ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಣಿಗಾರಿಕೆಗೆ ಅನುಮತಿಯಿಲ್ಲ; ಒರಿಸ್ಸಾಕ್ಕೆ ಕೇಂದ್ರ ಟಾಂಗ್ (environment clearance | Vedanta Resources | Jairam Ramesh | Orissa)
Bookmark and Share Feedback Print
 
ಪರಿಸರ ಸಚಿವಾಲಯದ ಸಮಿತಿಯೊಂದು ಮಾಡಿರುವ ಶಿಫಾರಸಿನಂತೆ ಒರಿಸ್ಸಾದಲ್ಲಿ ನಡೆಸಲು ಉದ್ದೇಶಿಸಿದ್ದ 'ವೇದಾಂತ ರಿಸೋರ್ಸಸ್' ಕಂಪನಿಯ 1.7 ಬಿಲಿಯನ್ ಡಾಲರ್ (ಸುಮಾರು 7,960 ಕೋಟಿ ರೂಪಾಯಿ) ಬಾಕ್ಸೈಟ್ ಗಣಿಗಾರಿಕಾ ಯೋಜನೆಗೆ ಕೇಂದ್ರ ಸರಕಾರವು ನಕಾರ ಸೂಚಿಸಿದೆ.

ಇಲ್ಲಿ ಪರಿಸರ ರಕ್ಷಣಾ ಕಾಯ್ದೆ, ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು ಅರಣ್ಯ ಹಕ್ಕು ಕಾಯ್ದೆಗಳ ಕಳವಳಕಾರಿ ಉಲ್ಲಂಘನೆಯಾಗಿರುವುದರಿಂದ ಗಣಿಗಾರಿಕೆಗೆ ಅವಕಾಶ ನಿರಾಕರಿಸಲಾಗಿದೆ ಎಂದು ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ.

ಸಮಿತಿಯು ಸಲ್ಲಿಸಿರುವ ವರದಿಯು ಯಾವುದೇ ರೀತಿಯ ಆವೇಶ, ರಾಜಕೀಯ ಅಥವಾ ಪೂರ್ವಗ್ರಹಗಳನ್ನು ಒಳಗೊಂಡಿಲ್ಲ. ಸೂಕ್ತ ಕಾನೂನುಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಅನುಮತಿ ನಿರಾಕರಿಸಿರುವ ಕಾರಣವನ್ನು ಸಚಿವರು ತಿಳಿಸಿದರು.

ಎನ್.ಸಿ. ಸಕ್ಸೇನಾ ಅವರ ನೇತೃತ್ವದ ಅರಣ್ಯ ಸಲಹಾ ಸಮಿತಿಯು (ಎಫ್ಎಸಿ) ಸಲ್ಲಿಸಿದ್ದ ವರದಿಯನ್ನು ಆಧರಿಸಿ ಸರಕಾರವು ಈ ನಿರ್ಧಾರಕ್ಕೆ ಬಂದಿದೆ. ಒರಿಸ್ಸಾದ ನಿಯಮಗಿರಿ ಹಿಲ್ಸ್‌ನಲ್ಲಿ ವಿವಿಧ ರೀತಿಯ ಉಲ್ಲಂಘನೆಗಳು ನಡೆದಿರುವುದರಿಂದ ಗಣಿಗಾರಿಕೆ ಯೋಜನೆ ಮೇಲೆ ನಿಷೇಧ ಹೇರಬೇಕು ಎಂದು ಸಮಿತಿಯು ಸಲಹೆ ಮಾಡಿತ್ತು.

2008ರಲ್ಲಿ ಒರಿಸ್ಸಾ ಮೈನಿಂಗ್ ಕಾರ್ಪೊರೇಷನ್‌ಗೆ ನೀಡಲಾಗಿದ್ದ ಪರಿಸರ ಪರವಾನಗಿಯಲ್ಲಿ ಅರಣ್ಯ ಹಕ್ಕು ಕಾಯ್ದೆಯ ವಿವಿಧ ನಿಯಮಗಳನ್ನು ಪಾಲಿಸಿಲ್ಲದಿರುವುದು ಸೇರಿದಂತೆ ಹಲವು ಲೋಪಗಳನ್ನು ಸಕ್ಸೇನಾ ವರದಿಯು ಉದಾಹರಿಸಿತ್ತು.

ಗ್ರಾಮಸಭೆಯಿಂದ ಒಪ್ಪಿಗೆ ಪತ್ರವೂ ನಕಲಿ ಎಂದಿರುವ ಸಮಿತಿಯು, ಇಲ್ಲಿ ಭಾರೀ ಪ್ರಮಾಣದ ಅಕ್ರಮಗಳು ನಡೆಯುತ್ತಿರುವುದರಿಂದ ಯೋಜನೆಗೆ ಅಂಗೀಕಾರ ನೀಡದಂತೆ ಶಿಫಾರಸು ಮಾಡಿತ್ತು ಎಂದು ವರದಿಗಳು ಹೇಳಿವೆ.

ಒರಿಸ್ಸಾ ಸರಕಾರವು ಅರಣ್ಯ ಹಕ್ಕು ಕಾಯ್ದೆ ಮತ್ತು ವೇದಾಂತ ರಿಸೋರ್ಸಸ್ ಕಂಪನಿಯು ಪರಿಸರ ರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದ್ದವು ಎಂದಿರುವ ಸಚಿವ ರಮೇಶ್, ಈ ಸಂಬಂಧ ಸಚಿವಾಲಯವು ಯಾವುದೇ ಶೋಧನೆಯನ್ನು ನಡೆಸುವುದಿಲ್ಲ; ಅವರ ವಿರುದ್ಧ ಪರಿಸರ ರಕ್ಷಣಾ ಕಾಯ್ದೆ ಸೇರಿದಂತೆ ಇತರ ಉಲ್ಲಂಘನೆಗಳಿಗಾಗಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ನಾವು ಪರಿಶೀಲನೆ ನಡೆಸುತ್ತಿದ್ದೇವೆ ಎಂದರು.

ಅದೇ ಹೊತ್ತಿಗೆ ತಾನು ಒರಿಸ್ಸಾ ರಾಜ್ಯ ಸರಕಾರದ ವಿರುದ್ಧ ಯಾವುದೇ ಪೂರ್ವಗ್ರಹದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದೇನೆ ಎಂದು ಯಾರು ಕೂಡ ಅಂದುಕೊಳ್ಳಬೇಕಾಗಿಲ್ಲ. ಸೋಮವಾರವಷ್ಟೇ ನನ್ನ ಸಚಿವಾಲಯವು ಒರಿಸ್ಸಾದ ನೀರಾವರಿ ಯೋಜನೆಯೊಂದಕ್ಕೆ ಅನುಮತಿ ನೀಡಿದೆ ಎಂದು ಸಚಿವರು ಉದಾಹರಿಸಿದರು.

ವೇದಾಂತ ಯೋಜನೆಗೆ ಅನುಮತಿ ನಿರಾಕರಿಸುವುದರ ಜತೆಗೆ ನಾನು ಪ್ರಮುಖ ನೀರಾವರಿ ಯೋಜನೆಯೊಂದಕ್ಕೆ ರಾಜ್ಯಕ್ಕೆ ಅನುಮತಿ ನೀಡಿದ್ದೇನೆ. ಇದಕ್ಕಾಗಿ 1,500 ಹೆಕ್ಟೇರ್ ಅರಣ್ಯ ಪ್ರದೇಶದ ಅಗತ್ಯವಿತ್ತು ಎಂದರು.
ಸಂಬಂಧಿತ ಮಾಹಿತಿ ಹುಡುಕಿ