ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಲ್ಮಾಡಿ ನೇಮಿಸಿದ್ದು ಎನ್‌ಡಿಎ: ಸುಳ್ಳು ಹೇಳಿದ ಪ್ರಧಾನಿ ಕಚೇರಿ! (Sunil Dutt's letter | Nails | PMO's lie | Kalmadi appointment)
ಕಾಮನ್ವೆಲ್ತ್ ಗೇಮ್ಸ್ ಸಂಘಟನಾ ಸಮಿತಿ ಮುಖ್ಯಸ್ಥರಾಗಿ ಸುರೇಶ್ ಕಲ್ಮಾಡಿಯನ್ನು ನೇಮಿಸಿದ್ದು ಎನ್‌ಡಿಎ ಸರಕಾರ ಎಂಬ ಪ್ರಧಾನಮಂತ್ರಿ ಕಚೇರಿಯ ಹೇಳಿಕೆಯೇ ಸುಳ್ಳು ಎಂಬುದು ಸಾಬೀತಾಗಿದೆ. ಈಗಾಗಲೇ ಸಿವಿಸಿ ನೇಮಕ ವಿವಾದಕ್ಕೆ ಸಂಬಂಧಿಸಿದಂತೆ, ಪಿ.ಜೆ.ಥಾಮಸ್ ಮೇಲೆ ಭ್ರಷ್ಟಾಚಾರ ಪ್ರಕರಣ ದಾಖಲಾಗಿರುವುದು ತನಗೆ ಗೊತ್ತೇ ಇರಲಿಲ್ಲ ಎಂದು ಸುಳ್ಳು ಹೇಳಿ ನಗೆಪಾಟಲಿಗೀಡಾಗಿದ್ದ ಯುಪಿಎ ಸರಕಾರಕ್ಕೆ ಈಗ ಮತ್ತೊಂದು ಮುಖಭಂಗವಾದಂತಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರದಲ್ಲಿದ್ದಾಗ, ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯದ ಒಪ್ಪಂದಕ್ಕೆ ಸಹಿ ಹಾಕಿದ್ದು, ಕಲ್ಮಾಡಿ ನೇಮಕದಲ್ಲಿ ನಮ್ಮ ಯಾವುದೇ ಕೈವಾಡವಿಲ್ಲ ಎಂದು ಪಿಎಂಒ ಅಧಿಕಾರಿಗಳು ಸೋಮವಾರ ಹೇಳಿದ್ದರು. ಆದರೆ ಯುಪಿಎ ಸರಕಾರದ ಮಾಜಿ ಸಚಿವರೊಬ್ಬರು ಬರೆದಿರುವ ಪತ್ರವು ಪ್ರಧಾನಿ ಕಚೇರಿಯ ಈ ಸುಳ್ಳನ್ನು ಬಯಲು ಮಾಡಿದೆ.

2004ರ ಅಕ್ಟೋಬರ್ 25 ರಂದು ಅಂದಿನ ಕ್ರೀಡೆ ಮತ್ತು ಯುವಜನ ಖಾತೆ ಸಚಿವರಾಗಿದ್ದ ಸುನಿಲ್‌ ದತ್‌ ಅವರನ್ನು ಸಂಘಟನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲು ಸಚಿವರ ಮಂಡಳಿಯೊಂದು ನಿರ್ಣಯ ಕೈಗೊಂಡಿರುವುದಕ್ಕೆ ಸಂಬಂಧಿಸಿದ ದಾಖಲೆಯೊಂದು ಹೆಡ್‌ಲೈನ್ಸ್‌ ಟುಡೇ ಚಾನೆಲ್‌ಗೆ ದೊರೆತಿದೆ.

ಪ್ರಧಾನಿ ಮನಮೋಹನ ಸಿಂಗ್‌ ಅವರು ಕೂಡ ಈ ಸಚಿವರ ಮಂಡಳಿಯಲ್ಲಿದ್ದರು. ಆನಂತರ ಸುರೇಶ್‌ ಕಲ್ಮಾಡಿ ಅವರನ್ನು ಕಾಮನ್‌ವೆಲ್ತ್‌ ಕ್ರೀಡಾಕೂಟ ಸಂಘಟನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲು ನಿರ್ಧರಿಸಲಾಯಿತು. ಈ ಕುರಿತು ಸ್ವತಃ ದಿವಂಗತ ಸುನಿಲ್‌ ದತ್‌ ಅವರು ಪ್ರಧಾನಿ ಮನಮೋಹನ ಸಿಂಗ್‌ ಅವರಿಗೆ ಪತ್ರ ಬರೆದ ವಿಷಯವೂ ಬಯಲಾಗಿದೆ.

ಮನಮೋಹನ ಸಿಂಗ್‌ ಅವರಿಗೆ ಸುನಿಲ್‌ ದತ್‌ 2004ರ ನವೆಂಬರ್ 14ರಂದು ಬರೆದಿರುವ ಪತ್ರದಲ್ಲಿ, ಸಚಿವರ ಮಂಡಳಿಯ ನಿರ್ಧಾರವನ್ನು ತಿದ್ದುಪಡಿ ಮಾಡುವ ಮತ್ತು ಕಲ್ಮಾಡಿಯನ್ನು ಮುಖ್ಯಸ್ಥರನ್ನಾಗಿ ನೇಮಿಸುವ ನಿರ್ಧಾರ ಕೈಗೊಂಡ ಬಳಿಕ, ಸಭೆಯ ನಡಾವಳಿಯನ್ನು ತಿದ್ದುಪಡಿ ಮಾಡಬೇಕಾಗುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕಾಮನ್ವೆಲ್ತ್ ಗೇಮ್ಸ್, ಸಂಘಟನಾ ಸಮಿತಿ, ಸುರೇಶ್ ಕಲ್ಮಾಡಿ, ಸುಳ್ಳು ಹೇಳಿದ ಪ್ರಧಾನಿ ಕಚೇರಿ