ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಮ್ಮ ನೆಲದಲ್ಲಿ ತ್ವಿವರ್ಣ ಧ್ವಜಾರೋಹಣ ಅಪರಾಧವೇ? (BJP | flag hoisting | Jammu and Kashmir | Lal Chowk)
Bookmark and Share Feedback Print
 
PTI

ಧ್ವಜಾರೋಹಣಕ್ಕೆ ವಿರೋಧ ಯಾಕೆ?

ಜಮ್ಮು-ಕಾಶ್ಮೀರವೆಂದರೆ ಅದು ದೇಶಭಕ್ತರ ತುಂಡುಗಳಿರುವ ನಾಡಲ್ಲ ಎನ್ನುವುದು ಜನಜನಿತ. ಆದರೆ ಕನಿಷ್ಠ ಭಾರತದ ಧ್ವಜವನ್ನು ಹಾರಿಸಿದರೆ ಅಲ್ಲಿ ಹಿಂಸಾಚಾರ ನಡೆಯುತ್ತದೆ ಎನ್ನುವುದು ಸರಕಾರಗಳ ಭೀತಿ. ಇದಕ್ಕೆ ಕಾರಣ ಪ್ರತ್ಯೇಕತಾವಾದಿಗಳು ಮತ್ತು ಅವರ ರೂಪದಲ್ಲಿರುವ ಉಗ್ರಗಾಮಿಗಳು.

ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಲೇಬೇಕು ಎನ್ನುವುದು ಬಿಜೆಪಿಯ ನಿಲುವು. ಕಳೆದ ವರ್ಷ ಸರಕಾರಗಳು ಧ್ವಜ ಹಾರಿಸದೇ ಇರಲು ನಿರ್ಧರಿಸಿದಾಗ, ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಲು ವಿಫಲವಾಗಿದ್ದ ಬಿಜೆಪಿ ಈ ಬಾರಿ ಸಾಧಿಸಿಯೇ ಸಿದ್ಧ ಎಂದು ಹೊರಟಿದೆ. ಇದರಲ್ಲಿ ರಾಜಕೀಯ ಲಾಭದ ವಾಸನೆ ಬರುತ್ತಿರುವುದು ಹೌದಾದರೂ, ಯಾಕೆ ರಾಷ್ಟ್ರಧ್ವಜ ಹಾರಿಸಬಾರದು ಎಂಬ ಮೂಲಭೂತ ಪ್ರಶ್ನೆ ಇದ್ದೇ ಇರುತ್ತದೆ.

ನಮ್ಮದೇ ನೆಲದಲ್ಲಿ ರಾಷ್ಟ್ರಧ್ವಜ ಹಾರಿಸದೇ ಇರಲು ಸರಕಾರಗಳು ಕೊಡುವ ಕಾರಣ ಪ್ರತ್ಯೇಕತಾದಿಗಳಿಗೆ ಇದು ಪಥ್ಯವಾಗುವುದಿಲ್ಲ ಎನ್ನುವುದು. ಅಲ್ಲಿನ ಜನರಲ್ಲಿ ಅನಗತ್ಯ ಪ್ರಚೋದನೆ ಉಂಟು ಮಾಡುವುದು ಇಷ್ಟವಿಲ್ಲ ಎಂದು ಸ್ವತಃ ಯುಪಿಎ ಸರಕಾರವೇ ಕಳೆದ ವರ್ಷ ಹೇಳಿಕೆ ನೀಡಿತ್ತು.

ಇದು ಭಯೋತ್ಪಾದಕರಿಗೆ ನೀಡುವ ಪ್ರೋತ್ಸಾಹ. ಸರಕಾರವು ಕಾಶ್ಮೀರ ಕಣಿವೆಯ ಪ್ರತ್ಯೇಕತಾವಾದಿಗಳಿಗೆ ಶರಣಾಗಿದೆ. ಸರಕಾರದ ಈ ನಿರ್ಧಾರವು ಭದ್ರತಾ ಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಗಣರಾಜ್ಯೋತ್ಸವದಂದು ಬಂದ್ ನಡೆಸುವ ಹುರಿಯತ್ ಕಾನ್ಫರೆನ್ಸ್‌ನಂತಹ ಪ್ರತ್ಯೇಕತಾವಾದಿಗಳನ್ನು ನಿಯಂತ್ರಿಸಲು ಸರಕಾರ ವಿಫಲವಾಗಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು.

ಮೂರನೇ ಪುಟದಲ್ಲಿ ಮುಂದುವರಿದಿದೆ - ಇಲ್ಲಿ ಕ್ಲಿಕ್ ಮಾಡಿ.

 
ಸಂಬಂಧಿತ ಮಾಹಿತಿ ಹುಡುಕಿ