ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಏನಿದು ಬೊಫೋರ್ಸ್ ಹಗರಣ? ಸೋನಿಯಾಗೇನು ಸಂಬಂಧ? (Bofors scam | Sonia Gandhi | Ottavio Quattrocchi | Rajiv Gandhi)
Bookmark and Share Feedback Print
 
ಮನಮೋಹನ್ ಸಿಂಗ್
PTI

ಹಗರಣಕ್ಕಿಂತ ಹೆಚ್ಚು ತನಿಖೆಗೆ ವೆಚ್ಚ!

ಸರಕಾರ ನೀಡಿರುವ ಕಮೀಷನ್ ಪ್ರಸಕ್ತ ಅಂದಾಜಿನ ಪ್ರಕಾರ 41.25 ಕೋಟಿ ರೂಪಾಯಿಗಳು. ಮತ್ತೊಂದು ಅಂದಾಜಿನ ಪ್ರಕಾರ 68 ಕೋಟಿ ರೂಪಾಯಿಗಳು. ತಜ್ಞರ ಹೇಳಿಕೆಯಂತೆ ಸರಕಾರಕ್ಕೆ ಇದರಿಂದ ಆಗಿರುವ ನಷ್ಟ ಸುಮಾರು 100 ಕೋಟಿ ರೂಪಾಯಿಗಳು. ಆದರೆ ಇದು ರಾಜಕಾರಣಿಗಳಿಗೂ ಸಂದಿರುವ ಲೆಕ್ಕವಲ್ಲ. ಅದಿನ್ನೂ ಹೊರಗೆ ಬಂದಿಲ್ಲ.

ಇದು 24 ವರ್ಷಗಳ ಹಿಂದಿನ ಮಾತು. ಆಗಿನ 1 ರೂಪಾಯಿಗೆ ಈಗ 100 ರೂಪಾಯಿ ಮೌಲ್ಯ ಬಂದಿದೆ. ಆ ಹಗರಣ ನಡೆದ ನಂತರ 24 ವರ್ಷಗಳಿಂದ ಈ ಪ್ರಕರಣದ ತನಿಖೆ ನಡೆಯುತ್ತಾ ಬಂದಿದೆ, ಈಗಲೂ ನಡೆಯುತ್ತಿದೆ. ಅಂದರೆ ಕೇವಲ ತನಿಖೆಗೆ ಆಗಿರುವ ವೆಚ್ಚವನ್ನು ಅಂದಾಜು ಮಾಡಿ.

ವಿಚಿತ್ರವೆಂದರೆ ಇದುವರೆಗೂ ತನಿಖೆಯಲ್ಲಿ ಯಾವುದೇ 'ಪ್ರಗತಿ' ಸಾಧಿಸಲು ಸಾಧ್ಯವಾಗದೇ ಇರುವುದು. ಇದುವರೆಗೂ ಒಬ್ಬೇ ಒಬ್ಬರಿಗೆ ಹಗರಣದಲ್ಲಿ ಶಿಕ್ಷೆಯಾಗಿಲ್ಲ. ಸರಕಾರವು ಒಪ್ಪಂದದ ಹೊರತಾಗಿ ಮಧ್ಯವರ್ತಿಗಳಿಗೆ ಪಾವತಿಸಿದ 41 ಕೋಟಿ ರೂಪಾಯಿಗಳು ಕಾನೂನು ಬಾಹಿರವಾಗಿದ್ದರೂ, ಅದು ಸಾಬೀತಾಗಿಲ್ಲವೆಂದರೆ?

ಇದಕ್ಕೆ ಕಾರಣ ನಮ್ಮ ಸರಕಾರಗಳು, ಆಯಕಟ್ಟಿನ ಜಾಗಗಳಲ್ಲಿರುವ ರಾಜಕಾರಣಿಗಳು. ಭಾರತದಲ್ಲೇ ಇದ್ದ ಕ್ಟಟ್ರೋಚಿಯನ್ನು ವಿದೇಶಕ್ಕೆ ಪಲಾಯನ ಮಾಡಲು 1993ರಲ್ಲಿ ಅವಕಾಶ ನೀಡಿದ್ದು ಸ್ವತಃ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹ ರಾವ್.

ನಂತರದ ದಿನಗಳಲ್ಲಿ ಬಂದ ಪ್ರತಿಯೊಬ್ಬರೂ ಇದಕ್ಕೆ ತಕ್ಕಂತ ನಡೆದುಕೊಂಡಿದ್ದಾರೆ. ಇದಕ್ಕೆ ಮನಮೋಹನ್ ಸಿಂಗ್ ಕೂಡ ಹೊರತಲ್ಲ. 2004ರಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಲಂಡನ್‌ನಲ್ಲಿನ ಬ್ಯಾಂಕ್‌ನಲ್ಲಿನ ಕ್ವಟ್ರೋಚಿ ಹಣವನ್ನು ಬಿಡುಗಡೆ ಮಾಡಿದ್ದು. ಅದನ್ನು ಅದಕ್ಕೂ ಮೊದಲು ಭಾರತ ಸರಕಾರ ಮುಟ್ಟುಗೋಲು ಹಾಕಿಕೊಂಡಿತ್ತು! ಇದರ ಮೊತ್ತ 21 ಕೋಟಿ ರೂಪಾಯಿ.

ಐದನೇ ಪುಟದಲ್ಲಿ ಮುಂದುವರಿದಿದೆ - ಇಲ್ಲಿ ಕ್ಲಿಕ್ ಮಾಡಿ

 
ಸಂಬಂಧಿತ ಮಾಹಿತಿ ಹುಡುಕಿ