ಒಮರ್ ಕಿವಿ ಮಾತನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿಲ್ಲ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಹಾಗಾಗಿ ನಾವು ಅಲ್ಲಿನ ಎಲ್ಲಿ ಬೇಕಾದರೂ ಧ್ವಜ ಹಾರಿಸಬಹುದು. ಇಲ್ಲಿ ಶಾಂತಿ ಕದಡುವ ಪ್ರಶ್ನೆಯೇ ಇಲ್ಲ ಎಂದು ಕೇಸರಿ ಪಕ್ಷ ಹೇಳಿಕೊಂಡಿದೆ.
ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ಬಿಜೆಪಿ ನಂಬಿದೆ. ನಾವು ನಮ್ಮ ರಾಷ್ಟ್ರಧ್ವಜವನ್ನು ಒಂದು ರಾಜ್ಯದಲ್ಲಲ್ಲ, ಹಲವು ರಾಜ್ಯಗಳಲ್ಲಿ ಕೊಂಡೊಯ್ಯಲಿದ್ದೇವೆ. ರಾಷ್ಟ್ರೀಯ ಏಕತೆ ಮತ್ತು ಸಾರ್ವಭೌಮತೆಯನ್ನು ಸಾರುವ ಕಾರ್ಯಕ್ರಮದ ಅಂಗವಿದು ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ಕಾಶ್ಮೀರದಲ್ಲಿ ಹಿಂಸಾಚಾರವನ್ನು ಉಂಟು ಮಾಡಬೇಕೆನ್ನುವುದು ನಮ್ಮ ಉದ್ದೇಶವಲ್ಲ. ಜನವರಿ 12ರಿಂದ ನಮ್ಮ 'ರಾಷ್ಟ್ರೀಯ ಏಕತಾ ಯಾತ್ರೆ' ಕೊಲ್ಕತ್ತಾದಲ್ಲಿ ಆರಂಭವಾಗುತ್ತದೆ. ಹಲವು ರಾಜ್ಯಗಳನ್ನು ದಾಟಿ ಇದು ಶ್ರೀನಗರದಲ್ಲಿ ಜನವರಿ 26ರಂದು ಸಮಾಪ್ತಿಗೊಳ್ಳುತ್ತದೆ. ಅಂದು ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ ಎಂದರು.