ್ವರ್ನಲ್ಲಿ ಆಡುತ್ತಿದ್ದ ಬಾಲಕಿ 'ಫೈರಿಂಗ್': ತಾಯಿ ಸಾವು
(Kanpur | Revolver | Mother | Child | Accidental Firing)
ರಿವಾಲ್ವರ್ನಲ್ಲಿ ಆಡುತ್ತಿದ್ದ ಬಾಲಕಿ 'ಫೈರಿಂಗ್': ತಾಯಿ ಸಾವು
ಕಾನ್ಪುರ, ಗುರುವಾರ, 3 ಜೂನ್ 2010( 12:15 IST )
ತನ್ನ ತಂದೆಯ ರಿವಾಲ್ವರ್ ತೆಗೆದುಕೊಂಡು ಆಟವಾಡುತ್ತಿದ್ದ ಐದು ವರ್ಷ ಪ್ರಾಯದ ಬಾಲಕಿ ಆಕಸ್ಮಿಕವಾಗಿ ಟ್ರಿಗರ್ ಒತ್ತಿದ ಪರಿಣಾಮವಾಗಿ, ಈ ಹುಡುಗಿಯ ತಾಯಿ ಮೃತಪಟ್ಟ ದಾರುಣ ಘಟನೆ ಕಾನ್ಪುರದಿಂದ ವರದಿಯಾಗಿದೆ.
ಇಲ್ಲಿನ ಪನ್ಕಿ ಪ್ರದೇಶದ ಅಂಜನಿ ಅಪಾರ್ಟ್ಮೆಂಟ್ನಲ್ಲಿ ಬುಧವಾರ ಈ ಘಟನೆ ನಡೆದಿದೆ. ಔಷಧಿ ಕಂಪನಿಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿರುವ ರಣಜಯ್ ಸಿಂಗ್ ಅವರು ಕೆಲಸಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದಾಗ, ಬಾಲಕಿಯು ಅಪ್ಪನ ರಿವಾಲ್ವರ್ ತೆಗೆದುಕೊಂಡು ಆಡುತ್ತಿದ್ದಳು.
ಇದನ್ನು ನೋಡಿದ ತಾಯಿ ಬಬಿತಾ (34), ಮಗಳ ಕೈಯಿಂದ ರಿವಾಲ್ವರ್ ಕಿತ್ತುಕೊಳ್ಳಲು ಪ್ರಯತ್ನಿಸಿದಾಗ, ಆಕಸ್ಮಿಕವಾಗಿ ಟ್ರಿಗರ್ ಒತ್ತಿಹೋಯಿತು. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಬಬಿತಾ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತಪಟ್ಟರು.
ಇದು ಆಕಸ್ಮಿಕ ಗುಂಡು ಹಾರಾಟವಾಗಿರುವುದರಿಂದ ಯಾವುದೇ ಕೇಸು ದಾಖಲಿಸಿಲ್ಲ. ಆದರೂ ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.