ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಒಂದೇ ದಿನದಲ್ಲಿ 111 ಕೇಸುಗಳಿಗೆ ಮುಕ್ತಿ ನೀಡಿದ ಜಡ್ಜ್..! (Andhra judge | Andhra Pradesh | India | JVV Satyanarayana Murthy)
Bookmark and Share Feedback Print
 
ಆಂಧ್ರಪ್ರದೇಶದಲ್ಲಿನ ನ್ಯಾಯಧೀಶರೊಬ್ಬರು ಒಂದೇ ದಿನ 111 ಪ್ರಕರಣಗಳನ್ನು ಮುಗಿಸುವ ಮೂಲಕ ವಿಶ್ವದಾಖಲೆಯತ್ತ ಸಾಗಿದ್ದಾರೆ. ಇಂತಹ ನ್ಯಾಯಾಧೀಶರುಗಳಿದ್ದರೆ ದೇಶದಲ್ಲಿ ಬಾಕಿ ಉಳಿದಿರುವ ಸುಮಾರು ಮೂರು ಕೋಟಿ ಪ್ರಕರಣಗಳು ಶೀಘ್ರದಲ್ಲೇ ವಿಲೇವಾರಿಯಾಗಬಹುದು, ಅಲ್ಲವೇ?

ತೆಲುಗಿನಲ್ಲೇ ತೀರ್ಪು ನೀಡುತ್ತಾ ಬಂದಿರುವುದಕ್ಕೆ ಈ ಹಿಂದೆ ನ್ಯಾಯಾಂಗದಿಂದ ಭಾರೀ ಪ್ರಶಂಸೆ ಗಿಟ್ಟಿಸಿಕೊಂಡಿದ್ದ ಗುಂಟೂರು ಜಿಲ್ಲೆಯ ಜೂನಿಯರ್ ಸಿವಿಲ್ ನ್ಯಾಯಾಧೀಶ ಜೆ.ವಿ.ವಿ. ಸತ್ಯನಾರಾಯಣ ಮೂರ್ತಿ ಎಂಬವರೇ ಈ ರೀತಿ ಮ್ಯಾರಥಾನ್ ಕಲಾಪ ನಡೆಸಿದವರು. ಈ ಬಾರಿ ಯಾರೊಬ್ಬರಿಗೂ ಜೈಲು ಶಿಕ್ಷೆ ವಿಧಿಸದೆ ದಂಡ ಹೇರುವ ಮೂಲಕ ಪ್ರಕರಣಗಳನ್ನು ಮುಕ್ತಾಯಗೊಳಿಸಿದ್ದಾರೆ.

78 ಪ್ರಕರಣಗಳಲ್ಲಿ ದಂಡ ಹೇರುವ ಮೂಲಕ ಖಜಾನೆಗೆ 98,000 ರೂಪಾಯಿಗಳನ್ನು ಸೇರಿಸಿರುವ ಈ ನ್ಯಾಯಾಧೀಶರು, ಉಳಿದ 33 ಪ್ರಕರಣಗಳಲ್ಲಿ ಆರೋಪಿಗಳನ್ನು ದೋಷಮುಕ್ತರನ್ನಾಗಿಸಿದ್ದರು. ಈ 111 ಪ್ರಕರಣಗಳಲ್ಲಿ ಕಳ್ಳತನಗಳು, ಬೀದಿ ಜಗಳ ಮತ್ತು ಅಪಘಾತಗಳು ಸೇರಿದ್ದವು.

ಮಹಾ ಚುನಾವಣೆ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ನಾಲ್ಕು ಲಕ್ಷ ರೂಪಾಯಿಗಳನ್ನು ಸರಕಾರಿ ಖಜಾನೆಗೆ ಸೇರಿಸುವಂತೆ ಇದೇ ಸಂದರ್ಭದಲ್ಲಿ ಪ್ರಕರಣವೊಂದರಲ್ಲಿ ಅವರು ತೀರ್ಪು ನೀಡಿದ್ದಾರೆ.

ಮೂಲಗಳ ಪ್ರಕಾರ ಅಪರಾಧಿಗಳು ತಾವು ಮಾಡಿದ ಅಪರಾಧಗಳನ್ನು ಒಪ್ಪಿಕೊಂಡು ತಪ್ಪೊಪ್ಪಿಗೆ ಹೇಳಿಕೆ ನೀಡಿದಾಗ ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದರು. ಹಾಗಾಗಿ ನ್ಯಾಯಾಲಯದ ಮತ್ತು ಕಕ್ಷಿಗಾರರ ಸಮಯವನ್ನು ಉಳಿಸುವ ನಿಟ್ಟಿನಲ್ಲಿ ಅವರು ಪ್ರಕರಣವನ್ನು ಬೇಗನೆ ಮುಗಿಸಲು ಯತ್ನಿಸುತ್ತಿದ್ದರು.

ನ್ಯಾಯಾಧೀಶರೊಬ್ಬರು ದಿನವೊಂದರಲ್ಲಿ ಇತ್ಯರ್ಥಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಇದುವರೆಗಿನ ದಾಖಲೆ ಇರುವುದು 80. ಅದನ್ನೀಗ ಸತ್ಯನಾರಾಯಣ ಮೂರ್ತಿ ಮೀರಿದ್ದಾರೆ ಎಂದು ಇಲ್ಲಿನ ಬಾರ್ ಅಸೋಸಿಯೇಷನ್ ಹೇಳಿಕೊಂಡಿದೆ.

2010ರ ಮೇ ತಿಂಗಳಲ್ಲಿ ಹೆಚ್ಚುವರಿ ಜೂನಿಯರ್ ಸಿವಿಲ್ ಜಡ್ಜ್ ಆಗಿ ನೇಮಕಗೊಂಡಿದ್ದ ಅವರು ಇದುವರೆಗೆ 500 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ. ಇದು ಕೇವಲ ಮೂರು ತಿಂಗಳ ಅವಧಿಯಲ್ಲಿ ನಡೆದಿದೆ.

ಮೂರ್ತಿಯವರು ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾಗ 1,850 ಪ್ರಕರಣಗಳು ವಿಲೇವಾರಿಗೆ ಬಾಕಿಯಿದ್ದವು. ಅದೀಗ 1,350ಕ್ಕೆ ಇಳಿಕೆಯಾಗಿದೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ