ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೋಹತ್ಯೆ ನಿಷೇಧ ಕಾಯ್ದೆ ಬೇಡ: ರಾಷ್ಟ್ರಪತಿಗೆ ಗೌಡ (HD Deve Gowda | JDS | Pratibha Patil | Cattle Bill)
Bookmark and Share Feedback Print
 
ಕರ್ನಾಟಕದ ಬಿಜೆಪಿ ಸರಕಾರವು ಜಾರಿಗೆ ತರಲು ಯತ್ನಿಸುತ್ತಿರುವ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ ನೀಡಬಾರದು ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ನೇತೃತ್ವದ ಜೆಡಿಎಸ್ ನಿಯೋಗ ಒತ್ತಾಯಿಸಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಸಂಸದರು ಇಂದು ಬೆಳಿಗ್ಗೆ ರಾಷ್ಟ್ರಪತಿ ಭವನದಲ್ಲಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿದ್ದು, ವಿಧೇಯಕವನ್ನು ಅಂಗೀಕರಿಸದಿರುವಂತೆ ಮನವಿ ಮಾಡಿದ್ದಾರೆ.

ನಿಯೋಗದಲ್ಲಿ ಗೌಡ, ಕುಮಾರಸ್ವಾಮಿಯನ್ನು ಹೊರತುಪಡಿಸಿ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯಾ, ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ, ಸಂಸದ ಚೆಲುವರಾಯ ಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಕುನಾವರ್ ಡ್ಯಾನಿಷ್ ಆಲಿ ಸೇರಿದಂತೆ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಸಚಿವರಿದ್ದರು.

ರಾಜ್ಯ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಮಂಡನೆಯಾಗಿ ಅಂಗೀಕಾರ ಪಡೆದುಕೊಂಡಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಅಂಕಿತಕ್ಕಾಗಿ ರಾಜ್ಯಪಾಲರಿಗೆ ಬಿಜೆಪಿ ಸರಕಾರವು ಕಳುಹಿಸಿಕೊಟ್ಟಿತ್ತು. ಆದರೆ ಮಸೂದೆಯನ್ನು ಪರಿಶೀಲನೆ ನಡೆಸುವಂತೆ ರಾಷ್ಟ್ರಪತಿಯವರಿಗೆ ರಾಜ್ಯಪಾಲರು ಕಳುಹಿಸಿದ್ದರು.

ಗೋಹತ್ಯೆ ನಿಷೇಧ ಕಾಯ್ದೆಯು ರಾಜಕೀಯ ಉದ್ದೇಶಗಳನ್ನು ಹೊಂದಿದೆ. ಇದು ರೈತರು, ಅಲ್ಪಸಂಖ್ಯಾತ ಮುಸ್ಲಿಮರು ಮತ್ತು ದಲಿತರ ವಿರುದ್ಧ ಸರಕಾರವು ಕೋಮುವಾದಿ ನಿಲುವನ್ನು ಹೊಂದಿರುವ ಮಸೂದೆಯಾಗಿದ್ದು, ವಿವಿಧ ಸಮುದಾಯಗಳ ನಡುವೆ ಘರ್ಷಣೆಗೆ ಕಾರಣವಾಗಬಹುದು ಎಂದು ಗೌಡರು ಕಳವಳ ವ್ಯಕ್ತಪಡಿಸಿದ್ದಾರೆ.

ದಲಿತರು, ಹಿಂದುಳಿದ ಅಲ್ಪಸಂಖ್ಯಾತರಿಗೆ ಈ ಕಾಯ್ದೆ ಮಾರಕವಾಗಲಿದೆ. ಕೇವಲ ಅಲ್ಪಸಂಖ್ಯಾತರ ವಿಚಾರವಷ್ಟೇ ಅಲ್ಲ, ಹಿಂದುಳಿದವರು, ಕೃಷಿಕರ ಹಿತಕ್ಕೂ ಮಸೂದೆಯಿಂದ ಧಕ್ಕೆಯಾಗಲಿದೆ. ಇಲ್ಲಿ ಎದ್ದು ಕಾಣುತ್ತಿರುವುದು ರಾಜಕೀಯ ಉದ್ದೇಶ, ಸ್ವ ಹಿತಾಸಕ್ತಿ ಅಜೆಂಡಾ. ಹಾಗಾಗಿ ವಿಧೇಯಕ ಅಂಗೀಕರಿಸಬಾರದು ಎಂದು ರಾಷ್ಟ್ರಪತಿಯವರಲ್ಲಿ ಮನವಿ ಮಾಡಿಕೊಂಡರು.
ಸಂಬಂಧಿತ ಮಾಹಿತಿ ಹುಡುಕಿ