ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಣ್ಣೀರಿಟ್ಟ ಬಾಬಾ; ನನ್ನ ಎನ್‌ಕೌಂಟರ್ ಮಾಡಿ ಮುಗಿಸೋ ಷಡ್ಯಂತ್ರ (Ramdev alleges | conspiracy to kill | brutality | Ramlila Maidan | Haridwar)
PR
'ಶನಿವಾರದ ಮಧ್ಯರಾತ್ರಿ ನನ್ನ ಪಾಲಿಗೆ ಅತ್ಯಂತ ಕರಾಳ ರಾತ್ರಿ. ಮಕ್ಕಳು ಮಹಿಳೆಯರೆನ್ನದೆ ಸರಕಾರ ದೌರ್ಜನ್ಯ ನಡೆಸಿದೆ' ಎಂದು ಆಕ್ರೋಶ ವ್ಯಕ್ತಪಡಿಸಿರುವ ಯೋಗ ಗುರು ಬಾಬಾ ರಾಮದೇವ್, ಯಾವುದೇ ಕಾರಣಕ್ಕೂ ನನ್ನ ಉಪವಾಸ ಸತ್ಯಾಗ್ರಹ ನಿಲ್ಲುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ತನ್ನ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ. ಅಲ್ಲದೇ ತನ್ನನ್ನು ಎನ್‌ಕೌಂಟರ್ ಮಾಡಿ ಮುಗಿಸಲು ಕೇಂದ್ರ ಷಡ್ಯಂತ್ರ ರೂಪಿಸಿರುವುದಾಗಿ ಗಂಭೀರವಾಗಿ ಆರೋಪಿಸಿದರು.

ರಾಮಲೀಲಾ ಮೈದಾನದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದ ನಂತರ ಭಾನುವಾರ ವಿಶೇಷ ವಿಮಾನದಲ್ಲಿ ಡೆಹ್ರಾಡೂನ್‌ಗೆ ಆಗಮಿಸಿ ಅಲ್ಲಿಂದ ಹರಿದ್ವಾರದ ಪತಂಜಲಿ ಯೋಗಪೀಠಕ್ಕೆ ಆಗಮಿಸಿದ್ದ ಬಾಬಾ ಅವರು ಶನಿವಾರ ಮಧ್ಯರಾತ್ರಿ ನಡೆದ ಘಟನೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಅವರು, ರಾಮಲೀಲಾ ಮೈದಾನದಲ್ಲಿ ಸರಕಾರ ಒಂದು ಲಕ್ಷ ಜನರ ಮೇಲೆ ದೌರ್ಜನ್ಯ ಎಸಗಿದೆ. ಮಕ್ಕಳು, ಮಹಿಳೆಯರು ಎನ್ನದೇ ಪೊಲೀಸರು ಮನಬಂದಂತೆ ಥಳಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ಕಣ್ಣೀರಿಟ್ಟರು.

ಸರಕಾರದ ಯಾವುದೇ ಬೆದರಿಕೆಗೆ ಜಗ್ಗಲ್ಲ ಎಂದು ಸವಾಲು ಹಾಕಿರುವ ರಾಮದೇವ್, ಯಾವುದೇ ಕಾರಣಕ್ಕೂ ತನ್ನ ಹೋರಾಟ ನಿಲ್ಲಿಸಲ್ಲ ಎಂದರು. ಕೇಂದ್ರ ಸರಕಾರದ ಈ ದೌರ್ಜನ್ಯದ ವಿರುದ್ಧ ದೇಶಾದ್ಯಂತ ಹೋರಾಟ ನಡೆಸುವುದಾಗಿಯೂ ಈ ಸಂದರ್ಭದಲ್ಲಿ ಘೋಷಿಸಿದರು. ಕೇಂದ್ರ ಸರಕಾರ ಈ ದೌರ್ಜನ್ಯ ನಡೆಸುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲ್ಲಿಲ್ಲ ಎಂದರು.

ಮಧ್ಯರಾತ್ರಿ ಏಕಾಏಕಿ ಸಾವಿರಾರು ಪೊಲೀಸರು ಒಳನುಗ್ಗಿ ಮನಬಂದಂದೆ ಸತ್ಯಾಗ್ರಹಿಗಳನ್ನು ಥಳಿಸಿದ್ದರು. ಆ ಸಂದರ್ಭದಲ್ಲಿ ನಾನು ಎರಡು ಗಂಟೆಗಳ ಕಾಲ ಮಹಿಳೆಯರ ನಡುವೆ ಅಡಗಿಕೊಂಡಿದ್ದೆ. ಆಗ ನಾನೂ ಕೂಡ ಮಹಿಳೆಯರ ವೇಷ ಧರಿಸಿದ್ದೆ. ಇಲ್ಲದಿದ್ರೆ ನನ್ನ ಬಂಧಿಸಿ ಎನ್‌ಕೌಂಟರ್ ಮಾಡುವ ಸಂಚನ್ನು ಕೇಂದ್ರ ರೂಪಿಸಿತ್ತು ಎಂದು ಗಂಭೀರವಾಗಿ ದೂರಿದರು. ಮಹಿಳೆಯರ ಜೊತೆ ಮೈದಾನದಿಂದ ಹೊರಬರುತ್ತಿರುವ ಸಂದರ್ಭದಲ್ಲಿ ತನ್ನ ಬಂಧಿಸಿರುವುದಾಗಿ ಘಟನೆ ಬಗ್ಗೆ ವಿವರಿಸಿದರು.

ಕಪ್ಪು ಹಣದ ಬಗ್ಗೆ, ಭ್ರಷ್ಟಾಚಾರದ ವಿರುದ್ಧ ಮಾತನಾಡುವುದೇ ತಪ್ಪಾ? ನಾನೇನು ಅಪರಾಧಿಯೇ...ನನ್ನ ದೊಡ್ಡ ಅಪರಾಧಿಯಂತೆ ಪೊಲೀಸರು ಬಂಧಿಸಿ ಕೀಳುಮಟ್ಟದಲ್ಲಿ ನಡೆಸಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಉಪವಾಸ ಹಿಂಪಡೆಯುವಂತೆ ನನ್ನ ಮೇಲೆ ಸತತವಾಗಿ ಒತ್ತಡ ಹೇರಲಾಗಿತ್ತು. ಸರಕಾರ ನಮ್ಮ ಬೇಡಿಕೆಗಳಿಗೆ ಒಪ್ಪಿದ್ರೆ ನಾವು ಸತ್ಯಾಗ್ರಹ ನಡೆಸುತ್ತಿರಲಿಲ್ಲ. ಆದರೆ ಇದೆಲ್ಲವೂ ಕೇಂದ್ರ ಸಚಿವ ಕಪಿಲ್ ಸಿಬಲ್ ಕುತಂತ್ರ ನೀತಿಯಿಂದಾಗಿ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಯಿತು ಎಂದು ವಾಗ್ದಾಳಿ ನಡೆಸಿದರು.

ರಾಮಲೀಲಾ ಮೈದಾನದಲ್ಲಿ ಪೊಲೀಸರು ನಡೆಸಿದ ದೌರ್ಜನ್ಯ ನಿಜಕ್ಕೂ ತುರ್ತು ಪರಿಸ್ಥಿತಿಗಿಂತ ಕೆಟ್ಟ ಸ್ಥಿತಿಯದ್ದಾಗಿತ್ತು. ಕೇಂದ್ರ ಸರಕಾರ ಇಷ್ಟು ದೊಡ್ಡ ಮಟ್ಟದ ಪ್ರತಿಭಟನೆಯನ್ನು ಕೇಂದ್ರ ಸರಕಾರ ನಿರೀಕ್ಷಿಸಿರಲಿಲ್ಲವಾಗಿತ್ತು. ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವ ನನ್ನ ಬಾಯಿ ಮುಚ್ಚಿಸುವ ಕೆಲಸಕ್ಕೆ ಕೇಂದ್ರ ಮುಂದಾಗಿದೆ. ಒಂದು ವೇಳೆ ನನ್ನ ಜೀವಕ್ಕೆ ಏನಾದರೂ ಅಪಾಯವಾದಲ್ಲಿ ಅದಕ್ಕೆ ಪ್ರಧಾನಿ ಸಿಂಗ್ ಮತ್ತು ಸೋನಿಯಾಗಾಂಧಿಯೇ ನೇರ ಹೊಣೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಇವನ್ನೂ ಓದಿ