ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯಾವುದೋ ಹಲ್ಲು ತೆಗೆದ ವೈದ್ಯೆಗೆ 57,000 ದಂಡ! (Dentist | extracting wrong tooth | Poonam Devi | Ashima Kohli)
Bookmark and Share Feedback Print
 
ವೈದ್ಯೋ ನಾರಾಯಣೋ ಹರಿ ಎಂದು ದಂತವೈದ್ಯೆಯೆರು ಬಾಯ್ತೆರೆದು ಕೂತ ಮಹಿಳೆಯ ಆರೋಗ್ಯವಂತ ಹಲ್ಲನ್ನು ಕಿತ್ತೆಸೆದ ಘಾಟಿ ವೈದ್ಯೆಯೊಬ್ಬಳಿಗೆ ಗ್ರಾಹಕರ ನ್ಯಾಯಾಲಯವೊಂದು ದಂಡ ಹಾಕಿದೆ. 57,200 ರೂಪಾಯಿಗಳನ್ನು ಪರಿಹಾರ ರೂಪದಲ್ಲಿ ನೀಡಬೇಕೆಂದು ಆದೇಶ ನೀಡಿದೆ.

2009ರಲ್ಲಿ ಜೂನ್ ತಿಂಗಳಲ್ಲಿ ಪೂನಂ ದೇವಿ ಎಂಬವರು ಚಂಡೀಗಢದ ಸೆಕ್ಟರ್ 30ರಲ್ಲಿನ ಆಶಿಮಾ ಕೋಹ್ಲಿಯವರ ಖಾಸಗಿ ದಂತ ವೈದ್ಯಕೀಯ ಆಸ್ಪತ್ರೆಗೆ ಹಲ್ಲು ತೆಗೆಸಲೆಂದು ಹೋಗಿದ್ದಾಗ ಈ ಆವಾಂತರ ನಡೆದಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಸಮಸ್ಯೆಗಳ ಪರಿಹಾರ ವೇದಿಕೆಯು, ದೂರುದಾರಳಿಗೆ ಕಿರುಕುಳ ಮತ್ತು ಮಾನಸಿಕ ವೇದನೆಗಾಗಿ 50,000 ರೂಪಾಯಿ, ಕಾನೂನು ಹೋರಾಟದ ವೆಚ್ಚ 5,000 ಹಾಗೂ ವೈದ್ಯಕೀಯ ಖರ್ಚು 2,000 ರೂಪಾಯಿಗಳನ್ನು ಪರಿಹಾರ ರೂಪವಾಗಿ ನೀಡಬೇಕು ಎಂದು ಆದೇಶ ನೀಡಿದೆ.

ನನ್ನ ಕೆಳ ದವಡೆಯಲ್ಲಿ ನೋವಿದೆ ಎಂದು ನಾನು ಅವರ ಕ್ಲಿನಿಕ್‌ಗೆ ಹೋಗಿದ್ದೆ. ನಿಮ್ಮ ಕೆಳ ದವಡೆಯ ಆರನೇ ಹಲ್ಲು ಬಾಧೆಗೊಳಗಾಗಿದೆ, ಅದನ್ನು ತೆಗೆಯಬೇಕು ಎಂದು ಹಿಂದೊಮ್ಮೆ ವೈದ್ಯರೊಬ್ಬರು ಸಲಹೆ ನೀಡಿದ್ದರು. ಇದನ್ನು ಕೋಹ್ಲಿಯವರ ಗಮನಕ್ಕೆ ತಂದಿದ್ದೆ. ಆದರೆ ಅವರು ಏಳನೇ ಹಲ್ಲಿನಿಂದಾಗಿ ನೋವುಂಟಾಗುತ್ತಿದೆ ಎಂದರು ಎಂದು ಪೂನಮ್ ವಿವರಣೆ ನೀಡಿದ್ದಾರೆ.

ಅದರಂತೆ ಅವರು ಏಳನೇ ಹಲ್ಲನ್ನು ಕಿತ್ತು ತೆಗೆದರು. ಆದರೂ ನನಗೆ ನೋವಿನಿಂದ ಮುಕ್ತಿ ಸಿಗಲಿಲ್ಲ. ನಾನು ಸರಕಾರಿ ವೈದ್ಯರೊಬ್ಬರನ್ನು ಸಂಪರ್ಕಿಸಿದಾಗ, ಸಮಸ್ಯೆಯಿರುವುದು ಆರನೇ ಹಲ್ಲಿನಲ್ಲಿ ಎಂಬುವುದು ಖಚಿತವಾಯಿತು. ನಂತರ ಕೋಹ್ಲಿಯ ಬಳಿ ತೆರಳಿ ಈ ವಿಚಾರ ಪ್ರಸ್ತಾಪಿಸಿದಾಗ, ಆಕೆ ನನ್ನೊಂದಿಗೆ ಮತ್ತು ನನ್ನ ಗಂಡನೊಂದಿಗೆ ಅನುಚಿತವಾಗಿ ವರ್ತಿಸಿದರು. ನನ್ನನ್ನು ಭೇಟಿ ಮಾಡಲೂ ನಿರಾಕರಿಸಿದರು ಎಂದು ದೂರಿಕೊಂಡಿದ್ದಾರೆ.

ನಂತರ ಪೂನಂ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ವೇದಿಕೆಯು ಇಲ್ಲಿನ ವೈದ್ಯಕೀಯ ಕಾಲೇಜಿನ ವಿಶೇಷ ವೈದ್ಯರ ತಂಡವೊಂದನ್ನು ರಚಿಸಿ ತನಿಖೆಗೆ ಸೂಚಿಸಿತ್ತು. ಅದರ ಪ್ರಕಾರ ವೈದ್ಯೆ ಕೋಹ್ಲಿ ತಪ್ಪಾಗಿ ಹಲ್ಲು ಕಿತ್ತಿದ್ದರು. ಪ್ರಕರಣದ ವಾದ-ವಿವಾದಗಳನ್ನು ಆಲಿಸಿದ ವೇದಿಕೆಯು, ಪರಿಹಾರ ನೀಡುವಂತೆ ದಂತವೈದ್ಯೆಗೆ ಸೂಚಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ