ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೇನಾಮಿಯಿಂದ ಪರೀಕ್ಷೆ ಬರೆಸಿದ ಕಾಂಗ್ರೆಸ್ ಸಚಿವನ ಪುತ್ರಿ (CET impersonation | Congress minister | GM Saroori | Huma Tabassum)
Bookmark and Share Feedback Print
 
ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಬೇರೊಬ್ಬ ಹುಡುಗಿಯನ್ನು ಬಳಸುವ ಮೂಲಕ ಮೋಸದ ಹಾದಿಯಲ್ಲಿ ಪುತ್ರಿ ಅರ್ಹತೆ ಗಿಟ್ಟಿಸಿಕೊಂಡ ಹಗರಣದಲ್ಲಿ ಸಿಲುಕಿರುವ ಜಮ್ಮು-ಕಾಶ್ಮೀರದ ಕಾಂಗ್ರೆಸ್ ಸಚಿವರೊಬ್ಬರಿಗೆ ಉರುಳಾಗಿ ಪರಿಣಮಿಸಿದೆ.

ಜಮ್ಮು-ಕಾಶ್ಮೀರದ ಲೋಕೋಪಯೋಗಿ ಸಚಿವ ಜಿ.ಎಂ. ಸರೂರಿ ಎಂಬವರೇ ಈ ರೀತಿ ವಿವಾದದಲ್ಲಿ ಸಿಲುಕಿರುವವರು. ಪ್ರಕರಣದಿಂದ ತೀವ್ರ ಮುಜುಗರ ಅನುಭವಿಸಿರುವ ಕಾಂಗ್ರೆಸ್, ತನ್ನ ಸಚಿವರಲ್ಲಿ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದೆ.

ಜಮ್ಮು-ಕಾಶ್ಮೀರದ ಮೈತ್ರಿ ಸರಕಾರದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಮಾಜಿ ಸಚಿವ ರಾಮ್ ಪಾಲ್ ಪುತ್ರ ಹಾಗೂ ಸರೂರಿಯವರ ಪುತ್ರಿ ತಮ್ಮ ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗಾಗಿ ಯುವತಿ ಸೇರಿದಂತೆ ಇಬ್ಬರನ್ನು ಬಾಡಿಗೆಗೆ ಬಳಸಿಕೊಂಡಿದ್ದರು ಎಂದು ಆರೋಪಿಸಲಾಗಿದ್ದು, ಪ್ರಕರಣ ಸಂಬಂಧ ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದೆ.

ಆದರೂ ಸಚಿವರು ತನ್ನ ಮಗಳು ತಪ್ಪು ಮಾಡಿದ್ದಾಳೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ತನ್ನ ಗೌರವವನ್ನು ಮಣ್ಣುಪಾಲು ಮಾಡುವ ಉದ್ದೇಶದಿಂದ ಸ್ಥಾಪಿತ ಹಿತಾಸಕ್ತಿಗಳು ಕೈಗೊಂಡಿರುವ ಅಪಪ್ರಚಾರವಿದು ಎಂದು ಸರೂರಿ ಬಣ್ಣಿಸಿದ್ದಾರೆ.

ಕಾಂಗ್ರೆಸ್ ಸಚಿವ ಸರೂರಿಯವರ ಪುತ್ರಿ ಹೂಮಾ ತಬಾಸಮ್ ಮತ್ತು ರಾಮ್ ಪಾಲ್ ಪುತ್ರ ಲೋವಿಶ್ ಭರತ್ ಎಂಬವರು ಆಚಾರ್ಯ ಶ್ರೀ ಚಂದ್ರ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ತಮ್ಮ ಬದಲಿಗೆ ಇತರ ಇಬ್ಬರನ್ನು ಕಳುಹಿಸಿ ಪರೀಕ್ಷೆ ಬರೆಸಿದ್ದರು. ಅವರೂ ಸೇರಿದಂತೆ ಹಗರಣದಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ.

ಕಳೆದ ವರ್ಷ ವೈದ್ಯಕೀಯ ಅರ್ಹತಾ ಪರೀಕ್ಷೆಯಲ್ಲಿ ಫೇಲಾಗಿದ್ದ ತಬಾಸಮ್, ಈ ವರ್ಷ ಮಥುರಾದ ಶ್ರುತಿ ಗೌರ್ ಎಂಬಾಕೆಯನ್ನು ಪರೀಕ್ಷೆ ಬರೆಯಲು ನಿಯೋಜಿಸಿದ್ದಳು. ಇದೇ ರೀತಿ ಸುಮಾರು ಏಳು ಮಂದಿ ಗಣ್ಯರ ಮಕ್ಕಳು, ತಮ್ಮ ಬದಲಿಗೆ ಬಾಡಿಗೆ ಅಭ್ಯರ್ಥಿಗಳನ್ನು ಪರೀಕ್ಷೆ ಬರೆಯಲು ನಿಯೋಜಿಸಿದ್ದರು ಎಂದು ಹೇಳಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಿಬಿಐಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಆದರೆ ಅಧಿಕಾರಿಗಳು ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ