ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣು ಬಾಧ್ಯತಾ ಮಸೂದೆ ಅಂಗೀಕಾರ; ಆತುರ ಯಾಕೆ?: ಬಿಜೆಪಿ (N-liability bill | Lok Sabha | Prithviraj Chavan | Jaswant Singh)
Bookmark and Share Feedback Print
 
ಸರಿ ಸುಮಾರು 18 ತಿದ್ದುಪಡಿಗಳನ್ನು ಮಾಡಿದ ನಂತರ ಪರಮಾಣು ಬಾಧ್ಯತಾ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಒಮ್ಮತದಿಂದ ಅಂಗೀಕಾರ ಪಡೆದುಕೊಂಡಿದೆ. ವಿವಾದಕ್ಕೆಡೆಯಾಗಿದ್ದ ಶಬ್ದವನ್ನು ಕೈ ಬಿಟ್ಟ ನಂತರ ವಿಧೇಯಕವನ್ನು ಲೋಕಸಭೆಗೆ ಪರಿಚಯಿಸಲಾಗಿತ್ತು.

ಈ ನಡುವೆ ಮಸೂದೆಯ ಕುರಿತು ಸರಕಾರವು ಯಾಕೆ ಇಷ್ಟು ಆತುರವನ್ನು ಪ್ರದರ್ಶಿಸುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಪ್ರಶ್ನಿಸಿದೆ.

ಬಿಜೆಪಿ, ಎಡಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದ ಮಸೂದೆಯಲ್ಲಿನ ಅಂಶಗಳನ್ನು ಕೈ ಬಿಟ್ಟ ನಂತರ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಪ್ರತಿಪಕ್ಷಗಳ ಕಳವಳವನ್ನು ತಾನು ಅರ್ಥ ಮಾಡಿಕೊಂಡಿರುವುದಾಗಿ ಸರಕಾರ ಹೇಳಿದೆ.

ಪರಮಾಣು ಸ್ಥಾವರವೊಂದರಲ್ಲಿನ ಅವಘಡವೊಂದಕ್ಕೆ ಪೂರೈಕೆದಾರರು ಅಥವಾ ಅದರ ಉದ್ಯೋಗಿಗಳು ಉದ್ದೇಶಪೂರ್ವಕವಾಗಿ ಯತ್ನಿಸಿದ್ದರೆ ಪರಿಹಾರವನ್ನು ಪಡೆಯಬಹುದು ಎಂಬ ಮಸೂದೆಯ 17(ಬಿ) ವಿಧಿಗೆ ತಿದ್ದುಪಡಿ ತಂದ ನಂತರ, ಪ್ರಧಾನ ಮಂತ್ರಿಯವರ ಕಚೇರಿಯ ರಾಜ್ಯ ಸಚಿವ ಪೃಥ್ವಿರಾಜ್ ಚೌಹಾನ್ ಅವರು 'ನಾಗರಿಕ ಪರಮಾಣು ಬಾಧ್ಯತಾ ಮಸೂದೆ, 2010'ನ್ನು ಮಂಡಿಸಿದರು. ನಂತರ ಇದಕ್ಕೆ ಸದನವು ಧ್ವನಿ ಮತದ ಮೂಲಕ ಅಂಗೀಕಾರ ನೀಡಿತು.

ಕಳಪೆ ಸಾಮಗ್ರಿ, ದೋಷಪೂರಿತ ಪರಿಕರಗಳ ಪೂರೈಕೆ ಅಥವಾ ಅನುಷ್ಠಾನ ಅಥವಾ ಸಾಮಗ್ರಿ, ಪರಿಕರ ಅಥವಾ ಕಾರ್ಯಗಳಲ್ಲಾದ ಅಥವಾ ಪೂರೈಕೆಯಲ್ಲಾದ ಒಟ್ಟಾರೆ ನಿರ್ಲಕ್ಷ್ಯದಿಂದ ವ್ಯಕ್ತ ಅಥವಾ ಅವ್ಯಕ್ತ ಪರಿಣಾಮಗಳಿಂದ ಪರಮಾಣು ಅವಘಡ ಸಂಭವಿಸಿದರೆ ನಷ್ಟ ಪರಿಹಾರಕ್ಕಾಗಿ ಪೂರೈಕೆದಾರರಲ್ಲಿ ನಿರ್ವಹಣೆದಾರ ಬೇಡಿಕೆ ಮುಂದಿಡಬಹುದು ಎಂದು 17(ಬಿ) ಅಧಿನಿಯಮವನ್ನು ಈಗ ಬದಲಾವಣೆ ಮಾಡಲಾಗಿದೆ.

ಹಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ಸಲಹೆ ಮತ್ತು ಸಹಮತದೊಂದಿಗೆ ಮಸೂದೆಗೆ 18 ತಿದ್ದುಪಡಿಗಳನ್ನು ತಂದ ನಂತರ ಸದನಕ್ಕೆ ತರಲಾಗಿದೆ. ಆದರೂ ಎಡಪಕ್ಷಗಳು ಇನ್ನೂ ಕಳವಳಗಳನ್ನು ಹೊಂದಿವೆ. ಈ ಕುರಿತು ಸ್ಪಷ್ಟನೆ ನೀಡಲು ಸರಕಾರ ಯತ್ನಿಸಿತ್ತು. ಪರಮಾಣು ಸ್ಥಾವರದ ಪ್ರತಿಯೊಬ್ಬರ ಮೇಲೂ ಹೊಣೆಗಾರಿಕೆಯನ್ನು ಹೊರಿಸಲಾಗಿದೆ ಎಂಬುದು ವಿಧೇಯಕದಲ್ಲಿ ಸ್ಪಷ್ಟವಾಗಿದೆ ಎಂದು ಚೌಹಾನ್ ಸದನಕ್ಕೆ ತಿಳಿಸಿದರು.

ಬಿಜೆಪಿಯು ಮುಂದಿಟ್ಟಿರುವ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಮಾಡಿರುವ ತಿದ್ದುಪಡಿಗಳು ನಮಗೆ ಸಂತಸ ತಂದಿಲ್ಲ. ಆದರೂ ನಾವು ಪ್ರತಿಪಕ್ಷಗಳ ಕಳವಳಗಳನ್ನು ಗಮನಕ್ಕೆ ತೆಗೆದುಕೊಂಡಿದ್ದೇವೆ ಎಂದರು.

ತರಾತುರಿ ಯಾಕೆ?
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ನವೆಂಬರ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡುವ ಮೊದಲು ಮಸೂದೆಯನ್ನು ಅಂಗೀಕರಿಸಬೇಕು ಎಂಬ ಒತ್ತಡವನ್ನು ಭಾರತವು ಎದುರಿಸುತ್ತಿದೆ ಎಂದು ಬಿಜೆಪಿ ಸಂಸದ ಜಸ್ವಂತ್ ಸಿಂಗ್ ಆರೋಪಿಸಿದರು.

ಪರಮಾಣು ವಿಚಾರವೆಂಬುದು ಗಂಭೀರವಾದದ್ದು. ಹಾಗಾಗಿ ನಾವು ಯಾವುದೇ ನಿರ್ಧಾರವನ್ನು ಹುಡುಗಾಟವೆಂದು ಪರಿಗಣಿಸಬಾರದು. ಸರಕಾರಕ್ಕೆ ಮಸೂದೆಯನ್ನು ಕಾನೂನು ಮಾಡಲು ಇಷ್ಟೊಂದು ತರಾತುರಿ ಯಾಕೆ? ಎಲ್ಲಾ ವರ್ಗಗಳ ಕಳವಳಗಳನ್ನು ಗಮನಕ್ಕೆ ತೆಗೆದುಕೊಂಡು ಸರಕಾರವು ಮುಂದುವರಿಯಬಹುದಲ್ಲವೇ ಎಂದು ಸಲಹೆ ನೀಡಿದರು.

ಅಮೆರಿಕಾವು ಇಂತಹ ವಿಚಾರಗಳಲ್ಲಿ ನಮ್ಮನ್ನು ನಿಯಂತ್ರಿಸುವ ಪರಿಸ್ಥಿತಿಗೆ ನಾವು ಅವಕಾಶ ನೀಡಬಾರದು. ಆದರೆ ಸರಕಾರವು ಈ ಕುರಿತು ಹೆಚ್ಚಿನ ಚರ್ಚೆ ಮಾಡದೆ, ತರಾತುರಿಯಲ್ಲಿ ಮಸೂದೆಯನ್ನು ಜಾರಿಗೆ ತರುವ ಸನ್ನಾಹದಲ್ಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ