ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಬ್ದ ರಹಿತ ದೀಪಾವಳಿ; ಅಭಿಯಾನದಲ್ಲಿ ಸಚಿನ್, ಪಾಟೇಕರ್ (Sachin Tendulkar | Nana Patekar | Diwali | Crackers)
Bookmark and Share Feedback Print
 
ಈ ಬಾರಿ ಶಬ್ದ ರಹಿತ ದೀಪಾವಳಿ ಹಬ್ಬ ಆಚರಣೆಯ ಆಂದೋಲನವನ್ನು ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿ ಹಮ್ಮಿಕೊಂಡಿದೆ. ಈ ಅಭಿಯಾನಕ್ಕೆ ಕ್ರಿಕೆಟ್‌ನ ಜೀವಂತ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೈ ಜೋಡಿಸಲಿದ್ದು, ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ಸಾಥ್ ನೀಡಲಿದ್ದಾರೆ.

ದೀಪಾವಾಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವಂತೆ ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ಪತ್ರ ಮೂಲಕ ಈ ದಿಗ್ಗಜರು ಮನವಿ ಮಾಡಲಿದ್ದಾರೆ.

ಮಾಲಿನ್ಯ ಮುಕ್ತ ದೀಪಾವಳಿಗಾಗಿ ಪತ್ರವೊಂದಕ್ಕೆ ಈ ಇಬ್ಬರೂ ಸಹಿ ಹಾಕಿದ್ದು, ಇದನ್ನು ಶಾಲಾ ವಿದ್ಯಾರ್ಥಿಗಳಲ್ಲಿ ವಿನಂತಿಸಲಾಗುವುದು. ವಿಜ್ಞಾನಿ ಜಯಂತ್ ನಾರ್ಲಿಕರ್, ಯೋಜನಾ ಆಯೋಗದ ಸದಸ್ಯ ನರೇಂದ್ರ ಜಾಧವ್ ಸಹಿ ಕೂಡಾ ಈ ಪತ್ರದಲ್ಲಿದೆ.

ಜನಪ್ರಿಯ ವ್ಯಕ್ತಿಗಳ ವಿನಂತಿ ಮಕ್ಕಳ ಮೇಲೆ ಪ್ರಭಾವ ಬೀರಲಿದೆ ಎಂದು ಸಮಿಯ ರಾಜ್ಯ ಸಂಚಾಲಕಿ ಸುಶೀಲಾ ಮುಂಢೆ ತಿಳಿಸಿದ್ದಾರೆ. ಅಲ್ಲದೆ ಪಾಟಾಕಿಯಿಂದ ಉಂಟಾಗುವ ಶಬ್ದ ಮಾಲಿನ್ಯ, ವಾಯು ಮಾಲಿನ್ಯವನ್ನು ಸಾಧ್ಯವಾಗುವಷ್ಟು ತಡೆಗಟ್ಟುವ ಇರಾದೆಯನ್ನು ಸಮಿತಿ ಹೊಂದಿದೆ ಎಂದು ಹೇಳಿದ್ದಾರೆ.

ಪ್ರತಿ ವರ್ಷ 500 ಕೋಟಿ ರೂಪಾಯಿಗಳ ಪಾಟಾಕಿ ಮಾರಾಟವಾಗುತ್ತಿದ್ದು, ಇದರಿಂದ ಭಾರೀ ವಾಯು ಮಾಲಿನ್ಯವಾಗುತ್ತಿದೆ. ಹೀಗಾಗಿ ಕಡಿಮೆ ಪಕ್ಷ 20 ಕೋಟಿ ಉಳಿಸಿಕೊಳ್ಳುವ ಇರಾದೆಯನ್ನು ಸಮಿತಿ ಹೊಂದಿದೆ ಎಂದು ಸುಶೀಲಾ ತಿಳಿಸಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ