ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಟ್ಕಳ ಸಹೋದರರೇ ವಾರಣಾಸಿ ಸ್ಫೋಟದ ರೂವಾರಿಗಳು (Bhatkal brothers | Varanasi blast | Indian Mujahideen | Riyaz Bhatkal)
Bookmark and Share Feedback Print
 
ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿ ದೇಶದಾದ್ಯಂತ ಸುದ್ದಿಯಾಗಿದ್ದ ಕರ್ನಾಟಕ ಮತ್ತೆ ಕೆಟ್ಟ ಕಾರಣಕ್ಕಾಗಿ ಜನರ ಬಾಯಿಯಲ್ಲಿ ನಲಿದಾಡುವಂತಾಗಿದೆ. ಇಂಡಿಯನ್ ಮುಜಾಹಿದೀನ್‌ನ ಭಟ್ಕಳ ಸಹೋದರರೇ ಮಂಗಳವಾರ ಸಂಜೆ ಹೊತ್ತು ವಾರಣಾಸಿಯಲ್ಲಿ ನಡೆದಿದ್ದ ಸ್ಫೋಟದ ಹಿಂದಿನ ರೂವಾರಿಗಳು ಎಂಬ ಬಗ್ಗೆ ಸುಳಿವು ದೊರೆತಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಮುಂಬೈ ಪೊಲೀಸ್ ಆಯುಕ್ತ ಸಂಜೀವ್ ದಯಾಳ್ ಅವರ ಪ್ರಕಾರ, ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಎಂಬ ಸಹೋದರರು ಪಾಕಿಸ್ತಾನದಲ್ಲಿದ್ದುಕೊಂಡೇ ಸ್ಫೋಟಕ್ಕೆ ಸಹಕಾರ ನೀಡಿದ್ದಾರೆ. ಸ್ಫೋಟದ ಅಂಶಗಳನ್ನು ಪರಿಶೀಲಿಸಿದಾಗ ಇದರ ಹಿಂದೆ ಭಟ್ಕಳ ಸಹೋದರರೇ ಇರುವುದು ಖಚಿತವಾಗಿದೆ ಎಂದಿದ್ದಾರೆ.
PTI

ಬಾಲಕಿ ಸಾವು ಮತ್ತು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಸ್ಫೋಟದ ನಂತರ ಮಾಧ್ಯಮ ಕಚೇರಿಗಳಿಗೆ ರವಾನಿಸಲಾಗಿರುವ ಇಂಡಿಯನ್ ಮುಜಾಹಿದೀನ್ ಹೆಸರಿನ ಇ-ಮೇಲ್ ಶೋಧಿಸಿದಾಗ, ಇದನ್ನು ಮುಂಬೈಯ ಮನೆಯೊಂದರಿಂದ ಕಳುಹಿಸಿರುವುದು ಖಚಿತವಾಗಿದೆ. ಆದರೆ ಆ ಮನೆಯವರು ಅಮಾಯಕರು. ಅವರ ವೈ-ಫೈ ಸಂಪರ್ಕವನ್ನು ಬೇರೆ ಯಾರೋ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದಯಾಳ್ ತಿಳಿಸಿದ್ದಾರೆ.

ಇಂಡಿಯನ್ ಮುಜಾಹಿದೀನ್ ಕಮಾಂಡರ್ ಡಾ. ಶಹನಾವಾಜ್ ಸಹೋದರ ಮೊಹಮ್ಮದ್ ಸೈಫ್ ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ಎರಡು ವರ್ಷಗಳ ಹಿಂದಷ್ಟೇ ಬಂಧನಕ್ಕೊಳಗಾಗಿದ್ದ. ಪ್ರಸಕ್ತ ಆತ ಜೈಲಿನಲ್ಲಿದ್ದಾನೆ. ಇಂಡಿಯನ್ ಮುಜಾಹಿದೀನ್ ಆಗಿನ ಕಮಾಂಡರ್ ಆತಿಕ್ ಅಮೀನ್ ಎನ್‌ಕೌಂಟರಿನಲ್ಲಿ ಬಲಿಯಾಗಿದ್ದ.

ಆ ನಂತರ ಇಂಡಿಯನ್ ಮುಜಾಹಿದೀನ್ ಹೊಣೆಯನ್ನು ಡಾ. ಶಹನಾವಾಜ್ ಹೊತ್ತುಕೊಂಡಿದ್ದ. ಪ್ರಸಕ್ತ ಈತ ದುಬೈ ಮತ್ತು ಪಾಕಿಸ್ತಾನಗಳ ನಡುವೆ ಓಡಾಡುತ್ತಿದ್ದಾನೆ. ಭಟ್ಕಳ ಸಹೋದರರು ಮತ್ತು ಶಹನಾಬಾಜ್ ಜತೆಯಾಗಿ ಕಾರ್ಯಾಚರಣೆಗಳಿಗೆ ಸಹಕಾರ ನೀಡುತ್ತಿದ್ದರು ಎಂದು ಹೇಳಲಾಗಿದೆ.

ಇವರ ಜತೆ ಕೇಳಿ ಬಂದಿರುವ ಇನ್ನೊಂದು ಹೆಸರು ಅಸಾದುಲ್ಲಾ. ಶಹನಾವಾಜ್ ಮತ್ತು ಅಸಾದುಲ್ಲಾ ವಾರಣಾಸಿ ಸ್ಫೋಟದ ಹಿಂದೆ ನೇರವಾಗಿ ಪಾಲ್ಗೊಂಡಿದ್ದಾರೆ.

ಇವರಿಬ್ಬರೂ ದೆಹಲಿಯಲ್ಲಿ 2008ರ ಸೆಪ್ಟೆಂಬರ್ 13ರಂದು ನಡೆದ ಸರಣಿ ಸ್ಫೋಟದ ಉಗ್ರರ ಗುಂಪಿನವರು. ಇದೇ ಕಾರಣದಿಂದ ಅದೇ ವರ್ಷದ ಅಕ್ಟೋಬರ್ 24ರಂದು ಬಾಟ್ಲಾ ಹೌಸ್ ಎನ್‌ಕೌಂಟರ್ ನಡೆದಿತ್ತು. ಅವರೇ ಇದೀಗ ವಾರಣಾಸಿ ಸ್ಫೋಟದಲ್ಲೂ ಪಾಲ್ಗೊಂಡಿರುವ ಬಗ್ಗೆ ಸಾಕಷ್ಟು ಸುಳಿವು ಸಿಕ್ಕಿದೆ ಎಂದು ಹೇಳಲಾಗಿದೆ.

ರಿಯಾಜ್ ಭಟ್ಕಳ್ ಆಲಿಯಾಸ್ ರೋಷನ್ ಖಾನ್ ಆಲಿಯಾಸ್ ಅಜೀಜ್ ಆಲಿಯಾಸ್ ಅಹ್ಮೆದಿ ಭಾಯ್ ಮತ್ತು ಅಕ್ಬಾಲ್ ಭಟ್ಕಳ್ ಆಲಿಯಾಸ್ ಮೊಹಮ್ಮದ್ ಭಾಯ್ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರು. ಆದರೆ ಇವರಿಬ್ಬರೂ ಬೆಳೆದದ್ದು ಮುಂಬೈಯ ಕುರ್ಲಾದಲ್ಲಿ. ಇಲ್ಲಿ ಚರ್ಮದ ವ್ಯಾಪಾರ ನಡೆಸುತ್ತಿದ್ದರು.

ಕುರ್ಲಾದಲ್ಲಿ ನಿಷೇಧಿತ ಸಂಘಟನೆ ಸಿಮಿಯ ಕಚೇರಿ ಸಮೀಪವೇ ಭಟ್ಕಳ ಸಹೋದರರು ಉಳಿದುಕೊಂಡಿದ್ದರು. ನಂತರದ ದಿನಗಳಲ್ಲಿ ಅವರು ಸಿಮಿ ಸದಸ್ಯರಾಗಿ, 2001ರಲ್ಲಿ ಮಹಾರಾಷ್ಟ್ರ ಸರಕಾರವು ಸಂಘಟನೆಯನ್ನು ನಿಷೇಧಿಸುವವರೆಗೂ ಕಚೇರಿಯನ್ನು ನಡೆಸುತ್ತಿದ್ದರು.

ಸಿಮಿ ನಿಷೇಧಕ್ಕೊಳಗಾದ ನಂತರ ಅವರು ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯನ್ನು ಹುಟ್ಟು ಹಾಕಿದ್ದರು. ನಂತರದ ದಿನಗಳಲ್ಲಿ ಇದೇ ಹೆಸರಿನಲ್ಲಿ ದೇಶದಾದ್ಯಂತ ದುಷ್ಕೃತ್ಯಗಳನ್ನು ನಡೆಸುತ್ತಾ ಬಂದಿರುವ ಭಟ್ಕಳ ಸಹೋದರರು, ಇತರ ಭಯೋತ್ಪಾದಕ ಸಂಘಟನೆಗಳಿಗೂ ಸಹಕಾರ ನೀಡುತ್ತಾ ಬಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ