ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂದೂ ಭಯೋತ್ಪಾದನೆಯಿಂದ ದೇಶಕ್ಕೆ ಕಳಂಕ: ಕಾಂಗ್ರೆಸ್ (Hindutva terror | Congress | Pakistan | India)
Bookmark and Share Feedback Print
 
ಲಷ್ಕರ್ ಇ ತೋಯ್ಬಾ ಮತ್ತು ತಾಲಿಬಾನ್‌ಗಳಂತಹ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂಬಂತೆ ಅಂತಾರಾಷ್ಟ್ರೀಯ ಅಭಿಪ್ರಾಯವನ್ನು ಕ್ರೋಢೀಕರಿಸುವಲ್ಲಿ ಭಾರತದಲ್ಲಿನ ಹಿಂದೂ ಭಯೋತ್ಪಾದನೆಯಿಂದ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಗಂಭೀರ ಆಪಾದನೆ ಮಾಡಿದೆ.

ಹಲವಾರು ಸ್ಫೋಟಗಳಲ್ಲಿ ಹಿಂದೂ ಬಲಪಂಥೀಯ ಸಂಘಟನೆಗಳು ತೊಡಗಿಸಿಕೊಂಡಿರುವುದರಿಂದ ಭಾರತ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕೆಟ್ಟ ಪ್ರಚಾರಕ್ಕೊಳಗಾಗುತ್ತಿದೆ. ಇದರಿಂದ ಪಾಕಿಸ್ತಾನದ ಮೇಲೆ ಒತ್ತಡ ಹೇರಲು ಕೂಡ ಭಾರತಕ್ಕೆ ಹಿಂಜರಿಕೆ ಉಂಟಾಗಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಹೇಳಿದ್ದಾರೆ.

ಹಲವು ಭಯೋತ್ಪಾದನಾ ಪ್ರಕರಣಗಳಲ್ಲಿ ಹಿಂದೂ ಸಂಘಟನೆಗಳು ತೊಡಗಿಕೊಂಡಿರುವುದನ್ನು ತನಿಖಾ ದಳಗಳು ಹೇಳಿವೆ ಎಂಬುದನ್ನು ಬೆಟ್ಟು ಮಾಡಿರುವ ತಿವಾರಿ, ಇದರಿಂದಾಗಿ ಭಾರತದ ವಿರುದ್ಧವೂ ಪಾಕಿಸ್ತಾನ ಭಯೋತ್ಪಾದನೆಯ ಆರೋಪ ಮಾಡಲು ಅವಕಾಶ ಸಿಕ್ಕಿದಂತಾಗಿದೆ ಎಂದಿದ್ದಾರೆ.

ಮಾಲೆಗಾಂವ್-ಅಜ್ಮೀರ್‌ನಿಂದ ಮೆಕ್ಕಾ ಮಸೀದಿ ಸ್ಫೋಟದವರೆಗೆ ಹಲವು ಸ್ಫೋಟ ಪ್ರಕರಣಗಳಲ್ಲಿ ಹಿಂದೂ ಮೂಲಭೂತವಾದಿ ಸಂಘಟನೆಗಳು ಭಾಗವಹಿಸಿರುವ ಸಾಕ್ಷ್ಯಗಳು ಸಿಕ್ಕಿರುವುದರಿಂದ ಇದು ನಮ್ಮ ಭಯೋತ್ಪಾದನೆಯ ವಿರುದ್ಧದ ಅಂತಾರಾಷ್ಟ್ರೀಯ ಹೋರಾಟವನ್ನು ದುರ್ಬಲಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ.

2006ರ ಮಾಲೆಗಾಂವ್ ಸ್ಫೋಟ, 2007ರ ಹೈದರಾಬಾದ್‌ನ ಮೆಕ್ಕಾ ಮಸೀದಿ ಸ್ಫೋಟ, ಅಜ್ಮೀರ್ ಶರೀಫ್ ದರ್ಗಾ ಸ್ಫೋಟ, ಸಮ್ಜೋತಾ ಎಕ್ಸ್‌ಪ್ರೆಸ್ ಸ್ಫೋಟ ಮತ್ತು ಇತ್ತೀಚಿನ ಮಡ್ಗಾಂವ್ ಸ್ಫೋಟಗಳಲ್ಲಿ ಅಭಿನವ್ ಭಾರತ್, ಸನಾತನ ಸಂಸ್ಥೆ ಮುಂತಾದ ಹಿಂದೂ ಬಲಪಂಥೀಯ ಸಂಘಟನೆಗಳ ಕೈವಾಡವಿದೆ ಎಂದು ಪೊಲೀಸರು ಆರೋಪಿಸುತ್ತಾ ಬಂದಿವೆ. ಆದರೆ ಇದು ಹಿಂದೂಗಳ ವಿರುದ್ಧದ ಪಿತೂರಿ ಎಂದು ಸಂಘಟನೆಗಳು ಹೇಳುತ್ತಾ ಬಂದಿವೆ.
ಸಂಬಂಧಿತ ಮಾಹಿತಿ ಹುಡುಕಿ