ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಓಟಿಗಾಗಿ ನೋಟು: ಸೋನಿಯಾ, ಪಿಎಂ ಬುಡಕ್ಕೆ ಬಿತ್ತು ಬಾಂಬ್ (Amar Singh | Ahmed Patel | Suhail Hindustani)
PTI
ಕಳೆದ 2008ರಲ್ಲಿ ಭಾರತ ಮತ್ತು ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಹಿನ್ನೆಲೆಯಲ್ಲಿ ಎಡಪಕ್ಷಗಳು ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿತ್ತು. ಕೇಂದ್ರ ಸರಕಾರ, ಸಂಸತ್ತಿನಲ್ಲಿ ವಿಶ್ವಾಸಮತ ಯಾಚನೆ ಪಡೆಯಲು ಸಂಸದರ ಓಲೈಕೆಗಾಗಿ ನಡೆದ ಓಟಿಗಾಗಿ ನೋಟು ಪ್ರಕರಣದಲ್ಲಿ ಬಂಧಿತ ಆರೋಪಿ ಸುಹೈಲ್, ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಮತ್ತು ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಕೂಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವುದು ಹಗರಣ ಸೋನಿಯಾ, ಪ್ರಧಾನಿ ಬುಡಕ್ಕೆ ಬಂದಂತಾಗಿದೆ.

ನನಗೆ ಯಾವುದನ್ನು ಮುಚ್ಚಿಡುವ ಅಗತ್ಯವಿಲ್ಲ. ಈ ಪ್ರಕರಣದಲ್ಲಿ ಅಮರ್ ಸಿಂಗ್ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ದೆಹಲಿ ಅಪರಾಧ ದಳದ ಪೊಲೀಸರಿಂದ ವಿಚಾರಣೆಗೊಳಪಟ್ಟ ಸುಹೈಲ್ ಹಿಂದೂಸ್ತಾನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಾಜಿ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್, ಈ ಪ್ರಕರಣದಲ್ಲಿ ಅಹ್ಮದ್ ಪಟೇಲ್ ಅವರನ್ನು ಬಳಸಿಕೊಂಡಿದ್ದಾರೆ. ಅಮರ್ ಸಿಂಗ್ ಮತ್ತು ಅಹ್ಮದ್ ಪಟೇಲ್ ಒಂದಾಗಿ ಕಾರ್ಯನಿರ್ವಹಿಸುತ್ತಿದ್ದರು. ನಾನು ಅವರಿಗೆ ನೆರವಾಗಿದ್ದೇನೆ. ಪ್ರಕರಣದಲ್ಲಿ ಯಾವುದೇ ಮುಚ್ಚಿಡುವಂತಹ ಸಂಗತಿಗಳಿಲ್ಲ. ಸಂಪೂರ್ಣವಾಗಿ ಸ್ಫಟಿಕದಂತೆ ನಿಚ್ಚಳವಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದ ಯುವ ವಿಭಾಗದ ಮಾಜಿ ಸದಸ್ಯ ಎಂದು ಹೇಳಿಕೊಳ್ಳುವ ಸುಹೈಲ್ ಹಿಂದೂಸ್ತಾನಿ, ಪ್ರಧಾನಿ ಮನಮೋಹನ್ ಸಿಂಗ್ ಆತ್ಮಿಯರಾಗಿರುವ ವ್ಯಕ್ತಿಗಳು ನನಗೆ ಕರೆ ನೀಡಿದ್ದರು ಎಂದು ಹೇಳಿಕೆ ನೀಡಿದ್ದಾನೆ.

ಅಹ್ಮದ್ ಪಟೇಲ್ ಸೇರಿದಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಪ್ತವಲಯದಲ್ಲಿರುವ ಕೆಲ ಪ್ರಮುಖ ಕಾಂಗ್ರೆಸ್ ನಾಯಕರ ಅಹ್ವಾನದ ಮೇರೆಗೆ ನಾನು ಅವರಿಗೆ ನೆರವಾಗಿದ್ದೇನೆ ಎಂದು ವಿವರಣೆ ನೀಡಿದ್ದಾರೆ.

ನನ್ನ ಮತ್ತು ಅಮರ್ ಸಿಂಗ್ ಅವರ ನಾರ್ಕೊ ಟೆಸ್ಟ್ ಮಾಡಿಸಿ.ಒಂದು ವೇಳೆ ಅಗತ್ಯವಾದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಾರ್ಕೊ ಟೆಸ್ಟ್‌ಗೆ ಒಳಪಡಿಸಬಹುದಾಗಿದೆ ಎಂದು ಹಿಂದೂಸ್ತಾನಿ ಕೇಂದ್ರ ಸರಕಾರಕ್ಕೆ ಸವಾಲೆಸೆದಿದ್ದಾರೆ.

ಅಮರ್ ಸಿಂಗ್ ಮಾಜಿ ಸಹಚರ ಸಂಜೀವ್ ಸೆಕ್ಸೆನಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ ನಂತರ,ಸೆಕ್ಸೆನಾ ಹೇಳಿಕೆಯ ಮೇರೆಗೆ ಸುಹೈಲ್ ಹಿಂದೂಸ್ತಾನಿ ಅವರನ್ನು ಬಂಧಿಸಲಾಗಿದೆ.

ಭಾರತ ಮತ್ತು ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಸಂದರ್ಭದಲ್ಲಿ ಎಡಪಕ್ಷಗಳು ಬೆಂಬಲ ಹಿಂಪಡೆದಿದ್ದರಿಂದ, ಕೇಂದ್ರ ಸರಕಾರ ವಿಶ್ವಾಸಮತ ಕೊರತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಸಂಸದ ಅಶೋಕ್ ಅರ್ಗಲ್, ಮಹಾವೀರ್ ಭಾಗೋರಾ ಮತ್ತು ಫಗ್ಗಾನ್ ಸಿಂಗ್ ಕುಲಸ್ತೆ ಅವರಿಗೆ ಸೆಕ್ಸೆನಾ, ಕಾನೂನುಬಾಹಿರವಾಗಿ ಲಂಚ ನೀಡಲು ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿತ್ತು.

2008ರ ಜುಲೈ22 ರಂದು ಲೋಕಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ, ಬ್ಯಾಗ್‌ಗಳಲ್ಲಿ ತುಂಬಿರುವ ಕೋಟಿ ಕೋಟಿ ರೂಪಾಯಿಗಳ ಕಂತೆಗಳನ್ನು ಸಂಸದರು ಬಹಿರಂಗವಾಗಿ ತೋರಿಸಿರುವ ಘಟನೆ ವರದಿಯಾಗಿತ್ತು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಮರ್ ಸಿಂಗ್, ಅಹ್ಮದ್ ಪಟೇಲ್, ಸುಹೈಲ್ ಹಿಂದೂಸ್ತಾನಿ