ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶನಿ ನಂಬಿಕೆಗೆ ಎಳ್ಳುನೀರು; ಬಾಗಿಲೇ ಇಲ್ಲದ ಊರಲ್ಲಿ ಕಳ್ಳತನ (Maharashtra | Shani | Shingnapur village | Lord Shani)
Bookmark and Share Feedback Print
 
PR
ಪುರಾತನ ಪುಣ್ಯಕ್ಷೇತ್ರವನ್ನು ಹೊಂದಿರುವ ಮಹಾರಾಷ್ಟ್ರದ ಶನಿ-ಶಿಂಗನಪುರ ಗ್ರಾಮದಲ್ಲಿ ಅಪಚಾರ ನಡೆದಿದೆ. ನೂರಾರು ವರ್ಷಗಳಿಂದ ಇಲ್ಲಿನ ಮನೆ-ಕಚೇರಿಗಳಿಗೆ ಬಾಗಿಲು ಇಲ್ಲದೇ ಇರುವುದನ್ನು ಕಳ್ಳರು ಮೊತ್ತ ಮೊದಲ ಬಾರಿ ದುರುಪಯೋಗಪಡಿಸಿಕೊಂಡಿದ್ದಾರೆ.

ಶಿರ್ಡಿ ಮತ್ತು ಔರಾಂಗಾಬಾದ್‌ಗಳ ನಡುವೆ ಇರುವ ಶನಿ ಶಿಂಗನಪುರ ಗ್ರಾಮದಲ್ಲಿ ಶನಿ ಮಹಾರಾಜನ ಭವ್ಯ ದೇವಳವಿದೆ. ಇದು ಉದ್ಭವ ಮೂರ್ತಿ ಎಂದೂ ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಕಲಿಯುಗದ ಆರಂಭದಿಂದಲೇ ಈ ದೇವಸ್ಥಾನ ಅಸ್ತಿತ್ವದಲ್ಲಿದೆ. ಇಲ್ಲಿನ ಸಂಪ್ರದಾಯವೆಂದರೆ ಊರಿನ ಯಾವುದೇ ಮನೆಗಳಿಗೆ ಬಾಗಿಲು-ಬೀಗಗಳು ಇರದೇ ಇರುವುದು.

ಇದನ್ನೂ ಓದಿ: ಈ ಊರಿನ ಮನೆಗಳಲ್ಲಿ ಬಾಗಿಲೇ ಇಲ್ಲ, ಎಲ್ಲವೂ ದೈವ ಲೀಲೆ!

ಆದರೆ ಈ ಸಂಪ್ರದಾಯಕ್ಕೆ ಕಳ್ಳರು ಕನ್ನ ಹಾಕಿದ್ದಾರೆ. ಸುಮಾರು 35,000 ರೂಪಾಯಿ ಮೌಲ್ಯದ ನಗದು ಮತ್ತು ಇತರ ವಸ್ತುಗಳನ್ನು ತಾನು ಈ ಗ್ರಾಮದಲ್ಲಿ ಕಳೆದುಕೊಂಡಿರುವುದಾಗಿ ಹರ್ಯಾಣದ ಗುರ್ಗಾವ್ ನಿವಾಸಿಯೊಬ್ಬ ದೂರು ನೀಡಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಡಿ. ಮಾಣೆ, ಈ ಗ್ರಾಮದಿಂದ ಕಳ್ಳತನ ಪ್ರಕರಣ ವರದಿಯಾಗಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಈ ಹಿಂದೆ ಯಾವಾಗ ಕಳ್ಳತನ ನಡೆದಿತ್ತು ಎನ್ನುವುದು ದಾಖಲೆಗಳನ್ನು ನೋಡದೆ ಹೇಳುವುದು ಅಸಾಧ್ಯ ಎಂದಿದ್ದಾರೆ.

ಇಲ್ಲಿನ ಐತಿಹ್ಯವೇನು?
ಭಕ್ತರು ಹೇಳುವ ಪ್ರಕಾರ ಒಂದಾನೊಂದು ಕಾಲದಲ್ಲಿ ಇಲ್ಲಿ ಕುರಿ ಕಾಯುವವರು ಕಲ್ಲೊಂದನ್ನು ಸ್ಪರ್ಶಿಸಿದಾಗ ರಕ್ತ ಸುರಿಯಲು ಆರಂಭಿಸಿತ್ತು. ಇದರಿಂದ ಗ್ರಾಮಸ್ಥರು ಚಕಿತರಾಗಿದ್ದರು. ಅದೇ ರಾತ್ರಿ ಶನೇಶ್ವರ ಭಕ್ತರ ಕನಸಿನಲ್ಲಿ ಬಂದು ಹರಸಿದ್ದನಂತೆ.

ಅಲ್ಲದೆ, ನೀವು ಸ್ಪರ್ಶಿಸಿರುವ ಕರಿ ಕಲ್ಲು ನನ್ನ ಉದ್ಭವ ಮೂರ್ತಿ ಎಂದು ಶನೇಶ್ವರ ಹೇಳಿದಾಗ, ಅಲ್ಲಿ ದೇವಳ ಕಟ್ಟಬಹುದೇ ಎಂದು ಕುರುಬರು ಕೇಳಿಕೊಂಡಿದ್ದರು. ಛಾವಣಿಯಿಲ್ಲದೆ ದೇವಸ್ಥಾನ ಕಟ್ಟಿದಲ್ಲಿ ಗ್ರಾಮದಲ್ಲಿ ಯಾವುದೇ ಕಳ್ಳತನ, ದರೋಡೆಗಳು ನಡೆಯದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಶನಿ ಅಭಯವಿತ್ತನಂತೆ.

ಇದೇ ಕಾರಣದಿಂದ ಶನಿ-ಶಿಂಗನಪುರ ಗ್ರಾಮದಲ್ಲಿರುವ ಶನೇಶ್ವರ ದೇವಳಕ್ಕೆ ಇಂದಿಗೂ ಛಾವಣಿಯಿಲ್ಲ. ಅಲ್ಲದೆ ಗ್ರಾಮದ ಮನೆ, ದೇವಾಲಯಗಳು, ಕಚೇರಿಗಳು, ಅಂಗಡಿಗಳು ಬಾಗಿಲು ಇಲ್ಲದೆಯೇ ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿನ ಅಂಚೆ ಕಚೇರಿಗೂ ಬಾಗಿಲಿಲ್ಲ. ಇದುವರೆಗೆ ಕಳ್ಳತನಗಳೂ ನಡೆದಿರಲಿಲ್ಲ. ಆದರೆ ಈಗ ಸಂಪ್ರದಾಯಕ್ಕೆ ಭಂಗವಾಗಿದೆ ಎಂದು ಭಕ್ತರು ಹೇಳುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ