ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂಸಾಚಾರ ಕೊನೆಗೊಳಿಸಿ: ಕಾಶ್ಮೀರಿಗಳಿಗೆ ಚಿದಂಬರಂ (P Chidambaram | Kashmir | Omar Abdullah | India)
Bookmark and Share Feedback Print
 
ದಯವಿಟ್ಟು ಹಿಂಸಾಚಾರ ಸರಣಿಯನ್ನು ಕೊನೆಗೊಳಿಸಿ, ತಮ್ಮ ಮಕ್ಕಳನ್ನು ಹಿಂಸಾಕೃತ್ಯಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಡಿ ಎಂದು ಕಾಶ್ಮೀರ ಜನತೆಯಲ್ಲಿ ಕೇಂದ್ರ ಗೃಹಸಚಿವ ಪಿ. ಚಿದಂಬರಂ ಮನವಿ ಮಾಡಿಕೊಂಡಿದ್ದಾರೆ.

ಆಗಿರುವ ಘಟನೆಗಳಿಗೆ ನಾವು ವಿಷಾದ ವ್ಯಕ್ತಪಡಿಸುತ್ತಾ, ಜಮ್ಮು-ಕಾಶ್ಮೀರದಲ್ಲಿನ ಜನತೆ ಪ್ರಸಕ್ತ ನಡೆಯುತ್ತಿರುವ ಹಿಂಸಾಚಾರದ ಸರಣಿಗಳನ್ನು ಕೊನೆಗಾಣಿಸಬೇಕೆಂದು ನಾನು ಕೇಳಿಕೊಳ್ಳುತ್ತಿದ್ದೇನೆ ಎಂದು ಲೋಕಸಭೆಯಲ್ಲಿ ಸಚಿವರು ಮನವಿ ಮಾಡಿದರು.

ಕಾಶ್ಮೀರ ಕಣಿವೆಯ ಹೆತ್ತವರಲ್ಲಿ ಚಿದಂಬರಂ ನಿರ್ದಿಷ್ಟವಾಗಿ ವಿಶೇಷ ಮನವಿ ಮಾಡಿಕೊಂಡರು.

ನಿಮ್ಮ ಮಕ್ಕಳ ಸುರಕ್ಷತೆ ಮತ್ತು ನೆಮ್ಮದಿ ಅಗ್ರಗಣ್ಯವಾಗಿರುವುದು ನಮಗೂ ಮುಖ್ಯ, ಅದೇ ರೀತಿ ಅವರು ನಿಮ್ಮ ಮಕ್ಕಳೇ ಆಗಿರುವುದರಿಂದ ನಿಮಗೂ ಮುಖ್ಯ. ಹಾಗಾಗಿ ಅವರು ಯಾವುದೇ ಹಿಂಸಾಕೃತ್ಯಗಳಲ್ಲಿ ಪಾಲ್ಗೊಳ್ಳದಿರುವಂತೆ ನೀವು ನೋಡಿಕೊಳ್ಳಬೇಕು ಎಂದು ನಾನು ನಿಮ್ಮನ್ನು ಒತ್ತಾಯಿಸುತ್ತಿದ್ದೇನೆ ಎಂದರು.

ಕಳೆದ 54 ದಿನಗಳಿಂದ ಕಾಶ್ಮೀರ ಕಣಿವೆಯಲ್ಲಿ ಜನತೆ ಮತ್ತು ರಕ್ಷಣಾ ಪಡೆಗಳ ನಡುವೆ ಸಂಘರ್ಷ ನಡೆಯುತ್ತಿದ್ದು, ಇದುವರೆಗೆ 45 ಮಂದಿ ಸಾವನ್ನಪ್ಪಿದ್ದಾರೆ. 180ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

2010ರ ಜೂನ್-ಜುಲೈ ತಿಂಗಳಲ್ಲಿ 872 ಕಲ್ಲು ತೂರಾಟ ಪ್ರಕರಣಗಳು ನಡೆದಿವೆ. 1,266 ಭದ್ರತಾ ಸಿಬ್ಬಂದಿಗಳು ಈ ಎರಡು ತಿಂಗಳುಗಳಲ್ಲಿ ಗಾಯಗೊಂಡಿದ್ದಾರೆ ಎಂದು ಸಚಿವರು ಸದನದಲ್ಲಿ ಮಾಹಿತಿ ನೀಡಿದರು.

ತೀವ್ರ ಪ್ರಚೋದನಾಕಾರಿ ಪರಿಸ್ಥಿತಿಯಲ್ಲೂ ಭದ್ರತಾ ಪಡೆಗಳು ತಮ್ಮನ್ನು ತಾವು ತೀರಾ ಆತ್ಮಸಂಯಮಕ್ಕೆ ಒಗ್ಗಿಸಿಕೊಂಡಿದ್ದಾರೆ ಎಂದು ಒತ್ತಿ ಹೇಳುವುದು ನನ್ನ ಕರ್ತವ್ಯವಾಗಿದೆ. ಅವರು ತಮ್ಮ ಸ್ಥೈರ್ಯ ಮತ್ತು ಕೆಚ್ಚನ್ನು ಪ್ರದರ್ಶಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಚಿದಂಬರಂ ಶ್ಲಾಘಿಸಿದ್ದಾರೆ.

ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನೇತೃತ್ವದ ಜಮ್ಮು-ಕಾಶ್ಮೀರ ಸರಕಾರಕ್ಕೆ ಕೇಂದ್ರ ಸರಕಾರವು ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದಿರುವ ಅವರು, ಶಾಂತಿ ಮರುಕಳಿಸುವ ರಾಜ್ಯ ಸರಕಾರದ ಪ್ರಯತ್ನಕ್ಕೆ ಕೇಂದ್ರವು ಬೆಂಬಲ ನೀಡುತ್ತಿದೆ. ಈ ಸಂಬಂಧ ಮಾತುಕತೆಗಳನ್ನೂ ನಡೆಸಲಾಗುತ್ತದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ