2008ರಲ್ಲಿ ಯುಪಿಎ ಸರಕಾರ ವಿಶ್ವಾಸ ಮತದ ವೇಳೆ ಬಚಾವ್ ಆಗಲು, ಬಿಜೆಪಿ ಸಂಸದರಿಗೆ ಲಂಚ ನೀಡುವಂತೆ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ತಮಗೆ ಹಣ ನೀಡಿದ್ದರು ಎಂದು ಬಂಧಿತ ಸಂಜೀವ್ ಸಕ್ಸೇನಾ ಹಾಗೂ ಸುಹೇಲ್ ಹಿಂದೂಸ್ತಾನಿ ಹೇಳಿಕೆ ನೀಡಿದ್ದರು.
ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಿಂದ ತಲೆ ತಪ್ಪಿಸಿಕೊಂಡಿದ್ದ ಅಮರ್ ಸಿಂಗ್ ದೆಹಲಿಯ ಕ್ರೈಂ ಬ್ರಾಂಚ್ ಪೊಲೀಸ್ ಠಾಣೆಗೆ ಶುಕ್ರವಾರ ವಿಚಾರಣೆಗೆ ಹಾಜರಾದರು.
ಬಂಧಿತ ಸುಹೈಲ್ ಹಿಂದುಸ್ತಾನಿ ವಿಚಾರಣೆ ಸಂದರ್ಭದಲ್ಲಿ ನೀಡಿದ ಮಾಹಿತಿಯ ಆಧಾರದ ಮೇಲೆ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಅಮರ್ ಸಿಂಗ್ ಅವರ ವಿಚಾರಣೆಗಾಗಿ 12 ಅಂಶಗಳ ಪ್ರಶ್ನೆಗಳನ್ನು ತಯಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಓಟಿಗಾಗಿ ನೋಟು ಪ್ರಕರಣದಲ್ಲಿ ಬಂಧಿತ ಆರೋಪಿ ಸುಹೈಲ್, ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಮತ್ತು ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಕೂಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.