ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಾಗರೋಪಾದಿಯಲ್ಲಿ ಭಕ್ತರು; ಅಮರನಾಥ ಯಾತ್ರೆಗೆ ತೆರೆ (Amarnath Yatra | Amarnath pilgrimage | South Kashmir | Lord Shiva)
Bookmark and Share Feedback Print
 
ವಾರ್ಷಿಕ ಅಮರನಾಥ ಯಾತ್ರೆಗೆ ಶ್ರಾವಣ ಪೂರ್ಣಿಮೆಯಾಗಿರುವ ಮಂಗಳವಾರ ವಿಧ್ಯುಕ್ತವಾಗಿ ತೆರೆ ಎಳೆಯಲಾಗಿದ್ದು, ದಕ್ಷಿಣ ಕಾಶ್ಮೀರದ 3,880 ಮೀಟರ್ ಎತ್ತರದಲ್ಲಿರುವ ಹಿಮಾಲಯದಲ್ಲಿನ ಗುಹಾ ದೇವಾಲಯಕ್ಕೆ ಕಳೆದೆರಡು ತಿಂಗಳುಗಳ ಅವಧಿಯಲ್ಲಿ 4.56 ಲಕ್ಷ ಭಕ್ತರು ಶಿವ ದರ್ಶನ ಮಾಡಿದ್ದಾರೆ.

ಯಾವುದೇ ದೊಡ್ಡ ಅವಘಡಗಳಿಲ್ಲದೆ ಯಾತ್ರೆ ಮುಕ್ತಾಯಗೊಂಡಿರುವುದು ಮತ್ತು ಕಣಿವೆ ರಾಜ್ಯವು ಹಿಂಸಾಚಾರದಿಂದ ತತ್ತರಿಸುತ್ತಿದ್ದ ನಡುವೆಯೂ ಒಟ್ಟಾರೆ ಭಕ್ತರ ಸಂಖ್ಯೆಯಲ್ಲಿ ಶೇ.23ರಷ್ಟು ಏರಿಕೆಯಾಗಿರುವುದು ಈ ಬಾರಿಯ ವಿಶೇಷ. ಈ ಹಿಂದೆ 2008ರಲ್ಲಿ 5.33 ಲಕ್ಷ ಯಾತ್ರಾರ್ಥಿಗಳು ಗುಹಾ ದೇವಾಲಯಕ್ಕೆ ಬಂದಿರುವ ದಾಖಲೆಗಳಿವೆ.

ಆದರೂ ಈ ಬಾರಿ ಯಾತ್ರಾರ್ಥಿಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅಪಘಾತಗಳಿಗೆ 17 ಮಂದಿ ಹಾಗೂ 60 ಮಂದಿ ಹೃದಯಾಘಾತಗಳಿಗೆ -- ಹೀಗೆ ಒಟ್ಟು 87 ಮಂದಿ ಈ ವರ್ಷ ಯಾತ್ರೆಯ ಸಂದರ್ಭದಲ್ಲಿ ಭಕ್ತರು ಬಲಿಯಾಗಿದ್ದಾರೆ. ಕಳೆದ ವರ್ಷ ನೈಸರ್ಗಿಕ ಕಾರಣಗಳಿಂದಾಗಿ 62 ಮಂದಿ ಸಾವನ್ನಪ್ಪಿದ್ದರು.

ಅಮರನಾಥ ಯಾತ್ರೆಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 48 ತುಕುಡಿಗಳನ್ನು ನೇಮಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಶ್ರೀನಗರ ಮುಂತಾದ ನಗರಗಳಲ್ಲಿ ಹಿಂಸಾಚಾರ ಮತ್ತೆ ಭುಗಿಳೇಲುತ್ತಿದೆ. ಇದೀಗ ಯಾತ್ರೆ ಮುಗಿದಿರುವುದರಿಂದ ಕಣಿವೆಯಲ್ಲಿನ ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸಲು ಪಡೆಗಳು ನಿಯೋಜನೆಗೊಳ್ಳಲಿವೆ.

ಪ್ರತಿ ವರ್ಷದ ಮೇ ತಿಂಗಳಲ್ಲಿ ಇಲ್ಲಿನ ಗುಹೆಯಲ್ಲಿ ಹಿಮದ ಶಿವಲಿಂಗ ಉದ್ಭವವಾಗುತ್ತದೆ. ದುರ್ಗಮ ಪ್ರದೇಶವಾಗಿರುವ ಇಲ್ಲಿಗೆ ಹಿಂದೂ ಭಕ್ತಾದಿಗಳು ಕಷ್ಟಪಟ್ಟು ತೆರಳಿ, ಶಿವ ದರ್ಶನವನ್ನು ಪ್ರತಿವರ್ಷ ಮಾಡುತ್ತಿದ್ದು, ಯಾತ್ರೆ ಪ್ರತಿವರ್ಷವೂ ಶ್ರಾವಣ ಪೂರ್ಣಿಮೆಯಂದು ಕೊನೆಗೊಳ್ಳುತ್ತದೆ. ಅದರಂತೆ ಈ ವರ್ಷವೂ ಇಂದು (ಮಂಗಳವಾರ) ಕೊನೆಗೊಂಡಿದೆ.

ಈ ವರ್ಷದ ಜುಲೈ ಒಂದರಂದು ಅಮರನಾಥ ಯಾತ್ರೆಗೆ ಚಾಲನೆ ನೀಡಲಾಗಿತ್ತು. ಯಾತ್ರೆಯು ಹಿಂಸಾಪೀಡಿತ ಪ್ರದೇಶಗಳಾದ ಶ್ರೀನಗರ, ಸಂಗಮ್ ಮತ್ತು ಜಮ್ಮು-ಶ್ರೀನಗರ ಹೆದ್ದಾರಿಯ ಬಿಜ್ಬೇದ್ರಾ ಮೂಲಕ ಸಾಗಿತ್ತು.

ಸ್ವತಃ ರಾಜ್ಯಪಾಲರೇ ಮುಂದಾಗಿ ಯಾತ್ರೆಯ ಬೇಕು-ಬೇಡಗಳನ್ನು ಗಮನಿಸುತ್ತಿದ್ದರು. ಯಾತ್ರಿಗಳಿಗೆ ಯಾವುದೇ ರೀತಿಯಲ್ಲೂ ಅನನುಕೂಲತೆಗಳು ಸಂಭವಿಸಬಾರದು ಎಂದು ಅವರು ವೈಯಕ್ತಿಕ ಆಸಕ್ತಿ ವಹಿಸಿದ್ದರು ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ