ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಂಧಿತ ಸುರೇಶ್ ಕಲ್ಮಾಡಿ ಕಾಂಗ್ರೆಸ್‌ನಿಂದ ಅಮಾನತು (Suresh Kalmadi | CWG Scam | Congress | UPA)
PTI
ಹಗರಣ ನಡೆದು ಇಷ್ಟು ಸುದೀರ್ಘ ಸಮಯದ ಬಳಿಕ ಕೊನೆಗೂ ಸಿಬಿಐ, ಕಾಮನ್ವೆಲ್ತ್ ಕ್ರೀಡಾ ಕೂಟ ಹಗರಣದ ಪ್ರಮುಖ ಆರೋಪಿ ಸುರೇಶ್ ಕಲ್ಮಾಡಿಯನ್ನು ಸೋಮವಾರ ಬಂಧಿಸಿರುವುದರೊಂದಿಗೆ, ಕಾಂಗ್ರೆಸ್ ಪಕ್ಷವು ಕೂಡ ಪಕ್ಷದಿಂದ ಅವರನ್ನು ಅಮಾನತುಗೊಳಿಸಿ, ಕಳಂಕದಿಂದ ದೂರವಾಗಲು ಪ್ರಯತ್ನಿಸಿದೆ.

ಹಿರಿಯ ನಾಯಕ ಎ.ಕೆ.ಆಂಟನಿ ನೇತೃತ್ವದ ಕಾಂಗ್ರೆಸ್ ಶಿಸ್ತು ಕ್ರಿಯಾ ಸಮಿತಿಯು ಪುಣೆಯ 67ರ ಹರೆಯದ ಕಾಂಗ್ರೆಸ್ ಲೋಕಸಭಾ ಸದಸ್ಯನನ್ನು ಅಮಾನತುಗೊಳಿಸುವ ನಿರ್ಧಾರ ಕೈಗೊಂಡಿತು.

ಕಲ್ಮಾಡಿ ಬಂಧನದಿಂದ ಪಕ್ಷಕ್ಕಾಗುವ ಹಾನಿಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಊಹಿಸಲಾಗುತ್ತಿದೆ.

ಮೇ 2009ರಲ್ಲಿ ಯುಪಿಎ-2 ಅಧಿಕಾರಕ್ಕೆ ಬಂದ ಬಳಿಕ ಅಮಾನತುಗೊಳ್ಳುತ್ತಿರುವ ಪ್ರಥಮ ಕಾಂಗ್ರೆಸ್ ಸಂಸದ ಕಲ್ಮಾಡಿ. ಇದಕ್ಕೆ ಮೊದಲು, ಆಂಧ್ರಪ್ರದೇಶದ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಕಾಂಗ್ರೆಸ್ ಪಕ್ಷವು ಅವರಿಗೆ ಶೋಕಾಸ್ ನೋಟೀಸ್ ನೀಡಿತ್ತಷ್ಟೇ. ಆದರೆ ಅವರೇ ಕಡಪ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷದಿಂದಲೇ ಹೊರಬಂದು ಬೇರೆ ಪಕ್ಷ ಕಟ್ಟಿದ್ದರು.

ಕಾಮನ್ವೆಲ್ತ್ ಕ್ರೀಡಾಕೂಟದ ತಯಾರಿ ಸಂದರ್ಭದಲ್ಲೇ ಕಲ್ಮಾಡಿ ಅವರ ಮೇಲೆ ಅವ್ಯವಹಾರದ ಆರೋಪಗಳು ಕೇಳಿಬಂದಾಗ ಕಳೆದ ವರ್ಷವೇ ಅವರನ್ನು ಕಾಂಗ್ರೆಸ್ ಸಮಸದೀಯ ಪಕ್ಷದ ಕಾರ್ಯದರ್ಶಿ ಹುದ್ದೆಯಿಂದ ಪಕ್ಷವು ತೆಗೆದು ಹಾಕಿತ್ತು. ಕ್ರೀಡಾಕೂಟ ಮುಗಿದ ಬಳಿಕ ಅವರನ್ನು ಸಿಡಬ್ಲ್ಯುಜಿ ಸಂಘಟನಾ ಸಮಿತಿಯಿಂದ ಕಿತ್ತು ಹಾಕಿತ್ತು.
ಇವನ್ನೂ ಓದಿ