ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಮಲೀಲಾ ಖಾಲಿ,ಖಾಲಿ...ಮಹಿಳೆಯರ ಉಡುಪಿನಲ್ಲಿದ್ದ ಬಾಬಾ! (Ramalila Ground | UPA | Ramdev | Arrest, hunger strike | Dehradun)
ಕಪ್ಪು ಹಣ ಭಾರತಕ್ಕೆ ವಾಪಸ್ ತರಬೇಕೆಂಬ ಹೋರಾಟದಲ್ಲಿ ನಿರತರಾಗಿದ್ದ ಯೋಗ ಗುರು ಬಾಬಾ ರಾಮದೇವ್ ಅವರ ಉಪವಾಸ ಅಡ್ಡಿ ಪಡಿಸಿರುವ ದೆಹಲಿ ಪೊಲೀಸರು ಭಾನುವಾರ ಬೆಳಿಗ್ಗೆ ಬಾಬಾ ಅವರನ್ನು ವಿಶೇಷ ವಿಮಾನದಲ್ಲಿ ಡೆಹ್ರಾಡೂನ್‌ಗೆ ಕರೆದೊಯ್ದು, ನಂತರ ಅವರು ಹರಿದ್ವಾರಕ್ಕೆ ಆಗಮಿಸಿದ್ದಾರೆ.

ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಶನಿವಾರ ತಡರಾತ್ರಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಸಾವಿರಾರು ಪೊಲೀಸರು ಏಕಾಏಕಿ ನುಗ್ಗಿ ಬಾಬಾ ಬೆಂಬಲಿಗರ ಮೇಲೆ ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ ಮಾಡಿ ಎಲ್ಲರನ್ನೂ ಚದರಿಸಿದ್ದರು. ಅಷ್ಟೇ ಅಲ್ಲ ರಾಮದೇವ್ ಅವರನ್ನು ವಶಕ್ಕೆ ತೆಗೆದುಕೊಂಡು ದೆಹಲಿಯ ಸಫ್‌ತರ್ ಜಂಗ್ ಠಾಣೆಯಲ್ಲಿ ಇರಿಸಿಕೊಂಡಿದ್ದರು.

ನಂತರ ಇಂದು ಬೆಳಿಗ್ಗೆ 11ಗಂಟೆಗೆ ವಿಶೇಷ ವಿಮಾನದಲ್ಲಿ ಕೆಲವೇ ಕೆಲವು ಆಯ್ದ ಅಧಿಕಾರಿಗಳು, ಹಿರಿಯ ರಾಜಕಾರಣಿಗಳು ಅವರನ್ನು ಡೆಹ್ರಾಡೂನ್‌ಗೆ ಕರೆದೊಯ್ದಿದ್ದಾರು. ನಂತರ ಕಾರಿನಲ್ಲಿ ಬಾಬಾ ಅವರು ಹರಿದ್ವಾರದ ಪತಂಜಲಿ ಯೋಗಪೀಠಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಯೋಗಪೀಠದಲ್ಲಿ ಬಾಬಾ ಅವರನ್ನು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಬರಮಾಡಿಕೊಂಡರು.

ಬಾಬಾ ಗುರುತು ಹಿಡಿಯಲು ಆಗಿಲ್ಲ!
ಯೋಗ ಗುರು ಬಾಬಾ ರಾಮದೇವ್ ಅವರು ಸದಾ ಖಾವಿ ವಸ್ತ್ರಧಾರಿಯಾಗಿಯೇ ಇರುತ್ತಿದ್ದರು. ಆದರೆ ಡೆಹ್ರಾಡೂನ್‌ನಲ್ಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಬಾಬಾ ಗುರುತು ಹಿಡಿಯಲು ಹಲವರಿಗೆ ಸಾಧ್ಯವಾಗಿಲ್ಲ. ಕಾರಣ ಏನಪ್ಪಾ ಅಂದ್ರೆ, ಬಾಬಾ ಶ್ವೇತವಸ್ತ್ರಧಾರಿಯಾಗಿದ್ದರು. ನಂತರ ಅವರು ಹರಿದ್ವಾರದ ಪತಂಜಲಿ ಯೋಗಪೀಠಕ್ಕೂ ಆಗಮಿಸಿದಾಗ ಅದೇ ಸ್ಥಿತಿ. ಕೂಡಲೇ ಅವರನ್ನು ಗುರುತಿಸಲು ಸಾಧ್ಯವಾಗಿಲ್ಲವಾಗಿತ್ತು. ಸದಾ ಖಾವಿಧಾರಿಯಾಗಿಯೇ ಇರುತ್ತಿದ್ದ, ಬಾಬಾ ಅವರಿಗೆ ಶ್ವೇತವಸ್ತ್ರ ಯಾಕೆ ನೀಡಲಾಯಿತು?ಇದು ಪೊಲೀಸರೇ ಧರಿಸಲು ಹೇಳಿದ್ದಾ?...ಹೀಗೆ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಪರಾರಿಯಾಗಲು ಯತ್ನಿಸಿದ್ದ ಬಾಬಾ ಮಹಿಳೆಯರ ಉಡುಪಿನಲ್ಲಿದ್ದರು!
ಬಾಬಾ ರಾಮದೇವ್ ಅವರನ್ನು ಬಂಧಿಸಲು ಆಗಮಿಸಿದ್ದ ಸಂದರ್ಭದಲ್ಲಿ ಅವರು ಮಹಿಳೆಯರ ಬಳಿ ಅಡಗಿದ್ದರು. ಅಷ್ಟೇ ಅಲ್ಲ ರಾಮದೇವ್ ಮಹಿಳೆಯರ ಉಡುಪಿನಲ್ಲಿ ಇದ್ದಿರುವುದಾಗಿ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಸುಮಾರು ಒಂದು ಗಂಟೆಗಳ ಕಾಲ ಮಹಿಳೆಯರ ನಡುವೆ ಅಡಗಿಕೊಂಡಿದ್ದರು. ರಾಮದೇವ್ ಅವರು ವೇಷ ಮರೆಸಿಕೊಂಡು, ಮಹಿಳೆಯರ ಉಡುಪಿ ಧರಿಸಿ ಪರಾರಿಯಾಗಲು ಯತ್ನಿಸಿದ್ದರು. ಆಗ ಅವರನ್ನು ಅದೇ ವಸ್ತ್ರದಲ್ಲಿಯೇ ಬಂಧಿಸಿ ಡೆಹ್ರಾಡೂನ್‌ಗೆ ಕರೆದೊಯ್ಯಲಾಗಿತ್ತು ಎಂದು ಗೃಹ ಸಚಿವಾಲಯದ ಮೂಲಗಳು ಸ್ಪಷ್ಟಪಡಿಸಿವೆ.

ರಾಮಲೀಲಾ ಮೈದಾನ ಖಾಲಿ...ಖಾಲಿ...
ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಲಕ್ಷಾಂತರ ಮಂದಿ ರಾಮಲೀಲಾ ಮೈದಾನದಲ್ಲಿ ಸಾಥ್ ನೀಡಿದ್ದರು. ಆದರೆ ಭಾನುವಾರ ಮಧ್ಯರಾತ್ರಿ 1-10ಕ್ಕೆ ಸಾವಿರಾರು ಪೊಲೀಸರು ಒಳನುಗ್ಗಿ ಬಾಬಾ ಸತ್ಯಾಗ್ರಹಕ್ಕೆ ಅಡ್ಡಿಪಡಿಸಿದ್ದಾರೆ. ರಾತ್ರೋರಾತ್ರಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ನೂರಾರು ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಇದೀಗ ರಾಮಲೀಲಾ ಮೈದಾನ ಖಾಲಿ, ಖಾಲಿಯಾಗಿದೆ. ಸತ್ಯಾಗ್ರಹ ಸ್ಥಳದಲ್ಲಿ ಅಶಾಂತಿ ವಾತಾವರಣ ಮೂಡಿದೆ. ಅಲ್ಲದೇ ಮೈದಾನದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಕಪ್ಪು ಹಣ ಭಾರತಕ್ಕೆ ವಾಪಸ್ ತರಬೇಕೆಂಬುದು ಸೇರಿದಂತೆ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಪ್ರತಿಭಟನೆ ನಡೆಸುತ್ತಿದ್ದ ಬಾಬಾ ಹೋರಾಟಕ್ಕೆ ಕೇಂದ್ರ ಸರಕಾರ ಅಡ್ಡಿಪಡಿಸಿರುವುದು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ನಡುರಾತ್ರಿಯಲ್ಲಿ ಪೊಲೀಸರು ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇದು ದೆಹಲಿ ಮತ್ತು ಕೇಂದ್ರ ಸರಕಾರದ ಸರ್ವಾಧಿಕಾರ ಧೋರಣೆ ಎಂದು ಬಿಜೆಪಿ ಮುಖಂಡರು ಸೇರಿದಂತೆ ಹಲವು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇವನ್ನೂ ಓದಿ