ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿ ಮಾತು ನಿಜ; ಭಾರತದ ಮತಯಂತ್ರ ಸುರಕ್ಷಿತವಲ್ಲ (USA | Indian EVMs | Alok Shukla | PV Indiresan)
Bookmark and Share Feedback Print
 
ಭಾರತದಲ್ಲಿ ಅಸ್ತಿತ್ವದಲ್ಲಿರುವ ವಿದ್ಯುನ್ಮಾನ ಮತಯಂತ್ರವು ಅಕ್ರಮವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿಲ್ಲ, ಸಂಪೂರ್ಣ ಸುರಕ್ಷಿತವಲ್ಲ ಎಂದು ಅಮೆರಿಕಾದ ಮಾಹಿತಿ ತಂತ್ರಜ್ಞಾನ ತಜ್ಞರು ಅಭಿಪ್ರಾಯಪಡುವುದರೊಂದಿಗೆ, ಕಳೆದ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಮಾಡಿದ್ದ ಆರೋಪಕ್ಕೆ ಮತ್ತಷ್ಟು ಪುಷ್ಠಿ ಬಂದಿದೆ.

2009ರ ಲೋಕಸಭಾ ಚುನಾವಣೆಯಲ್ಲಿ ಮತಯಂತ್ರದ ಮೂಲಕ ಅಕ್ರಮ ನಡೆಸಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ಇದನ್ನು ಚುನಾವಣಾ ಆಯೋಗ ಮತ್ತು ಕಾಂಗ್ರೆಸ್ ಒಪ್ಪಿಕೊಳ್ಳದೆ, ಭಾರತದ ಮತಯಂತ್ರಗಳನ್ನು ವಿರೂಪಗೊಳಿಸುವುದು ಸಾಧ್ಯವೇ ಇಲ್ಲ, ಇದು ಅಭೇದ್ಯ ಎಂದಿತ್ತು.

ಈ ಬಗ್ಗೆ ಅಧ್ಯಯನ ನಡೆಸಿರುವ ಅಮೆರಿಕಾದ ತಜ್ಞರು, ಭಾರತದ ಮತಯಂತ್ರದ ದಾಖಲೆಗಳನ್ನು ಬದಲಾಯಿಸುವುದು ಸಾಧ್ಯವಿಲ್ಲ ಎನ್ನುವುದು ನಿಜವಲ್ಲ; ಹಾಗಾಗಿ ಚುನಾವಣಾ ಆಯೋಗವು ಪಾರದರ್ಶಕತೆ ಮತ್ತು ಸುರಕ್ಷತೆಯನ್ನೊಳಗೊಂಡ ಮತದಾನ ಕ್ರಮವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದೆ.

ಭಾರತದ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಅಕ್ರಮ ನಡೆಸಲು ಸಾಧ್ಯವಿಲ್ಲದೇ ಇರುವಂತಹ ಯಂತ್ರಗಳು ಅಲ್ಲದೇ ಇದ್ದರೂ, ಇತರ ನೇರ ಮತದಾನ ದಾಖಲು ಮಾಡಿಕೊಳ್ಳುವ ಮತಯಂತ್ರಗಳು (ಡಿಆರ್ಇ) ಎದುರಿಸುತ್ತಿರುವ ಸಮಸ್ಯೆಗಳಿಂದ ಮುಕ್ತವಾಗಿರುವ ವಿನ್ಯಾಸವನ್ನು ಹೊಂದಿದೆ. ಹಾಗಾಗಿ ವಿಸ್ತೃತ ವ್ಯಾಪ್ತಿಯ ದಾಳಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಭಾರತದ ಮತಯಂತ್ರಗಳಿಗಿವೆ ಎಂದು ತಜ್ಞರು ತಿಳಿಸಿದ್ದಾರೆ.

ಇವಿಎಂ ಯಂತ್ರಗಳನ್ನು ಪರಿಚಯಿಸಿದ ನಂತರ ಯಾವ್ಯಾವ ರೀತಿಯಲ್ಲಿ ಸಂಭಾವ್ಯ ದಾಳಿಗಳು ನಡೆಯುತ್ತವೆ ಎಂಬುದರ ಕುರಿತು ಪರಿಶೀಲನೆ ನಡೆಸಲಾಗಿದೆ. ಈ ಕುರಿತು ಸಾಕಷ್ಟು ಚರ್ಚೆಗಳು ನಡೆಸಿದ ನಂತರ, ಭಾರತದ ಇವಿಎಂಗಳು ನಂಬಲರ್ಹ ಚುನಾವಣಾ ಫಲಿತಾಂಶಗಳಿಗಾಗಿ ಸಾಕಷ್ಟು ಸುರಕ್ಷತೆ, ದೃಢೀಕರಣ ಸಾಮರ್ಥ್ಯ ಅಥವಾ ಪಾರದರ್ಶಕತೆಯನ್ನು ಒದಗಿಸುತ್ತಿಲ್ಲ ಎಂಬ ಅಭಿಪ್ರಾಯಕ್ಕೆ ಅವರು ಬಂದಿದ್ದಾರೆ.

ವಾಷಿಂಗ್ಟನ್‌ನಲ್ಲಿ ನಡೆದ ಉದ್ಯಮದ ಸಮಾವೇಶವೊಂದರಲ್ಲಿ ಭಾರತಕ್ಕೆ ಐಟಿ ತಜ್ಞರು ಈ ಮೇಲಿನ ಸಲಹೆಯನ್ನು ನೀಡಿದ್ದಾರೆ.

ಅದೇ ಸಮಾವೇಶದಲ್ಲಿ ಭಾಗವಹಿಸಿದ್ದ ಭಾರತದ ಉಪ ಚುನಾವಣಾ ಆಯುಕ್ತ ಅಲೋಕ್ ಶುಕ್ಲಾ ಹಾಗೂ ಮದ್ರಾಸ್ ಭಾರತೀಯ ತಾಂತ್ರಿಕ ವಿದ್ಯಾಲಯದ ಮಾಜಿ ನಿರ್ದೇಶಕ - ತಜ್ಞರ ಸಮಿತಿಯ ಅಧ್ಯಕ್ಷ ಪಿ.ವಿ. ಇಂದಿರೇಶನ್ ಭಾರತದ ಮತಯಂತ್ರಗಳು ಅಭೇದ್ಯ ಎಂದು ಸಮರ್ಥಿಸಿಕೊಂಡಿದ್ದಾರೆ.

ಭಾರತದ ಇವಿಎಂಗಳು ಸಂಪೂರ್ಣವಾಗಿ ಅಭೇದ್ಯವಾಗಿವೆ. ಚುನಾವಣಾ ಆಯೋಗವು ನೀಡಿರುವ ಸಲಹೆಯಂತೆ ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ. ಹಾಗಾಗಿ ಮತದಾನ ಪದ್ಧತಿಯನ್ನು ಬದಲಾವಣೆ ಮಾಡಬೇಕೆಂಬ ಬೇಡಿಕೆಗೆ ಯಾವುದೇ ರೀತಿಯ ಸಮರ್ಥನೆಯಿಲ್ಲ ಎಂದು ಇಬ್ಬರೂ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ