ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೆಕ್ಸ್ ಬಾಂಬ್ ಬಿಪಾಷಾಗೆ ಅಮರ್ ಸಿಂಗ್ ಹೇಳಿದ್ದೇನು ಗೊತ್ತೇ? (Amar Singh | Bipasha Basu | Telephone Tapping | Jaya Prada)
ಸೆಕ್ಸ್ ಬಾಂಬ್ ಬಿಪಾಷಾಗೆ ಅಮರ್ ಸಿಂಗ್ ಹೇಳಿದ್ದೇನು ಗೊತ್ತೇ?
ನವದೆಹಲಿ, ಶನಿವಾರ, 14 ಮೇ 2011( 10:33 IST )
IFM
ಸಮಾಜವಾದಿ ಪಕ್ಷದ ಮಾಜಿ ನಾಯಕ, ಚತುರ ರಾಜಕಾರಣಿ ಅಮರ್ ಸಿಂಗ್ ಅವರ ಕದ್ದಾಲಿಸಿದ ದೂರವಾಣಿಯ ವಿವರಗಳನ್ನು ಪ್ರಕಟಿಸದಂತೆ ಇದ್ದ ತಡೆಯಾಜ್ಞೆ ತೆರವುಗೊಂಡಿದ್ದೇ ತಡ, ಒಂದಾದ ಮೇಲೊಂದರಂತೆ ಅಮರ ಕಹಾನಿಗಳು ಹೊರ ಬೀಳತೊಡಗಿದ್ದು, ಬಾಲಿವುಡ್ನ ಸೆಕ್ಸ್ ಬಾಂಬ್ ಬಿಪಾಷಾ ಬಸು ಹಾಗೂ ಕನಸು ಕಂಗಳ ಚೆಲುವೆ ಜಯಪ್ರದಾ ಅವರೊಂದಿಗೆ ನಡೆದಿದೆ ಎನ್ನಲಾದ ಮಾತುಕತೆಯ ವಿವರಗಳು ಈ ಅಮರ್ ಸಿಂಗ್ರ ಅಸಲಿ ಮುಖವನ್ನು ಬಯಲು ಮಾಡತೊಡಗಿದೆ.
ರಾಜಕಾರಣಿಗಳು, ನಟ-ನಟಿಯರು, ಉದ್ಯಮಿಗಳು, ಪತ್ರಕರ್ತರು, ಅಧಿಕಾರಿಗಳು, ನ್ಯಾಯಾಂಗದ ಹಿರಿಯರು ಮುಂತಾದವರೊಂದಿಗೆ ಅಮರ್ ನಡೆಸಿದ ಮಾತುಕತೆಗಳು ಅವರೆಷ್ಟು ಪ್ರಭಾವಿ ಎಂಬುದೆಲ್ಲ ಸಾಬೀತಾಗುತ್ತದೆ. ಮತ್ತು ಯಾರ ಜೊತೆಗಾದರೂ ಪರ್ಫೆಕ್ಟಾಗಿ ಡೀಲ್ ಕುದುರಿಸಬಲ್ಲ ರಾಜಕಾರಣಿಯಾಗಿರುವ ಅಮರ್, ದೊಡ್ಡವರು ಎಷ್ಟು ಸಣ್ಣ ವಿಷಯಗಳನ್ನೂ ಮಾತನಾಡುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.
ಬಿಪಾಷಾಳದು ಎನ್ನಲಾದ ಸ್ತ್ರೀ ಧ್ವನಿ ಮತ್ತು ಅಮರ್ ಸಿಂಗ್ ಧ್ವನಿ ಇರುವ ದೂರವಾಣಿ ಸಂಭಾಷಣೆಯಲ್ಲಿ, ಅವರಿಬ್ಬರೂ ತೀರಾ ಆಪ್ತ ಅಥವಾ 'ಅತಿ' ಆಪ್ತ ರೀತಿಯಲ್ಲಿ ಮಾತನಾಡುವ ತುಣುಕುಗಳಿವೆ. ಬಿಪಾಷಾಳದ್ದೆನ್ನಲಾದ ಧ್ವನಿಯು ಅಮರ್ ಸಿಂಗ್ ಅವರನ್ನು 'ಸ್ವೀಟೀ' ಅಂತ ಕರೆಯುವುದು ಅದರ ಹೊರತಾಗಿ ಅಸಭ್ಯ ಸಂಭಾಷಣೆಯೊಂದು ಇದೀಗ ಬಿಪಾಷಾಳ ಕಣ್ಣು ಕೆಂಪಗಾಗಿಸಿದೆ.
ನನ್ನನ್ನು ಜ್ಞಾಪಿಸಿಕೊಂಡಿದ್ದಕ್ಕೆ ಧನ್ಯವಾದ ಎಂದಾಗ ಬಿಪಾಷಾಳದ್ದೆನ್ನಲಾದ ಹೆಣ್ಣು ಧ್ವನಿ, ನಾನು ಯಾವತ್ತೂ ನಿನ್ನನ್ನು ಜ್ಞಾಪಿಸಿಕೊಳ್ಳುತ್ತಿದ್ದೇನೆ ಎನ್ನುತ್ತಾಳೆ. 'ನನ್ನಂಥ ಮುದುಕನನ್ನು ಕೂಡ?' ಎಂದು ಕೇಳುತ್ತಾನೆ ಆತ. 'ವಯಸ್ಸೆಲ್ಲಾ ದೊಡ್ಡ ಸಂಗತಿಯೇನಲ್ಲ' ಎನ್ನುತ್ತಾಳೆ ಆಕೆ. ಆಗ ಆತ, 'ಕಾಲುಗಳ ನಡುವೆ ಅದು ಮುಖ್ಯವಾಗುತ್ತದೆ' ಎಂಬ ಹೇಳಿಕೆ ನೀಡುತ್ತಾನೆ. ಆಗ ಆಕೆ ದೊಡ್ಡದಾಗಿ ನಗುತ್ತಾಳೆ.
ಜಯ ಪ್ರದಾ ಕಾಲುಗಳು ತುಂಬಾ ಇಷ್ಟ ಅಂತೆ.... ಇನ್ನೊಂದೆಡೆ, ಸಮಾಜವಾದಿ ಪಕ್ಷದ ನಾಯಕಿ ಜಯಪ್ರದಾ ಜೊತೆಗೆ ನಡೆಸಿದ ಆಪ್ತ ಮಾತುಕತೆಗಳೂ ಬಹಿರಂಗಗೊಂಡಿದ್ದು, ಅದರಲ್ಲಿ ಅವರಿಬ್ಬರೂ ತೀರಾ ಆಪ್ತರಂತೆ ಮಾತನಾಡಿಕೊಂಡಿದ್ದಾರೆ.
ನೀನೊಬ್ಬ ನನ್ನ ತುಂಬಾ ಒಳ್ಳೆಯ ಅನುಯಾಯಿ. ನಾನು ಹೇಳಿದಂತೆ ಕೇಳುತ್ತೀ ಎಂದು ಒಂದೆಡೆ ಹೇಳುವ ಅಮರ್ ಸಿಂಗ್, ಇನ್ನೊಂದೆಡೆ, 'ನಿನಗೆ ಗೊತ್ತು ನಿನ್ನ ಕಾಲುಗಳೆಂದರೆ ನನಗೆ ತುಂಬಾ ಇಷ್ಟ. ನೀನು ಅದನ್ನು ಕೂಡ ನನಗಾಗಿ ತುಂಬಾ ಚೆನ್ನಾಗಿ ಇಟ್ಟಿರುವೆ' ಎಂದು ಹೇಳುವ ಧ್ವನಿ ಇದೆ.
ಈ ಮುದ್ರಿತ ಧ್ವನಿಯನ್ನು ತಿದ್ದಲಾಗಿದೆ ಎನ್ನುತ್ತಾರೆ ಅಮರ್ ಸಿಂಗ್...
PTI
ಈ ದಾಖಲಿತ ಟೇಪುಗಳಲ್ಲಿ ತನ್ನ ಧ್ವನಿ ಇದೆ ಎಂಬುದನ್ನು ಒಪ್ಪಿಕೊಂಡಿರುವ ಅಮರ್ ಸಿಂಗ್, ಆದರೆ ಕೆಲವು ಧ್ವನಿಗಳನ್ನು ಅಲ್ಲಲ್ಲಿ 'ಕಟ್ ಎಂಡ್ ಪೇಸ್ಟ್' ಮಾಡಲಾಗಿದೆ ಎಂದು ಪ್ರತಿಕ್ರಿಸಿಯಿದ್ದಾರೆ. ಆದರೆ ತನ್ನ ಟೆಲಿಫೋನ್ ಮಾತುಕತೆಯನ್ನು ಕದ್ದಾಲಿಸಿ ರೆಕಾರ್ಡ್ ಮಾಡಿದ ದೂರವಾಣಿ ಕಂಪನಿ ವಿರುದ್ಧ ಯಾವುದೇ ಕೇಸು ದಾಖಲಿಸುವುದಿಲ್ಲ ಎಂದಿದ್ದಾರೆ ಅವರು.
ತನ್ನ ದೂರವಾಣಿಯನ್ನು ಅಕ್ರಮವಾಗಿ ಕದ್ದಾಲಿಸಲಾಗಿದ್ದು, ಅದು ಪ್ರಸಾರದಲ್ಲಿದೆ ಎಂದು ಆರೋಪಿಸಿ ಅಮರ್ ಸಿಂಗ್ ಅವರು 2006ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಅದರ ಪ್ರಸಾರಕ್ಕೆ, ಪ್ರಕಟಣೆಗೆ ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ವಿಧಿಸಿತ್ತು. ಬುಧವಾರ ಈ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿತ್ತು. ಹೀಗಾಗಿ ಟೇಪುಗಳ ಸಂಭಾಷಣೆ ಒಂದೊಂದೇ ಹೊರಬೀಳತೊಡಗಿವೆ.
ತಾಕತ್ತಿದ್ರೆ ಅದು ನಾನೂಂತ ಸಾಬೀತುಪಡಿಸಿ: ಬಿಪಾಷಾ ಈ ಟೇಪಿನಲ್ಲಿ ಇರುವ ಧ್ವನಿ ತನ್ನದು ಎಂದು ತಾಕತ್ತಿದ್ದರೆ ಯಾರಾದರೂ ಸಾಬೀತುಪಡಿಸಿ ಎಂದು ಸವಾಲು ಹಾಕಿದ್ದಾರೆ ಬಾಲಿವುಡ್ ಮಾದಕ ನಟಿ ಬಿಪಾಷಾ ಬಸು.
ದಯವಿಟ್ಟು ಮತ್ತೊಮ್ಮೆ ಈ ಸಂಭಾಷಣೆಗಳನ್ನು ಕಿವಿಗೊಟ್ಟು ಕೇಳಿ. ಆಗಲೂ ಅದು ನಾನೇ ಅಂತ ನೀವು ಯೋಚಿಸುತ್ತೀರೆಂದಾದರೆ, ಅದು ನಾನೇ ಅಂತ ಸಾಬೀತುಪಡಿಸಿ ತೋರಿಸಿ ಅಂತ ನಾನು ಬಹಿರಂಗವಾಗಿಯೇ ಸವಾಲು ಹಾಕುತ್ತಿದ್ದೇನೆ ಎಂದು ಟ್ವಿಟರ್ ಮೂಲಕ ಬಿಪಾಷಾ ಹೇಳಿದ್ದಾರೆ.
ಜಾನ್ ಅಬ್ರಹಾಂ ಜತೆಗಿನ 9 ವರ್ಷಗಳ ಬಿಪಾಷಾ ಪ್ರೇಮವು ಇತ್ತೀಚೆಗಷ್ಟೇ ಮುರಿದುಬಿದ್ದಿತ್ತು. ಸೆಲೆಬ್ರಿಟಿಗಳ ಜೀವನದಲ್ಲಿ ಗಾಳಿ ಮಾತುಗಳು ಸಾಮಾನ್ಯ ಆದರೆ, ಈ ಆರೋಪಗಳಂತೂ ಸಹಿಸಲು ಅಸಾಧ್ಯ ಎಂದಿದ್ದಾರೆ ಬಿಪಾಷಾ.
ಇದಲ್ಲದೆ, ತಾನೆಂದಿಗೂ ಫೋನ್ನಲ್ಲಿ ಅಮರ್ ಸಿಂಗ್ ಜತೆಗೆ ಮಾತುಕತೆ ನಡೆಸಲೇ ಇಲ್ಲ ಎಂದೂ ಬಿಪಾಷಾ ಹೇಳಿದ್ದಾರೆ.