ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಫ್ಜಲ್ ಗುರು ಕ್ಷಮಾದಾನ ಅರ್ಜಿ ಕಥೆ ಏನಾಗಿದೆ?: ಸಿಐಸಿ ಪ್ರಶ್ನೆ (CIC | Afzal Guru | Parliament attack | LG Tejinder Khanna)
Bookmark and Share Feedback Print
 
ಸಂಸತ್ ಭವನದ ಮೇಲಿನ ದಾಳಿಯಲ್ಲಿ ದೋಷಿ ಎಂದು ತೀರ್ಪು ಪಡೆದುಕೊಂಡು ಮರಣ ದಂಡನೆ ಶಿಕ್ಷೆಗಾಗಿ ಕಾಯುತ್ತಿರುವ ಭಯೋತ್ಪಾದಕ ಅಫ್ಜಲ್ ಗುರು ಕ್ಷಮಾದಾನ ಅರ್ಜಿ ವಿಳಂಬದ ಹಿಂದೆ ಯಾರಿದ್ದಾರೆ, ಇದಕ್ಕೆ ಕಾರಣವೇನು ಎಂಬುದು ಕೊನೆಗೂ ಬಹಿರಂಗವಾಗುವ ಕ್ಷಣ ಹತ್ತಿರ ಬಂದಿದೆ.

ಈ ಸಂಬಂಧ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ದೆಹಲಿ ರಾಜ್ಯಪಾಲರಿಗೆ ಕೇಂದ್ರ ಮಾಹಿತಿ ಆಯೋಗವು (ಸಿಐಸಿ) ನಿರ್ದೇಶನ ನೀಡಿದೆ. ಉಗ್ರ ಅಫ್ಜಲ್ ಗುರು ದಯಾ ಅರ್ಜಿಯ ಕಥೆ ಏನಾಗಿದೆ ಎಂದು ಕೋರಿ ಸಾರ್ವಜನಿಕರಿಂದ ನಿರಂತರ ಮನವಿಗಳು ಬರುತ್ತಿವೆ. ಇದಕ್ಕೆ ಉತ್ತರಿಸಲು ತಾನು ಅಸಮರ್ಥನಾಗಿರುವುದರಿಂದ, ದೆಹಲಿ ಲೆಫ್ಟಿನೆಂಟ್ ಗವರ್ನರ್ ಸ್ಪಷ್ಟ ಕಾರಣವನ್ನು ಬಹಿರಂಗಪಡಿಸಬೇಕು ಎಂದು ಸಿಐಸಿ ಸೂಚಿಸಿದೆ.
PTI

ಈ ಸಂಬಂಧ ಮಾಹಿತಿ ಹಕ್ಕು ಅರ್ಜಿಯೊಂದನ್ನು ಸ್ವೀಕರಿಸಿರುವ ಮಾಹಿತಿ ಆಯುಕ್ತ ಶೈಲೇಶ್ ಗಾಂಧಿಯವರು ದೆಹಲಿ ಸರಕಾರಕ್ಕೆ ಪತ್ರವೊಂದನ್ನು ಬರೆದಿದ್ದು, ಅಫ್ಜಲ್ ಗುರು ಕ್ಷಮಾದಾನ ಅರ್ಜಿ ಪರಿಶೀಲನೆ ವಿಳಂಬವಾಗಿರುವುದರ ಕಾರಣ ಮತ್ತು ಅದೀಗ ಯಾವ ಹಂತದಲ್ಲಿದೆ ಎಂಬ ವಿವರಣೆಯನ್ನು ಕೋರಿ ಲೆಫ್ಟಿನೆಂಟ್ ಗವರ್ನರ್ ಅವರ ಕಚೇರಿಗೆ ಕೇಳಬೇಕು ಎಂದು ಸೂಚನೆ ನೀಡಿದ್ದಾರೆ.

ಅಫ್ಜಲ್ ಗುರು ಕ್ಷಮಾದಾನ ಅರ್ಜಿ ಮತ್ತು ಅದೀಗ ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ನೀಡಬೇಕು ಎಂದು ದೆಹಲಿ ರಾಜ್ಯ ಸರಕಾರದ ಗೃಹ ಸಚಿವಾಲಯಕ್ಕೆ ಮುಂಬೈ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಚೇತನ್ ಕೊಠಾರಿಯವರು ಅರ್ಜಿ ಸಲ್ಲಿಸಿದ್ದರು.

ಅಫ್ಜಲ್ ಅರ್ಜಿಯನ್ನು ವಿಳಂಬ ಗತಿಯಲ್ಲಿ ಸಾಗಿಸಲು ಕೇಂದ್ರ ಸರಕಾರ ಅಥವಾ ಇತರ ಯಾವುದೇ ಇಲಾಖೆಯಿಂದ ಒತ್ತಡವಿದೆಯೇ ಎಂದೂ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಕೊಠಾರಿಯವರು ಪ್ರಶ್ನಿಸಿದ್ದರು.

ಆದರೆ ಇದನ್ನು ತಳ್ಳಿ ಹಾಕಿದ್ದ ದೆಹಲಿ ಜಂಟಿ ಗೃಹ ಕಾರ್ಯದರ್ಶಿ, ಇಂತಹ ಕ್ಷಮಾದಾನ ಅರ್ಜಿಗಳಿಗೆ ಸಮಯದ ಮಿತಿ ಇಲ್ಲ. ತಮ್ಮ ಎರಡನೇ ಪ್ರಶ್ನೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಉತ್ತರಿಸಬಹುದಾದ ಪ್ರಶ್ನೆಯಲ್ಲ ಎಂದಿದ್ದರು. ಬಳಿಕ ಕೊಠಾರಿ ಕೇಂದ್ರ ಮಾಹಿತಿ ಆಯೋಗದ ಮೊರೆ ಹೋಗಿದ್ದರು.

ಕೇಂದ್ರ ಗೃಹ ಸಚಿವಾಲಯವು ಕ್ಷಮಾದಾನ ಅರ್ಜಿಯನ್ನು ದೆಹಲಿ ಸರಕಾರಕ್ಕೆ ಕಳುಹಿಸಿಕೊಟ್ಟ ನಾಲ್ಕು ವರ್ಷಗಳ ಅವಧಿಯಲ್ಲಿ 16 ಬಾರಿ ನೆನಪೋಲೆ ಕಳುಹಿಸಿದ ನಂತರ ಕೊನೆಗೂ ಇದೇ ವರ್ಷದ ಮೇ ತಿಂಗಳಲ್ಲಿ ಅರ್ಜಿಯನ್ನು ರಾಜ್ಯಪಾಲ ತೇಜೀಂದರ್ ಖನ್ನಾ ಅವರಿಗೆ ದೆಹಲಿ ರವಾನಿಸಿತ್ತು.

ಸುಪ್ರೀಂ ಕೋರ್ಟ್ ತೀರ್ಪಿನಂತೆ ಉಗ್ರನಿಗೆ ಮರಣ ದಂಡನೆ ನೀಡಬೇಕೆನ್ನುವುದನ್ನು ಈ ಹೊತ್ತಿನಲ್ಲಿ ರಾಜ್ಯ ಸರಕಾರವು ಬೆಂಬಲಿಸಿತ್ತು. ಆದರೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳಿಗೆ ಮುಂದಾಗಬೇಕು ಎಂದು ಹೇಳಿ ಅರ್ಜಿಯನ್ನು ರಾಜ್ಯಪಾಲರ ಕಚೇರಿಗೆ ಕಳುಹಿಸಿತ್ತು.

ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ತನ್ನ ಅಭಿಪ್ರಾಯವನ್ನು ಲಗತ್ತಿಸಿ, ಅರ್ಜಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಬೇಕು.
ಸಂಬಂಧಿತ ಮಾಹಿತಿ ಹುಡುಕಿ