ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಮಿಳುನಾಡಿಗೆ ಈಗ ಕಾವೇರಿ ನೀರು ಕೊಡಲ್ಲ: ಕರ್ನಾಟಕ (Karnataka | Cauvery water | Tamil Nadu | S V Ranganath)
Bookmark and Share Feedback Print
 
ಕರ್ನಾಟಕದಲ್ಲಿ ಮಳೆ ಅಭಾವದಿಂದಾಗಿ ಜಲಾಶಯಗಳು ಭರ್ತಿಯಾಗದೇ ಇರುವುದರಿಂದ ಕಾವೇರಿ ನೀರನ್ನು ಹರಿಸದೇ ಇರುವ ನಿರ್ಧಾರವನ್ನು ಪ್ರತಿಭಟಿಸಿರುವ ತಮಿಳುನಾಡು ಕ್ಯಾತೆ ತೆಗೆದಿದೆ. ಆದರೆ ಇದಕ್ಕೆ ಸ್ಪಷ್ಟ ಉತ್ತರ ನೀಡಿರುವ ಕರ್ನಾಟಕ, ನಿಗದಿತ ಪ್ರಮಾಣದಲ್ಲಿ ಮಳೆ ಬಾರದ ಹೊರತು ನೀರು ಬಿಡಲಾಗದು ಎಂದಿದೆ.

ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದ 'ಕಾವೇರಿ ಉಸ್ತುವಾರಿ ಸಮಿತಿ' ಸಭೆಯಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಇದನ್ನು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಯು.ಎನ್. ಪಂಜಿಯಾರ್ ಈ ಸಭೆಯ ನೇತೃತ್ವ ವಹಿಸಿದ್ದರು.

ಈ ವರ್ಷ ಕರ್ನಾಟಕವು 60 ಟಿಎಂಸಿ ನೀರನ್ನು ಬಾಕಿ ಇಟ್ಟುಕೊಂಡಿದೆ. ಇದರಿಂದ ತಮಿಳುನಾಡು ರೈತರ ಸ್ಥಿತಿ ತೀರಾ ಹದಗೆಟ್ಟಿದೆ. ಹಾಗಾಗಿ ತಕ್ಷಣವೇ ಕನಿಷ್ಟ 26 ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಸಭೆಯಲ್ಲಿ ತಮಿಳುನಾಡು ಆಗ್ರಹಿಸಿತು.

ಈ ಹೊತ್ತಿಗೆ ತಮಿಳುನಾಡು ಪರ ನಿಂತ ಜಲ ಸಂಪನ್ಮೂಲ ಕಾರ್ಯದರ್ಶಿಯವರು ಕರ್ನಾಟಕದ ಮನವೊಲಿಸಲು ಯತ್ನಿಸಿದರಾದರೂ, ನಮ್ಮಲ್ಲೇ ನೀರಿಲ್ಲದ ಕಾರಣ ಬಿಡುಗಡೆ ಅಸಾಧ್ಯ ಎಂದು ರಂಗನಾಥ್ ಉತ್ತರಿಸಿದರು.

ಕಾವೇರಿ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿಲ್ಲ. ಹಾಗಾಗಿ ಪ್ರಸಕ್ತ ಪರಿಸ್ಥಿತಿಯಲ್ಲಿ ನೀರು ಹಾಯಿಸುವುದು ಕಷ್ಟ. ಈ ತಿಂಗಳ ಉಳಿದ ದಿನಗಳು ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಉತ್ತಮ ಮಳೆ ಬೀಳಬಹುದು. ಹಾಗಾದಲ್ಲಿ ಖಂಡಿತ ತಮಿಳುನಾಡಿಗೆ ನೀರು ಬಿಡಲಾಗುತ್ತದೆ ಎಂದು ರಾಜ್ಯದ ನಿಲುವನ್ನು ಸ್ಪಷ್ಟಪಡಿಸಿದರು.

ಆದರೆ ಇದರಿಂದ ನಿರಾಸೆಗೊಂಡ ತಮಿಳುನಾಡು, ಜಲ ಹಂಚಿಕೆ ಸಮಸ್ಯೆಗೆ ಸೂಕ್ತ ಪರಿಹಾರಕ್ಕೆ ತಕ್ಷಣವೇ ಪ್ರಧಾನಿಯವರ ಅಧ್ಯಕ್ಷತೆಯಲ್ಲಿರುವ 'ಕಾವೇರಿ ನದಿ ಪ್ರಾಧಿಕಾರ'ದ ಸಭೆ ಕರೆಯುವಂತೆ ಒತ್ತಾಯಿಸಿತು.

ನೀರು ಬಿಡುವ ಭರವಸೆಯಿದೆ....
ಹೀಗೆಂದು ಸಭೆಯ ನಂತರ ಪ್ರತಿಕ್ರಿಯಿಸಿರುವುದು ಪಂಜಿಯಾರ್. ತಮ್ಮಿಂದ ಸಾಧ್ಯವಾಗುವಷ್ಟು ನೀರನ್ನು ತಾವು ಬಿಡುಗಡೆ ಮಾಡುತ್ತೇವೆ ಎಂದು ಕರ್ನಾಟಕವು ಭರವಸೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ನೀರು ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಆದರೆ ನೀರಿನ ಪ್ರಮಾಣವನ್ನು ತಿಳಿಸಿಲ್ಲ. ಪರಿಸ್ಥಿತಿಯನ್ನು ನೋಡಿಕೊಂಡು, ರೈತರ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿಯವರು ತಿಳಿಸಿದ್ದಾರೆ ಎಂದು ಪಂಜಿಯಾರ್ ಹೇಳಿದರು.

ಬಿಡುಗಡೆ ನಿರೀಕ್ಷೆ...
ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ತೀರ್ಪಿನಂತೆ ಕರ್ನಾಟಕವು ಪ್ರತಿವರ್ಷ ತಮಿಳುನಾಡಿಗೆ 90 ಟಿಎಂಸಿ ನೀರನ್ನು ಬಿಡಬೇಕು. ಈಗಾಗಲೇ 29 ಟಿಎಂಸಿ ನೀರನ್ನು ಬಿಟ್ಟಿದೆ. ಸುಮಾರು 60 ಟಿಎಂಸಿ ನೀರನ್ನು ಇನ್ನೂ ಬಿಡಬೇಕಾಗಿದೆ. ಕೇಂದ್ರದ ಪ್ರಕಾರ, ಮುಂದಿನ ದಿನಗಳಲ್ಲಿ ಕರ್ನಾಟಕವು ನೀರು ಬಿಡುವಷ್ಟು ಸಾಮರ್ಥ್ಯವನ್ನು ಹೊಂದಲಿದೆ.

ಕಳೆದ ವರ್ಷ ಕೂಡ ಕರ್ನಾಟಕವು ಆರಂಭದಲ್ಲಿ ಹೆಚ್ಚು ನೀರನ್ನು ಬಿಡುಗಡೆ ಮಾಡಿರಲಿಲ್ಲ. ಆದರೆ ವರ್ಷಾಂತ್ಯದಲ್ಲಿ ನಿರೀಕ್ಷಿತ ನೀರನ್ನು ಹರಿಸಿತ್ತು. ಹಾಗಾಗಿ ಈ ವರ್ಷವೂ ಯಾವುದೇ ತಕರಾರಿಲ್ಲದೆ ಜಲವಿವಾದ ಕೊನೆಗೊಳ್ಳಲಿದೆ ಎನ್ನುವುದು ಅಧಿಕಾರಿಗಳ ಅಂಬೋಣ.
ಸಂಬಂಧಿತ ಮಾಹಿತಿ ಹುಡುಕಿ