ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ವಿರುದ್ಧ ಸಾಕ್ಷಿ ಹೇಳಬೇಡಿ: ಮಾಜಿ ಸಚಿವಗೆ ಆರೆಸ್ಸೆಸ್ (Gordhan Zadaphia | Narendra Modi | Gujarat | Godhra riots)
Bookmark and Share Feedback Print
 
ಗೋದ್ರಾ ಗಲಭೆಯ ಕುರಿತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಸುಪ್ರೀಂ ಕೋರ್ಟ್ ನೇಮಿಸಿರುವ ಸಿಟ್ ತನಿಖಾ ತಂಡದೆದುರು ಸಾಕ್ಷ್ಯ ನುಡಿಯದಂತೆ ಮಾಜಿ ಗೃಹಸಚಿವ ಗೋರ್ಧನ್ ಝಡಾಫಿಯಾ ಮನವೊಲಿಸಲು ಹಲವು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರು ಯತ್ನಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: ಗೋದ್ರೋತ್ತರ ಸ್ಥಿತಿಗೆ ಮೋದಿಯೇ ಹೊಣೆ: ಝಡಾಫಿಯಾ

ಝಡಾಫಿಯಾ ಹಾಗೂ ಪೊಲೀಸ್ ಅಧಿಕಾರಿಗಳಾದ ಎಂ.ಕೆ. ಟಂಡನ್ (ನಿವೃತ್ತ) ಮತ್ತು ಪಿ.ಬಿ. ಗೊಂಡಿಯಾ ವಿರುದ್ಧ ಸಾಕ್ಷ್ಯಗಳಿವೆ ಎಂದು ಸಿಟ್ ಸುಪ್ರೀಂ ಕೋರ್ಟಿಗೆ ಹೇಳಿದ ನಂತರ ತನಿಖಾ ದಳಕ್ಕೆ ಪತ್ರ ಬರೆದಿರುವ ಝಡಾಫಿಯಾ, 2002ರಲ್ಲಿ ಗೋದ್ರಾ ರೈಲು ಅಗ್ನಿಗಾಹುತಿಯಾದ ನಂತರ ಏನೆಲ್ಲ ನಡೆದಿತ್ತು ಎನ್ನುವುದರ ಸಾಕ್ಷ್ಯ ನುಡಿಯಲು ಸಿದ್ಧ ಎಂದು ಹೇಳಿದ ನಂತರ ಹಿಡಿದ ಪಟ್ಟನ್ನು ಸಡಿಲಿಸಲು ಆರೆಸ್ಸೆಸ್ ಯತ್ನಿಸುತ್ತಿದೆ ಎಂದು ಹೇಳಲಾಗಿದೆ.

ಝಡಾಫಿಯಾ ಅವರನ್ನು ಸಿಟ್ ಈಗಾಗಲೇ ಮೂರು ಬಾರಿ ವಿಚಾರಣೆಗೊಳಪಡಿಸಿದೆ. ಆದರೂ ಇದುವರೆಗೆ ಮೋದಿ ವಿರುದ್ಧ ಒಂದೇ ಒಂದು ಶಬ್ಧವನ್ನು ಅವರು ಆಡಿಲ್ಲ.

ಗುಲ್ಬರ್ಗಾ ಹತ್ಯಾಕಾಂಡದಲ್ಲಿ ಕೊಲ್ಲಲ್ಪಟ್ಟ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯವರ ಪತ್ನಿ ಝಾಕಿಯಾ ಜಾಫ್ರಿಯವರು ನೀಡಿರುವ ದೂರಿನ ತನಿಖೆ ನಡೆಸುತ್ತಿರುವ ಸಿಟ್, ಇದೀಗ ಝಡಾಫಿಯಾ ಕತ್ತನ್ನು ಅಮುಕುತ್ತಿರುವುದರಿಂದ ಮೋದಿ ವಿರುದ್ಧ ತಿರುಗಿ ಬೀಳಲು ಅವರು ನಿರ್ಧರಿಸಿದ್ದಾರೆ.

ಮೂಲಗಳ ಪ್ರಕಾರ ಆರೆಸ್ಸೆಸ್ ಪ್ರಾಂತ್ ಪ್ರಚಾರ್ ಪ್ರಮುಖ್ ಮುಕುಂದ್ ದಿಯೋಬಂದ್‌ಕರ್ ಅವರಿಂದ ಹಿಡಿದು ಭಾಸ್ಕರ್ ರಾವ್ ಧಾಮ್ಲೆ, ಪ್ರವೀಣ್ ಮನಿಯಾರ್ ಮುಂತಾದ ನಾಯಕರು ಝಡಾಫಿಯಾ ಅವರನ್ನು ಭೇಟಿ ಮಾಡಿ, ಮೋದಿ ವಿರುದ್ಧ ಸಾಕ್ಷ್ಯ ನುಡಿಯದಂತೆ ಒತ್ತಡ ಹೇರಿದ್ದಾರೆ.

ಇದಕ್ಕಾಗಿ ಝಡಾಫಿಯಾ ಅವರಿಗೆ ಅಪಾರ ಭರವಸೆಗಳನ್ನೂ ನೀಡಲಾಗಿದೆ. 2007ರಲ್ಲಿ ಮೋದಿ ವಿರುದ್ಧ ಬಂಡೆದ್ದು ಬಿಜೆಪಿಯಿಂದ ಹೊರ ಬಿದ್ದು ಸ್ವಂತ ಪಕ್ಷ 'ಮಹಾಗುಜರಾತ್ ಜನತಾ ಪರಿಷತ್' ಸ್ಥಾಪಿಸಿದ್ದ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಆಶ್ವಾಸನೆ ಆರೆಸ್ಸೆಸ್ ನಾಯಕರು ನೀಡಿದ್ದಾರೆ ಎಂದು ಹೇಳಲಾಗಿದೆ.

ಆರೆಸ್ಸೆಸ್ ಸಿದ್ಧಾಂತವಾದಿ ಗುರುಮೂರ್ತಿ ಕೂಡ ಮೋದಿ ವಿರುದ್ಧ ಸಾಕ್ಷಿ ಹೇಳದಂತೆ ಝಡಾಫಿಯಾ ಅವರನ್ನು ಒತ್ತಾಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ