ಜನ ಲೋಕಪಾಲ ಸಮಿತಿ ಸದಸ್ಯ ಶಾಂತಿಭೂಷಣ್ ಅವರ ನಕಲಿ ಸಿಡಿ ಪ್ರಕರಣದ ಕುರಿತು ಮುಕ್ತ ಹಾಗೂ ನ್ಯಾಯ ಸಮ್ಮತ ತನಿಖೆ ನಡೆಸುವುದಾಗಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಸೋಮವಾರ ಹೇಳಿದರು.
ಈ ಕುರಿತು ದೆಹಲಿ ಪೊಲೀಸರು ಭರವಸೆ ನೀಡಿದ್ದಾರೆ. ಸಿಡಿಯನ್ನು ಎರಡು ಪ್ರತ್ಯೇಕ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗುವುದು ಎಂದು ತಿಳಿಸಿದ ಅವರು, ಇದು ಆರೋಪ ಪ್ರತ್ಯಾರೋಪಗಳ ಕಾಲವಾಗಿದ್ದು, ಪ್ರತಿಷ್ಠೆಯೂ ಮುಖ್ಯವಾಗುತ್ತಿದೆ ಎಂಬ ಭಾವನೆ ಮೂಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಶಾಂತಿ ಭೂಷಣ್ ಅವರ ಪುತ್ರ ಪ್ರಶಾಂತ್ ಭೂಷಣ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹಾಗೂ ಶಾಂತಿ ಭೂಷಣ್ ಹಾಗೂ ಅಮರರ್ ಸಿಂಗ್ ಅವರ ನಡುವಿನ ಸಂಭಾಷಣೆಯ ಸಿಡಿ ಯನ್ನು ಸೃಷ್ಟಿಸಿ ನಾಗರಿಕ ಸಮಿತಿಯ ಸದಸ್ಯರ ಹೆಸರಿಗೆ ಮಸಿ ಬಳಿಯಲಾಗಿದೆ ಎಂದು ಆಪಾದಿಸಿದರು.