ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ತ್ರೀಯರ ಒಳ ಉಡುಪು ಬಹಿರಂಗ ಪ್ರದರ್ಶನಕ್ಕೆ ವಿರೋಧ (inner wear | R R Patil | Congress | K Vrushali)
Bookmark and Share Feedback Print
 
ಶಾಪಿಂಗ್ ಸೆಂಟರುಗಳು ಮತ್ತು ಮಾಲ್‌ಗಳಲ್ಲಿ ಮಹಿಳೆಯರ ಒಳ ಉಡುಪುಗಳನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿರುವುದನ್ನು ಅಪಮಾನ ಎಂದು ಪರಿಗಣಿಸಿರುವ ಮಹಿಳೆಯರ ಸಂಘಟನೆಯೊಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದನ್ನು ನಿಷೇಧಿಸುವಂತೆ ಒತ್ತಾಯಿಸಿದೆ.
PR

ಈ ರೀತಿಯಾಗಿ ಒಳ ಉಡುಪುಗಳನ್ನು ವ್ಯಾಪಾರದ ಹೆಸರಿನಲ್ಲಿ ಪ್ರದರ್ಶಿಸುವುದು ಸರಿಯಲ್ಲ. ಇದರಿಂದ ಇಲ್ಲಿ ಹಾದು ಹೋಗುವ ಹದಿ ಹರೆಯದವರು, ಯುವ ಜನತೆ ಮತ್ತು ವಯಸ್ಕರಲ್ಲಿ ಕೀಳಭಿರುಚಿ ಮೂಡುತ್ತಿದೆ. ಹಾಗಾಗಿ ಬೊಂಬೆಗಳಿಗೆ ಒಳ ಉಡುಪುಗಳನ್ನು ತೊಡಿಸಿ ಪ್ರದರ್ಶಿಸುವುದನ್ನು ನಿಷೇಧಿಸಬೇಕು ಎನ್ನುವುದು ಪ್ರತಿಭಟನಾಕಾರರ ಒತ್ತಾಯ.

ಇದು ನಡೆದಿರುವುದು ಮಹಾರಾಷ್ಟ್ರದ ಥಾಣೆಯಲ್ಲಿ. ಥಾಣೆಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಗ್ರಾಹಕರ ಸೇವಾ ವಿಭಾಗದ ಮುಖ್ಯಸ್ಥೆ ಕೆ. ವೃಶಾಲಿಯವರು ಇತರ ಹತ್ತಾರು ಕಾರ್ಯಕರ್ತೆಯರೊಂದಿಗೆ ಮಹಾರಾಷ್ಟ್ರ ಗೃಹಸಚಿವ ಆರ್.ಆರ್. ಪಾಟೀಲ್ ಅವರನ್ನು ಭೇಟಿಯಾಗಿ, ಮನವಿ ಪತ್ರವನ್ನು ನೀಡಿದ್ದಾರೆ.

ಬಹುತೇಕ ಬಟ್ಟೆ ಅಂಗಡಿಗಳಲ್ಲಿ ಮನುಷ್ಯಾಕೃತಿಯ ಬೊಂಬೆಗಳಿಗೆ ಆಕರ್ಷಕ ಉಡುಪುಗಳನ್ನು ತೊಡಿಸುವುದು ಸಾಮಾನ್ಯ. ಅದೇ ರೀತಿ ಒಳ ಉಡುಪುಗಳನ್ನು ಕೂಡ ಬೊಂಬೆಗಳಿಗೆ ತೊಡಿಸಿ ಪ್ರದರ್ಶಿಸಲಾಗುತ್ತಿದೆ. ಹೀಗೆ ಪ್ರದರ್ಶಿಸಿ ಮಾರಾಟ ಮಾಡುವ ಅಂಗಡಿ ಮಾಲಕ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಇದರ ಮೇಲೆ ನಿಷೇಧ ಹೇರಬೇಕು ಎಂದು ವೃಶಾಲಿ ಆಗ್ರಹಿಸಿದ್ದಾರೆ.

ಈ ಸಂಬಂಧ ಥಾಣೆ ಪೊಲೀಸ್ ಆಯುಕ್ತ ಎಸ್.ಪಿ.ಎಸ್. ಯಾದವ್ ಅವರಿಗೂ ಮನವಿ ಸಲ್ಲಿಸಲಾಗಿದೆ. ಒಳ ಉಡುಪುಗಳನ್ನು ಬಹಿರಂಗವಾಗಿ ಪ್ರದರ್ಶಿಸುವ ಮಾಲ್‌‍ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ತಕ್ಷಣವೇ ಸೂಚನೆ ನೀಡಬೇಕೆಂದು ಪೊಲೀಸ್ ಆಯುಕ್ತರಿಗೆ ಒತ್ತಾಯಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ