ಗುಜರಾತಿನಲ್ಲಿ ಲಘು ಭೂಕಂಪ
ಉತ್ತರ ಗುಜರಾತಿನ ಪಠಾಣ್ ಜಿಲ್ಲೆಯಲ್ಲಿ ಗುರುವಾರ ಲಘು ಭೂಸ್ತಂಭನ ನಡೆದಿರುವ ಬಗ್ಗೆ ವರದಿಗಳು ಬಂದಿವೆ. ಬೆಳಿಗ್ಗೆ 8.39ರಿಂದ 8.45ರ ನಡುವೆ ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯ ಭೂಕಂಪನ ದಾಖಲಾಗಿದ್ದು, ಯಾವುದೇ ಹಾನಿಯಾಗಿರುವ ಬಗ್ಗೆ ಮಾಹಿತಿಯಿಲ್ಲ ಎಂದು ಸರಕಾರಿ ಮೂಲಗಳು ಹೇಳಿವೆ.