ಕೋಸಿ ನದಿ ಪ್ರವಾಹದಿಂದ ತತ್ತರಿಸಿದ ಸಂತ್ರಸ್ಥರಿಗೆ ನೀಡಲಾದ ಐದು ಕೋಟಿ ರೂಪಾಯಿಗಳನ್ನು ಹಿಂದಿರುಗಿಸಿದ ಬಿಹಾರ್ ಮುಖ್ಯಮಂತ್ರಿಯ ನಿರ್ಧಾರ, ದುರದೃಷ್ಟಕರ ನಡೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸರಕಾರದ ಅಧಿಕಾರಿಗಳು ಹೇಳಿದ್ದಾರೆ.
ಬಿಹಾರ್ ಸರಕಾರದ ನಿರ್ಧಾರ ದುರದೃಷ್ಟಕರ ಎಂದು ಗುಜರಾತ್ ಸರಕಾರದ ಆರೋಗ್ಯ ಸಚಿವ ಹಾಗೂ ವಕ್ತಾರರಾದ ಜಯನಾರಾಯಣ್ ವ್ಯಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪರಿಹಾರ ಸಂತ್ರಸ್ಥರ ನಿಧಿಯನ್ನು ಸಹೋದರತ್ವದ ಕೊಡುಗೆಯಾಗಿ ಬಿಹಾರ್ ಸರಕಾರಕ್ಕೆ ನೀಡಲಾಗಿತ್ತುಯ ಯಾವುದೇ ರಾಜಕೀಯವಿರಲಿಲ್ಲ ಎಂದು ವ್ಯಾಸ್ ಸ್ಪಷ್ಟಪಡಿಸಿದ್ದಾರೆ.
ಕೋಸಿ ನದಿ ಪ್ರವಾಹ ಸಂತ್ರಸ್ಥರಿಗಾಗಿ ಗುಜರಾತ್ ಸರಕಾರದ ನೆರವು ಎಂದು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತುಗಳು ಪ್ರಕಟವಾದ ನಂತರ ಬಿಹಾರ್ ಸರಕಾರ, ಪರಿಹಾರ ಸಂತ್ರಸ್ಥರ ನೆರವನ್ನು ಗುಜರಾತ್‌ಗೆ ಹಿಂದಿರುಗಿಸಲು ನಿರ್ಧರಿಸಿದೆ.
ಗುಜರಾತ್ ಸರಕಾರ ಸ್ಥಳೀಯ ಪತ್ರಿಕೆಗಳಲ್ಲಿ ನೀಡಿದ ಜಾಹೀರಾತುಗಳು ಅನಾಗರಿಕತ್ವದಿಂದ ಕೂಡಿದ್ದು, ಮೋದಿ ನೀಡಿದ ಐದು ಕೋಟಿ ರೂಪಾಯಿಗಳನ್ನು ಹಿಂದಿರುಗಿಸುವ ತೀರ್ಮಾನ ತೆಗೆದುಕೊಂಡಿರುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಿಡಿಕಾರಿದ್ದಾರೆ.