ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸತ್‌ನಲ್ಲಿ ಕೇಂದ್ರದ ಉಸಿರುಗಟ್ಟಿಸಲು ಎನ್‌ಡಿಎ ರೆಡಿ (Bharat Bandh | NDA | price rise | Parliament)
Bookmark and Share Feedback Print
 
ಪ್ರತಿಪಕ್ಷಗಳು ಈ ಹಿಂದೆಂದೂ ಕಾಣದ ಒಗ್ಗಟ್ಟಿನಿಂದ ನಡೆಸಿದ ಬೆಲೆಯೇರಿಕೆ ವಿರುದ್ಧದ 'ಭಾರತ ಬಂದ್‌'ನಲ್ಲಿ ಅಭೂತಪೂರ್ವ ಯಶಸ್ಸು ಪಡೆದ ಬೆನ್ನಿಗೆ ಇನ್ನೇನು ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ತಬ್ಬಿಬ್ಬು ಮಾಡಲು ಎನ್‌ಡಿಎ ಸೇರಿದಂತೆ ವಿರೋಧ ಪಕ್ಷಗಳು ಸಿದ್ಧವಾಗುತ್ತಿವೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಯನ್ನು ಹಿಂದಕ್ಕೆ ಪಡೆಯಬೇಕು ಮತ್ತು ಆಹಾರ ವಸ್ತುಗಳು, ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ನಿಯಂತ್ರಿಸಬೇಕು ಎಂಬು ಒತ್ತಾಯಿಸಿ ಜುಲೈ ಐದರಂದು ರಾಷ್ಟ್ರವ್ಯಾಪಿಯಾಗಿ ನಡೆದ 'ಭಾರತ ಬಂದ್'ನಲ್ಲಿ ಬಿಎಸ್‌ಪಿ ಮತ್ತು ಆರ್‌ಜೆಡಿಗಳಂತಹ ಪಕ್ಷಗಳು ಭಾಗವಹಿಸುವುದಿಲ್ಲ ಎಂಬುದು ನಮಗೆ ಅನಿರೀಕ್ಷಿತವಾಗಿರಲಿಲ್ಲ ಎಂದು ಎನ್‌ಡಿಎ ಸಂಚಾಲಕ ಶರದ್ ಪವಾರ್ ಇಂದು ತಿಳಿಸಿದ್ದಾರೆ.

ಇಲ್ಲಿ ಒಂದು ಪಕ್ಷ ಅಥವಾ ಒಬ್ಬ ವ್ಯಕ್ತಿ ಇಲ್ಲಿ ನಾಯಕನಲ್ಲ, ಇಲ್ಲಿ ವಿಚಾರವೇ ನಾಯಕ. ಮುಂದಿನ ದಿನಗಳಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳಲಿವೆ. ಇದರಿಂದ ಬೆಲೆಯೇರಿಕೆ ವಿಚಾರದ ಕುರಿತು ಮುಂಬರುವ ಸಂಸತ್ ಮಳೆಗಾಲದ ಅಧಿವೇಶನದಲ್ಲಿ ಸರಕಾರವು ತೀವ್ರ ಮುಜುಗರ ಅನುಭವಿಸಲಿದೆ ಎಂದು ಯಾದವ್ ಅಭಿಪ್ರಾಯಪಟ್ಟಿದ್ದಾರೆ.

ಜುಲೈ 26ರಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಿವೆ ಎಂದು ನಿರೀಕ್ಷಿಸಲಾಗುತ್ತಿದೆ.

ಭಾರತ ಬಂದ್ ಯಶಸ್ವಿಯಾಗಿ ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಜೆಡಿಯು ಮುಖ್ಯಸ್ಥ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಪ್ರತಿಪಕ್ಷಗಳು ಪ್ರಬಲವಾಗುತ್ತಿವೆ ಎಂಬುದು ಮೊನ್ನೆ ನಡೆದ ಪ್ರತಿಭಟನೆಯಲ್ಲಿ ಸಾಬೀತಾಗಿದೆ, ಇದು ಯುಪಿಎಯೇತರ ಪಕ್ಷಗಳು ಜತೆಯಾಗುತ್ತಿರುವುದರ ಆರಂಭ ಎಂದು ಬಣ್ಣಿಸಿದರು.

ಅದೇ ಹೊತ್ತಿಗೆ ಕಾಂಗ್ರೆಸ್ ವಿರುದ್ಧವೂ ಅವರು ಟೀಕಾ ಪ್ರಹಾರ ನಡೆಸಿದ್ದಾರೆ. ಕಾಂಗ್ರೆಸ್ ಜಾತ್ಯತೀತತೆ ಎಂಬ ಮುಖವಾಡವನ್ನು ತೊಟ್ಟುಕೊಂಡು ಇತರ ಅಗತ್ಯ ವಿಚಾರಗಳನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ. ದೇಶವನ್ನು ಕೇವಲ ಒಂದು ತತ್ವದ ಮೇಲೆ ನಡೆಯುತ್ತಿಲ್ಲ. ಇಲ್ಲಿ ಪ್ರಾಮುಖ್ಯತೆ ನೀಡಬೇಕಾದ ಸಾಕಷ್ಟು ವಿಚಾರಗಳಿವೆ ಎಂದರು.

ಭಾರತ ಬಂದ್ ಸ್ವಾತಂತ್ರ್ಯೋತ್ತರ ಅವಧಿಯಲ್ಲೇ ಅತಿ ಯಶಸ್ವಿಯಾದ ಬಂದ್ ಎಂದು ಬಣ್ಣಿಸಿದ ಯಾದವ್, ಇದರಿಂದಾಗಿ ಕಾಂಗ್ರೆಸ್ ನಡುಗಿ ಹೋಗಿದೆ; ಹಾಗಾಗಿ ಅದರ ನಂತರ ಪ್ರತಿಪಕ್ಷಗಳ ಏಕತೆಯನ್ನು ಒಡೆಯಲು ಅದು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ