ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೂ ಹಗರಣ: ಡಿಎಂಕೆ ವಿರುದ್ಧ ಸಿಎಂ ಜಯಲಲಿತಾ ಸಮರ (M Karunanidhi | M K Alagiri | Land grabbing | Jayalalithaa)
PTI
ಭೂ ಹಗರಣಗಳ ವಿರುದ್ಧ ಸಮರ ಸಾರಿರುವ ಮುಖ್ಯಮಂತ್ರಿ ಜೆ.ಜಯಲಲಿತಾ ನೇತೃತ್ವದ ಸರಕಾರ, ಸರಕಾರದ ವಿರುದ್ಧ ಪ್ರತಿಭಟನೆಗಿಳಿದಿರುವ ಪಂಚಭಾಷಾ ತಾರೆ ಹಾಗೂ ಡಿಎಂಕೆ ಸದಸ್ಯೆ ಖುಷ್ಬೂ ಅವರನ್ನು ಈಗಾಗಲೇ ಬಂಧಿಸಿದೆ. ಇದೀಗ, ಮತ್ತೆ ಡಿಎಂಕೆ ಶಾಸಕರೊಬ್ಬರನ್ನು ಬಂಧಿಸಿರುವುದು ಡಿಎಂಕೆ ಪಾಳಯದಲ್ಲಿ ಆಕ್ರೋಶ ಮೂಡಿಸಿದೆ.

ಅನಾಮಿಕರೊಬ್ಬರು ನೀಡಿದ ದೂರಿನ ಮೇರೆಗೆ ಡಿಎಂಕೆ ಶಾಸಕ ರಂಗನಾಥನ್ ಅವರನ್ನು ಇಂದು ಬೆಳಿಗ್ಗೆ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

PTI
ಡಿಎಂಕೆ ಪಕ್ಷದ ಹಿರಿಯ ನಾಯಕ ವೀರಪಾಂಡಿ ಎಸ್.ಅರ್ಮುಗಂ, ಕೇಂದ್ರ ಸಚಿವ ಎಂ.ಕೆ. ಅಳಗಿರಿ ನಿಕಟವರ್ತಿ ಚೆಪಾಕ್ ವಿಧಾನಸಭಾ ಕ್ಷೇತ್ರದ ಶಾಸಕ ಅನ್ಬಾಝಾಗನ್ ಅವರನ್ನು ಭೂ ಹಗರಣ ಆರೋಪಗಳ ಮೇಲೆ ಈಗಾಗಲೇ ಬಂಧಿಸಲಾಗಿದೆ.

ಮುಖ್ಯಮಂತ್ರಿ ಜಯಲಲಿತಾ ನೇತೃತ್ವದ ಸರಕಾರ, ಡಿಎಂಕೆ ಅವಧಿಯಲ್ಲಿ ನಡೆದ ಭೂ ಹಗರಣಗಳ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದೆ ಎನ್ನಲಾಗಿದೆ.

ಡಿಎಂಕೆ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ, ಜಯಲಲಿತಾ ದ್ವೇಷದ ರಾಜಕಾರಣ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಆದರೆ, ಕರುಣಾನಿಧಿ ಆರೋಪಗಳನ್ನು ತಳ್ಳಿಹಾಕಿದ ಜಯಲಲಿತಾ, ರಾಜಕೀಯದಿಂದ ದೂರವಿರುವ ಪ್ರಾಮಾಣಿಕ ದೂರುಗಳ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸರಕಾರ ಡಿಎಂಕೆ ಸದಸ್ಯರ ವಿರುದ್ಧ ಅನಗತ್ಯವಾಗಿ ಭೂಹಗರಣಗಳ ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಆರೋಪಿಸಿ ಡಿಎಂಕೆ ಪಕ್ಷದ ಕಾರ್ಯಕರ್ತರು ಸೋಮವಾರದಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ಮಾಜಿ ಉಪಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಕೂಡಾ ಪೊಲೀಸರು ಬಂಧಿಸಿದ್ದು, ನಂತರ ಬಿಡುಗಡೆ ಮಾಡಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಎಂಕರುಣಾನಿಧಿ, ಎಂಕೆಅಳಗಿರಿ, ಭೂ ಹಗರಣ, ಜಯಲಲಿತಾ