ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚೀನಾ, ಪಾಕ್ ಭಾರತದ ಪ್ರಮುಖ ಪೀಡೆಗಳು: ಭಾರತ (Indian Army chief | China | Pakistan | Gen V K Singh)
Bookmark and Share Feedback Print
 
ನಮ್ಮ ಭೂಪ್ರದೇಶಗಳನ್ನು ವಶಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿರುವ ಚೀನಾ ಮತ್ತು ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನಗಳು ಭಾರತದ ಪಾಲಿನ ಎರಡು ಪ್ರಮುಖ ಪೀಡೆಗಳಾಗಿ ಮುಂದುವರಿದಿವೆ ಎಂದು ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿಯಲ್ಲಿ ಮಾತನಾಡುತ್ತಿದ್ದ ಅವರು, ನಿರ್ದಿಷ್ಟ ಭಯೋತ್ಪಾದಕ ಗುಂಪುಗಳಿಗೆ ನೀಡುತ್ತಿರುವ ಸಹಕಾರವನ್ನು ಪಾಕಿಸ್ತಾನ ಇನ್ನೂ ನಿಲ್ಲಿಸಿಲ್ಲ. ಇದರಿಂದಾಗಿ ಗಡಿ ಪ್ರದೇಶದಲ್ಲಿನ ಉದ್ವಿಗ್ನತೆ ಮುಂದುವರಿದಿದೆ. ಪಾಕಿಸ್ತಾನದ ಆಂತರಿಕ ಪರಿಸ್ಥಿತಿಯೂ ಕೆಡುತ್ತಿದೆ ಎಂದರು.

ಭಯೋತ್ಪಾದಕ ಸಂಘಟನೆಗಳಿಗೆ ಒಂದು ಬದಿಯಿಂದ ಬೆಂಬಲ ದೊರಕುತ್ತಿರುವುದರಿಂದ ಅಲ್ಲಿನ ಆಡಳಿತದಲ್ಲಿಯೇ ಸಮಸ್ಯೆಯಿದೆ. ಅಲ್ಲಿನ ಆಂತರಿಕ ಪರಿಸ್ಥಿತಿ ಉತ್ತಮ ಸ್ಥಿತಿಯಲ್ಲಿಲ್ಲ. ಇದೇ ಕಾರಣದಿಂದಾಗಿ ಗಡಿ ಪ್ರದೇಶದಲ್ಲಿ ಉಗ್ರರ ಚಟುವಟಿಕೆಗಳು ಮುಂದುವರಿದಿವೆ ಎಂದು ಸಿಂಗ್ ತಿಳಿಸಿದರು.

ಗಡಿಯಾಚೆಗೆ ಭಯೋತ್ಪಾದಕರ ಮೂಲನೆಲೆಗಳು ಧಕ್ಕೆಯಾಗದೆ ಮುಂದುವರಿಯುತ್ತಿರುವುದು ಭಾರತದ ಪಾಲಿಗೆ ಒಂದು ರೀತಿಯ ಆತಂಕದ ವಿಚಾರವಾಗಿದೆ ಎಂದು ಸೇನಾ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ.

ಇದೇ ರೀತಿಯ ಆತಂಕವನ್ನು ನಾವು ಚೀನಾದಿಂದಲೂ ಎದುರಿಸುತ್ತಿದ್ದೇವೆ. ಅದು ಆರ್ಥಿಕವಾಗಿ ಮತ್ತು ಮಿಲಿಟರಿಯಲ್ಲಿ ಬೆಳೆಯುತ್ತಿದೆ. ಆದರೂ ನಾವು ಷರತ್ತುಬದ್ಧ ಸುಸ್ಥಿತಿಯ ಒಪ್ಪಂದವನ್ನು ಹೊಂದಿದ್ದೇವೆ. ಜತೆಗೆ ಗಡಿಯಲ್ಲಿ ಸ್ಥಿರತೆಯನ್ನೂ ಹೊಂದಿದ್ದೇವೆ ಎಂದರು.

ಚೀನಾ ಅಥವಾ ಪಾಕಿಸ್ತಾನದ ಜತೆಗಿನ ಸಾಂಪ್ರದಾಯಿಕ ಯುದ್ಧದ ಸಾಧ್ಯತೆಗಳನ್ನು ತಳ್ಳಿ ಹಾಕಿದರೂ, ಸಣ್ಣ ಪುಟ್ಟ ತಿಕ್ಕಾಟಗಳು ಸಂಭವಿಸಬಹುದು ಎಂದು ಸಿಂಗ್ ನುಡಿದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ