ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಾಮಾಣಿಕ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆಯೇ: ಹಜಾರೆ ಪ್ರಶ್ನೆ (Lokpal Bill | Anna Hazare Slamming PM)
PTI
ಉದ್ದೇಶಿತ ಲೋಕಪಾಲ ವ್ಯಾಪ್ತಿಯಿಂದ ಪ್ರಧಾನಿಯನ್ನು ಹೊರಗಿಡಬೇಕು ಎಂದು ಹೇಳಿಕೆ ನೀಡಿರುವ ಮನಮೋಹನ್ ಸಿಂಗ್ ಅವರ ನಿಲುವು 'ದುರದೃಷ್ಟಕರ' ಸಂಗತಿ. ಪ್ರಾಮಾಣಿಕ ವ್ಯಕ್ತಿ ಸುಳ್ಳು ಹೇಳುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.

ಲೋಕಪಾಲ ಮಸೂದೆ ಬಗ್ಗೆ ಸರಕಾರದ ಉದ್ದೇಶವೇನು? ಸಶಕ್ತ ಲೋಕಪಾಲ ಮಸೂದೆಯನ್ನು ಮಂಡಿಸಲು ಅನುಮತಿ ನೀಡದಿದ್ದಲ್ಲಿ, ಜೈಲಿಗೆ ಕೂಡಾ ಹೋಗಲು ಸಿದ್ಧ ಎಂದು ಹಜಾರೆ ಘೋಷಿಸಿದ್ದಾರೆ.

ಜಂತರ್ ಮಂತರ್‌ನಲ್ಲಿಯೇ ಅಮರಣ ನಿರಶನ ಸತ್ಯಾಗ್ರಹ ನಡೆಸಬೇಕು ಎನ್ನುವುದಕ್ಕೆ ತಾವು ಹೆಚ್ಚು ಒತ್ತು ನೀಡುವುದಿಲ್ಲ. ಯಾಕೆಂದರೆ, ನಿರಶನ ಸ್ಥಳಕ್ಕಿಂತ ಲೋಕಪಾಲ ಮಸೂದೆ ಮಹತ್ವದ್ದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಜಾರೆ, ಲೋಕಪಾಲ ವ್ಯಾಪ್ತಿಯಿಂದ ಪ್ರಧಾನಿಯನ್ನು ಹೊರಗಿಡಬೇಕು ಎನ್ನುವ ಮನಮೋಹನ್ ಸಿಂಗ್ ಅವರ ಹೇಳಿಕೆಗೆ ಬುದ್ದಿಜೀವಿಗಳು, ಸಾಹಿತಿಗಳು ಮಾನವ ಹಕ್ಕುಗಳ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಧಾನಿಯವರ ಹೇಳಿಕೆ ದುರದೃಷ್ಟಕರ. ಇವತ್ತಿಗೂ, ದೇಶದ ಜನತೆ ಮತ್ತು ನಾನು ಕೂಡಾ ನಮ್ಮ ಪ್ರಧಾನಿ ಪ್ರಾಮಾಣಿಕ ಹಾಗೂ ಭ್ರಷ್ಟರಲ್ಲ ಎಂದು ಭಾವಿಸಿದ್ದೇವು ಎಂದು ಹಜಾರೆ ವ್ಯಂಗ್ಯವಾಡಿದ್ದಾರೆ.

ನಮ್ಮ ಹೋರಾಟ ಸಂಸತ್ತಿನ ವಿರುದ್ಧವಲ್ಲ. ಆದರೆ, ಸರಕಾರದ ವಿರುದ್ಧವಿದೆ. ನಾನು ಪ್ರಧಾನಿಯವರಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ತದ ನಂತರವೂ ಪ್ರಧಾನಿ ಇಂತಹ ಹೇಳಿಕೆ ನೀಡುತ್ತಿರುವುದು ದೌರ್ಭಾಗ್ಯದ ಸಂಗತಿಯಾಗಿದೆ. ಸರಕಾರದಲ್ಲಿರುವ ಬಹಳಷ್ಟು ಜನ ಸುಳ್ಳು ಹೇಳುತ್ತಾರೆ. ಪ್ರಧಾನಿ ಒಳ್ಳೆಯ ವ್ಯಕ್ತಿ. ಅಂತಹ ವ್ಯಕ್ತಿಯೇ ಸುಳ್ಳು ಹೇಳಿದಲ್ಲಿ ದೇಶವನ್ನು ಆ ದೇವರೇ ಕಾಪಾಡಬೇಕು ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಂದು ಅಂಶಗಳನ್ನು ಪರಿಶೀಲಿಸಿದ ನಂತರ ಪ್ರಧಾನಿಯನ್ನು ಲೋಕಪಾಲ ವ್ಯಾಪ್ತಿಯೊಳಗೆ ತರುವುದು ಸೂಕ್ತವಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ನಿನ್ನೆ ಹೇಳಿಕೆ ನೀಡಿದ್ದರು. ಆದರೆ, ಇದಕ್ಕಿಂತ ಮೊದಲು ಪ್ರಧಾನಿಯನ್ನು ಲೋಕಪಾಲ ವ್ಯಾಪ್ತಿಗೊಳಪಡಿಸಬೇಕು ಎಂದು ಮನಮೋಹನ್ ಸಿಂಗ್ ಹೇಳಿಕೆ ನೀಡಿದ್ದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಲೋಕಪಾಲ ಮಸೂದೆ, ಅಣ್ಣಾ ಹಜಾರೆ, ಪ್ರಧಾನಿ