ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಹಿಳೆಯರಿನ್ನು ನಿಂತೇ ದೇಹಬಾಧೆ ತೀರಿಸಿಕೊಳ್ಳಬಹುದು! (stand-up urinals | women | China | Shaanxi Normal University)
Bookmark and Share Feedback Print
 
PR
ಮಹಿಳೆಯರು ಏನು ಮಾಡಿದರೂ ನಿಂತು ಮೂತ್ರ ಮಾಡಲು ಸಾಧ್ಯವಿಲ್ಲ ಎಂಬ ಗಂಡಸರ ಸವಾಲು ಇನ್ನು ನಿಷ್ಪ್ರಯೋಜಕವೆನಿಸುವ ಕಾಲ ಬಂದಿದೆ. ಹೌದು, ಸ್ತ್ರೀಯರು ಕೂಡ ಈಗ ನಿಂತೇ ದೇಹಬಾಧೆ ತೀರಿಸಿಕೊಳ್ಳಬಹುದಾಗಿದೆ.

ಐರೋಪ್ಯ ರಾಷ್ಟ್ರಗಳಲ್ಲಿ ಈಗಾಗಲೇ ಇಂತಹ ವ್ಯವಸ್ಥೆಯೊಂದು ಜಾರಿಯಲ್ಲಿದೆ. ಈಗ ನಮ್ಮ ಪಕ್ಕದ ರಾಷ್ಟ್ರ ಚೀನಾಕ್ಕೂ ಪ್ರವೇಶಿಸಿದೆ. ಮುಂದಿನ ದಿನಗಳಲ್ಲಿ ಇದು ಭಾರತಕ್ಕೂ ಪ್ರವೇಶಿಸಲಿದೆ. ಇದರ ಪ್ರಮುಖ ಉದ್ದೇಶ ನೀರಿನ ಉಳಿತಾಯ ಮತ್ತು ಆಧುನಿಕ ದಿರಿಸುಗಳೊಂದಿಗೆ ಮಾಡಿಕೊಳ್ಳಬೇಕಾದ ಹೊಂದಾಣಿಕೆ.

ಚೀನಾದ ವಾಯುವ್ಯ ಪ್ರಾಂತ್ಯದ ಕ್ಸಿಯಾನ್ ಎಂಬಲ್ಲಿನ 'ಶಾಂಕ್ಸಿ ನಾರ್ಮಲ್ ಯುನಿವರ್ಸಿಟಿ'ಯಲ್ಲಿ ಮಹಿಳೆಯರು ನಿಂತುಕೊಂಡೇ ಶೌಚ ಪೂರೈಸುವ ಆರು ಶೌಚಾಲಯಗಳನ್ನು ಪ್ರಾಯೋಗಿಕವಾಗಿ ಸ್ಥಾಪಿಸಲಾಗಿದೆ.

ಹಾಗೆಂದು ಈ ಆಧುನಿಕ ಶೌಚಾಲಯಗಳು ಚೀನಾದಂತಹ ಪ್ರಗತಿಪರ ರಾಷ್ಟ್ರದಲ್ಲಿ ಭರಪೂರ ಸ್ವಾಗತವನ್ನು ಪಡೆದುಕೊಂಡಿದೆ ಎಂದುಕೊಳ್ಳಬೇಕಾಗಿಲ್ಲ. ಇಂಟರ್ನೆಟ್ ಬ್ಲಾಗುಗಳು ಸೇರಿದಂತೆ ಹಲವು ಚರ್ಚಾ ವೇದಿಕೆಗಳಲ್ಲಿ ಇದರ ಬಗ್ಗೆ ತೀವ್ರ ಟೀಕೆಗಳೂ ವ್ಯಕ್ತವಾಗಿದೆ.
PR

ಮಾಧ್ಯಮ ವರದಿಗಳ ಪ್ರಕಾರ ವಿಶ್ವವಿದ್ಯಾಲಯದ ಕೆಲವೇ ವಿದ್ಯಾರ್ಥಿನಿಯರು ಮಾತ್ರ ಇದನ್ನು ಬಳಸುತ್ತಿದ್ದಾರೆ. ಬಳಕೆಯಲ್ಲಿ ವಿದ್ಯಾರ್ಥಿನಿಯರು ಮುಜುಗರ ಅನುಭವಿಸುತ್ತಿರುವುದರಿಂದ ಇದನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕೆಲವು ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಇದರ ಪ್ರಚಾರಕ್ಕೂ ಮುಂದಾಗಿದ್ದಾರೆ.

ಈ ಶೌಚಾಲಯವನ್ನು ಬಳಸುವವರು ದಪ್ಪನೆಯ ಕಾಗದದಿಂದ ತಯಾರಿಸಿದ ಕೊಳವೆ ರೀತಿಯ ಪರಿಕರವೊಂದನ್ನು ಬಳಕೆ ಮಾಡಬೇಕಾಗುತ್ತದೆ. ಇದು ಯೂಸ್ ಎಂಡ್ ಥ್ರೋ ಪರಿಕರ. ಬಳಕೆದಾರರಿಗೆ ಮುಜುಗರವಾಗಬಾರದೆಂಬ ನಿಟ್ಟಿನಲ್ಲಿ ಪ್ರತಿ ಬೇಸಿನ್‌ಗಳ ನಡುವೆ ಅಂತರವನ್ನು ಸೃಷ್ಟಿಸಲಾಗಿದೆ.

ನೆದರ್ಲೆಂಡ್, ಬೆಲ್ಜಿಯಂ, ಸ್ವಿಜರ್ಲೆಂಡ್, ಕೆನಡಾ, ಫಿನ್ಲೆಂಡ್, ಐರ್ಲೆಂಡ್ ಮತ್ತು ಇಂಗ್ಲೆಂಡ್‌ಗಳಲ್ಲಿ ಪ್ರಮುಖ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುವಾಗ, ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳಲ್ಲೂ 2000ದಿಂದಲೇ ಬಳಸಲಾಗುತ್ತಿದೆ.

ಶೌಚಾಲಯಗಳಲ್ಲಿ ಬರೆದಿರುವ ನೋಟ್ ನೀರನ್ನು ಹೇಗೆ ಉಳಿತಾಯ ಮಾಡಬಹುದು ಎಂಬುದನ್ನು ಬಳಕೆದಾರರಿಗೆ ವಿವರಿಸುತ್ತದೆ.

'ಎಲ್ಲಾ ಸ್ತ್ರೀಯರು ಪುರುಷರಂತೆ ನಿಂತುಕೊಂಡೇ ಬಹಿರ್ದೆಸೆ ಪೂರೈಸಲು ಸಾಧ್ಯವಾದರೆ, ಶಾಂಕ್ಸಿ ವಿಶ್ವವಿದ್ಯಾಲಯವು 160 ಟನ್ ನೀರು ಉಳಿಸಬಹುದು' ಎಂದು ಇಲ್ಲಿ ಬರೆಯಲಾಗಿದೆ.

ವರದಿಗಳ ಪ್ರಕಾರ ಮಹಿಳೆಯರು ಬಳಸುವ ಸಾಂಪ್ರದಾಯಿಕ ಮೂತ್ರಾಲಯಗಳನ್ನು ಶುಚಿಗೊಳಿಸಲು ಪುರುಷರು ಬಳಸುವ ಮೂತ್ರಾಲಯಗಳಿಗಿಂತ ದುಪ್ಪಟ್ಟು ನೀರು ಬಳಕೆಯಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ