ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಕ್ರಮ ಸಂಬಂಧ ವಿರೋಧಿಸಿದ ಮಗನ ಕೊಂದ ತಾಯಿ (Mother kills son | Nalgonda district | illicit relationship | K Shivamani)
Bookmark and Share Feedback Print
 
ಅಕ್ರಮ ಸಂಬಂಧವನ್ನು ವಿರೋಧಿಸಿದ್ದಕ್ಕೆ ಸ್ವತಃ ತಾಯಿಯೇ 13ರ ಹರೆಯದ ತನ್ನ ಪುತ್ರನನ್ನು ವಿದ್ಯುತ್ ಶಾಕ್ ನೀಡಿ ಕೊಂದು ಹಾಕಿರುವ ವಿಲಕ್ಷಣ ಘಟನೆಯೊಂದು ಆಂಧ್ರಪ್ರದೇಶದ ನಲ್ಗೊಂಡಾ ಜಿಲ್ಲೆಯಿಂದ ವರದಿಯಾಗಿದೆ.

ತಾಯಿ ಹೊಂದಿದ್ದ ಅಕ್ರಮ ಸಂಬಂಧವನ್ನು ಮಗ ವಿರೋಧಿಸಿದ ಕಾರಣಕ್ಕೆ ಈ ರೀತಿ ಅಮಾನವೀಯವಾಗಿ ಮಗನನ್ನು ಕೊಂದು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಮಿರ್ಯಾಲ್ಗುಂಡ ಮಂಡಲ್ ಎಂಬಲ್ಲಿನ ದಮರ್ಚಲಾ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆ ಸಮೀಪ ಬಾಲಕನ ಕೈಗಳನ್ನು ಕಟ್ಟಿದ ಬಳಿಕ 32ರ ಹರೆಯದ ಆತನ ತಾಯಿ ವಿದ್ಯುತ್ ವೈರುಗಳನ್ನು ಆತನ ದೇಹಕ್ಕೆ ತಾಗಿಸಿದ್ದಳು.

ಮಗ ಅಕ್ರಮ ಸಂಬಂಧವನ್ನು ವಿರೋಧಿಸಿದ್ದರಿಂದ ಆಕೆ ಕೋಪಗೊಂಡಿದ್ದಳು. ಅದಕ್ಕಾಗಿ ಹತ್ಯೆ ನಡೆದಿದೆ ಎಂದು ಗ್ರಾಮಸ್ಥರು ಮತ್ತು ಸರಪಂಚರು ಹೇಳಿರುವುದನ್ನು ಉಲ್ಲೇಖಿಸಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಈ ಆರೋಪವನ್ನು ಮಹಿಳೆ ನಿರಾಕರಿಸಿದ್ದಾಳೆ. ತಾನು ಅಂತಹ ಯಾವುದೇ ಸಂಬಂಧವನ್ನು ಹೊಂದಿರಲಿಲ್ಲ. ನನ್ನ ಮಗನೇ ಸುಖಾಸುಮ್ಮನೆ ನನಗೆ ಚಿತ್ರಹಿಂಸೆ ನೀಡುತ್ತಿದ್ದ. ಆತ ಶಾಲೆಗೂ ಹೋಗುತ್ತಿರಲಿಲ್ಲ, ಕೆಲಸಾನೂ ಮಾಡುತ್ತಿರಲಿಲ್ಲ. ಅದೆಲ್ಲ ಬಿಟ್ಟು ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಎಂದು ತಾಯಿ ಹೇಳಿದ್ದಾಳೆ.

ಗ್ರಾಮಸ್ಥರು ದೂರು ನೀಡಿರುವ ದೂರವನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ. ತಾಯಿ ಶಿವಮಣಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ