ನಕ್ಸಲ್‌ವಾದಿಗಳ ಹಿರಿಯ ಮುಖಂಡ ಕಿಶನ್‌ಜೀ ಪೊಲೀಸ್ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಗಾಯಗೊಂಡಿದ್ದು,ಪಶ್ಚಿಮ ಮಿಡ್ನಾಪುರ್ ಜಿಲ್ಲೆಯಲ್ಲಿ ತಮ್ಮ ಸಹಚರರೊಂದಿಗೆ ಅಡಗಿರುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ಶಂಕೆ ವ್ಯಕ್ತಪಡಿಸಿವೆ.
ಮಾವೊ ಮುಖಂಡ ಕಿಶನ್‌ಜೀ ಗಂಭೀರ ಗಾಯಗಳಿಂದ ಬಳಲುತ್ತಿದ್ದು, ತಮ್ಮ ಸಹಚರ ಬಿಕಾಶ್ ಮತ್ತು ನಕ್ಸಲ್‌ನ ಮಹಿಳಾ ವಿಭಾಗದ ನಾಯಕಿ ತಾಲಾಳೊಂದಿಗೆ ಅವಿತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ವರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆದರೆ, ಇವರು ಯಾವ ಪ್ರದೇಶದಲ್ಲಿ ಅಡಗಿದ್ದಾರೆ ಎನ್ನುವ ಬಗ್ಗೆ ನಿಖರವಾದ ವಿವರಗಳನ್ನು ನೀಡಲು ವರ್ಮಾ ನಿರಾಕರಿಸಿದ್ದಾರೆ.
ಹಟಿಲೋತ್ ಅರಣ್ಯ ಪ್ರದೇಶದಲ್ಲಿ ಜಂಟಿ ಪಡೆಗಳ ವಿರುದ್ಧ ನಡೆದ ಸಂಘರ್ಷದಲ್ಲಿ ಕಿಶನ್‌ಜೀ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ದಂತೆವಾಡದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿಯಲ್ಲಿ ನಕ್ಸಲ್ ನಾಯಕಿ ತಾರಾ ನೇತೃತ್ವವಹಿಸಿದ್ದಳು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 30 ಮಾವೋವಾದಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು,ವಿಚಾರಣೆ ಆರಂಭಿಸಿದ್ದಾರೆ. ಘರ್ಷಣೆ ನಡೆದ ಸ್ಥಳದಲ್ಲಿ ಮಾವೋವಾದಿಗಳು ಅಡಗಿರುವ ಶಂಕೆ ವ್ಯಕತವಾಗಿದ್ದು, ಜಂಟಿ ಪಡೆಗಳು ಹುಡುಕಾಟದಲ್ಲಿ ತೊಡಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.