ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಏನಿದು ಬೊಫೋರ್ಸ್ ಹಗರಣ? ಸೋನಿಯಾಗೇನು ಸಂಬಂಧ? (Bofors scam | Sonia Gandhi | Ottavio Quattrocchi | Rajiv Gandhi)
Bookmark and Share Feedback Print
 
ರಾಜೀವ್ ಗಾಂಧಿ
PTI

ಬಹಿರಂಗಪಡಿಸಿದ್ದು ಮಾಧ್ಯಮ...

ಮಾಧ್ಯಮಗಳದ್ದು ಅತಿರೇಕ ಎಂದು ವಾದಿಸುವವರು ಕೂಡ ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ಯಾಕೆಂದರೆ ಜಗತ್ತಿನ ಬಹುತೇಕ ಹಗರಣಗಳು ಬಯಲಾಗುವುದೇ ಮಾಧ್ಯಮಗಳ ಮೂಲಕ. ಅದೇ ರೀತಿ ಬೊಫೋರ್ಸ್ ಕೂಡ ಹೊರಗೆ ಬಂದದ್ದು ಮಾಧ್ಯಮದಲ್ಲಿ.

1987ರ ಏಪ್ರಿಲ್ 27ರಂದು ಸ್ವೀಡನ್ ರೇಡಿಯೋ ಫಿರಂಗಿ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಮೊತ್ತ ಮೊದಲ ಬಾರಿ ವರದಿ ಮಾಡಿತ್ತು. ಭಾರತ ಸರಕಾರವು ಬೊಫೋರ್ಸ್ ಕಂಪನಿಯಿಂದ ಖರೀದಿಸಿದ್ದ ಫಿರಂಗಿ ವ್ಯವಹಾರದಲ್ಲಿ ಮಧ್ಯವರ್ತಿಗಳು ಸೇರಿದಂತೆ ಭಾರತದ ಹಲವು ರಾಜಕಾರಣಿಗಳು ಲಂಚ ಪಡೆದಿದ್ದರು ಎಂದು ಅದು ಹೇಳಿತ್ತು.

ಇದು ಭಾರತದಲ್ಲಿ ಭಾರೀ ಅಲ್ಲೋಲ-ಕಲ್ಲೋಲಕ್ಕೆ ಕಾರಣವಾಯಿತು. ಲೋಕಸಭೆ ದಾಖಲೆಯಷ್ಟು ದಿನಗಳ ಕಾಲ ಕಲಾಪ ನಡೆಸಲಿಲ್ಲ. ನಾನೇನು ತಪ್ಪೇ ಮಾಡಿಲ್ಲ ಎಂದು ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಎಷ್ಟೇ ಸರ್ಕಸ್ ಮಾಡಿದರೂ ಜನ ನಂಬಲಿಲ್ಲ. ನಿರೀಕ್ಷೆಯಂತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿತು.

ಹಗರಣದಲ್ಲಿ ಕೇಳಿ ಬಂದ ಹೆಸರುಗಳು...
ಹಗರಣದಲ್ಲಿ ಕೇಳಿ ಬಂದ ಪ್ರಮುಖ ಹೆಸರು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ. ಇಲ್ಲಿ ಮಧ್ಯವರ್ತಿಗಳು, ಕಮೀಷನ್ ಪಡೆದುಕೊಂಡವರು ಎಂದು ಇಟಲಿ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ಮತ್ತು ವಿನ್ ಚಡ್ಡಾ.

ಹಿಂದೂಜಾ ಸಹೋದರರಾದ ಶ್ರೀಚಂದ್ ಹಿಂದೂಜಾ, ಗೋಪಿಚಂದ್ ಹಿಂದೂಜಾ, ಪ್ರಕಾಶ್ ಹಿಂದೂಜಾ, ಮಾರ್ಟಿನ್ ಆರ್‌ಡಾಬೊ, ಓಲಫ್ ಪಾಮೆ, ಎಸ್. ಭಟ್ನಾಗರ್ ಮುಂತಾದವರ ಹೆಸರುಗಳು ಕೂಡ ಬೊಫೋರ್ಸ್ ಹಗರಣದಲ್ಲಿ ಪ್ರಮುಖ ಸ್ಥಾನಗಳನ್ನು ಪಡೆದಿದ್ದರು.

ಮೂರನೇ ಪುಟದಲ್ಲಿ ಮುಂದುವರಿದಿದೆ - ಇಲ್ಲಿ ಕ್ಲಿಕ್ ಮಾಡಿ

 
ಸಂಬಂಧಿತ ಮಾಹಿತಿ ಹುಡುಕಿ