ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪತ್ನಿಯ ಸೆಕ್ಸ್, ಅಶ್ಲೀಲ ಬಟ್ಟೆ ವಾಂಛೆ; ಗಂಡನಿಗೆ ಡೈವೋರ್ಸ್ (Divorce, Vishal)
ಆಕೆ ಮಧುಚಂದ್ರದ ದಿನದಿಂದಲೇ ಗಂಡನಿಗೆ ಬಗೆ ಬಗೆಯ ರೀತಿಯಲ್ಲಿ ಮಾನಸಿಕ ಹಿಂಸೆ ನೀಡುತ್ತಿದ್ದಳು. ಗಂಡನಿಗೆ ಕಿರಿಕಿರಿ ಎನಿಸಿದರೂ ಅಶ್ಲೀಲವಾಗಿ ಬಟ್ಟೆ ಧರಿಸುತ್ತಿದ್ದಳು. ತೃಪ್ತಿಪಡಿಸಲಾಗದ ಲೈಂಗಿಕ ವಾಂಛೆ ಆಕೆಯಲ್ಲಿತ್ತು. ಇದನ್ನೇ ಆಧಾರವಾಗಿ ಪರಿಗಣಿಸಿದ ನ್ಯಾಯಾಲಯವೊಂದು ವಿವಾಹ ವಿಚ್ಛೇದನಕ್ಕೆ ಅಸ್ತು ಎಂದು ಹೇಳುವ ಮೂಲಕ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ಈ ತೀರ್ಪು ನೀಡಿರುವುದು ಕರ್ಕರ್ಡೋಮಾ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಮನಮೋಹನ್ ಶರ್ಮಾ. ಆ ಮಹಿಳೆಯು ತನ್ನ ಗಂಡನನ್ನು ಹಲವು ವಿಚಾರಗಳಲ್ಲಿ ಪೀಡಿಸುತ್ತಿರುವುದು ಕಂಡು ಬಂದಿದ್ದು, ಅದನ್ನು ಕ್ರೌರ್ಯತೆ ಎಂದು ಪರಿಗಣಿಸಲಾಗಿದೆ. ಹಾಗಾಗಿ ವಿವಾಹ ವಿಚ್ಛೇದನಕ್ಕೆ ಈ ನ್ಯಾಯಾಲಯವು ಅನುಮತಿಸುತ್ತದೆ ಎಂದು ತೀರ್ಪು ನೀಡಲಾಗಿದೆ.

2007ರ ಆಗಸ್ಟ್ ತಿಂಗಳಲ್ಲಿ ವಿಶಾಲ್ ಕುಮಾರ್ (27) ಮತ್ತು ಇಶಾ (26) ಎಂಬವರು ದೆಹಲಿಯಲ್ಲಿ ಮದುವೆಯಾಗಿದ್ದರು.

ಗಂಡ ಸಲ್ಲಿಸಿರುವ ದೂರಿನ ಪ್ರಕಾರ, 'ನಾವು ಕಾಶ್ಮೀರಕ್ಕೆ ಹನಿಮೂನ್‌ಗೆ ತೆರಳಿದ್ದ ಸಂದರ್ಭದಲ್ಲಿ ಆಕೆ ತೀರಾ ಅಶ್ಲೀಲವಾದ ಬಟ್ಟೆ ಧರಿಸಿದ್ದಳು. ಅದನ್ನು ಬದಲಾಯಿಸುವಂತೆ ನಾನು ಸೂಚಿಸಿದರೂ, ಅದನ್ನು ಆಕೆ ತಿರಸ್ಕರಿಸಿದ್ದಳು. ಅಲ್ಲದೆ, ತಾನು ಹೀಗೆ ಪಾರದರ್ಶಕ ಬಟ್ಟೆ ಧರಿಸಿರುವುದನ್ನು ಕನಿಷ್ಠ 50 ಮಂದಿ ನೋಡಬೇಕು ಎಂದು ಹರಿತ ಉತ್ತರವನ್ನು ನೀಡಿದ್ದಳು' ಎಂದಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಮನಮೋಹನ್ ಶರ್ಮಾ, ಗಂಡ ವಿಶಾಲ್ ಸಲ್ಲಿಸಿದ ಅರ್ಜಿಯನ್ನು ಮಾನ್ಯ ಮಾಡಿದರು. ಮಧುಚಂದ್ರದ ಹೊತ್ತಿನಿಂದ ಆಕೆ ಅಶ್ಲೀಲ ಎನಿಸುವ ಬಟ್ಟೆಗಳನ್ನು ಧರಿಸಿ ಗಂಡನಿಗೆ ಮಾನಸಿಕ ಹಿಂಸೆ ನೀಡಿದ್ದಾಳೆ. ಕ್ರೌರ್ಯ ಎನ್ನುವುದು ಕೇವಲ ದೈಹಿಕ ಎಂಬಷ್ಟಕ್ಕೇ ಸೀಮಿತವಲ್ಲ, ಮಾನಸಿಕ ಕಿರುಕುಳವೂ ಕ್ರೌರ್ಯವೇ ಎಂದರು.

ಆಕೆ ತನ್ನ ಹೆತ್ತವರ ಜತೆ ಸೇರಿಕೊಂಡು ಗಂಡ ಮತ್ತು ಆತನ ಮನೆಯವರಿಗೆ 'ಸರಿಯಾದ ಪಾಠ' ಕಲಿಸಲು ಪಿತೂರಿ ಮಾಡಿದ್ದಳು. ತನ್ನ ಗಂಡನಿಗೆ ಅಕ್ರಮ ಸಂಬಂಧವಿದೆ ಮತ್ತು ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಆಧಾರರಹಿತ ಆರೋಪಗಳನ್ನು ಮಾಡಿದ್ದು, ಅದನ್ನು ರುಜುವಾತು ಪಡಿಸಲು ವಿಫಲಳಾಗಿದ್ದಾಳೆ. ಫಲಪ್ರದ ವೈವಾಹಿಕ ಸಂಬಂಧಕ್ಕೆ ಅಗತ್ಯವಾಗಿರುವ ಪ್ರೀತಿ ಮತ್ತು ನಂಬಿಕೆಯ ಪ್ರಮುಖ ಅಂಶಗಳಿಲ್ಲದೆ ಒಂದೇ ಮನೆಯಲ್ಲಿ ಜೀವನ ಮಾಡುವುದು ಪ್ರಾಣಿಗಳಿಗಿಂತ ಹೀನಾಯ ಎನಿಸುತ್ತದೆ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಹೇಳಿದ್ದಾರೆ.

ಪತ್ನಿಯು ಮುಂಜಾನೆ ಹೊತ್ತಿಗೆಲ್ಲ ಲೈಂಗಿಕತೆಗೆ ಒತ್ತಾಯಿಸುತ್ತಿದ್ದಳು ಎಂದೂ ಗಂಡ ವಿಶಾಲ್ ತನ್ನ ಅರ್ಜಿಯಲ್ಲಿ ದೂರಿದ್ದರು. ಬೆಳ್ಳಂಬೆಳಗ್ಗೆ ಎಬ್ಬಿಸಿ, ದೈಹಿಕ ವಾಂಛೆ ಪೂರೈಸುವಂತೆ ಆಗ್ರಹಿಸುತ್ತಿದ್ದಳು. ನನ್ನ ಮತ್ತು ಕುಟುಂಬದ ವಿರುದ್ಧ ಪ್ರತೀಕಾರ ತೀರಿಸುವ ನಿಟ್ಟಿನಲ್ಲಿ ನನಗೆ ದೈಹಿಕ ಹಿಂಸೆಯನ್ನೂ ನೀಡಿದ್ದಾಳೆ. ಆಕೆಯ ಜತೆ ನನಗೆ ಬದುಕು ಸಾಗಿಸುವುದು ಸಾಧ್ಯವೇ ಇಲ್ಲ ಎಂದು ಹೇಳಿದ್ದರು.
ಇವನ್ನೂ ಓದಿ